ETV Bharat / bharat

ರಂಗೇರಿದ ಕೇರಳ ವಿಧಾನಸಭಾ ಚುನಾವಣೆ: ಐವರು ಸಚಿವರನ್ನು ಕಣಕ್ಕಿಳಿಸದ ಸಿಪಿಎಂ! - ಕೇರಳ ವಿಧಾನಸಭಾ ಚುನಾವಣೆ 2021

ಕೇರಳ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಬಾರಿ ಚುನಾವಣೆಯನ್ನು ಗೆಲ್ಲಲು ಎಲ್ಲ ಪಕ್ಷಗಳು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ಆದ್ರೆ ಸಿಪಿಎಂ ಮಾತ್ರ ಹೊಸ ತಂತ್ರ ಹೆಣೆಯುತ್ತಿದೆ.

5 ministers not to contest elections  Kerala elections updates  CPM state secretariat  Thomas Isaac  G Sudhakaran  C Raveendranath'  EP Jayarajan  AK Balan  Pinarayi Vijayan  ಐವರು ಸಚಿವರನ್ನು ಕಣಕ್ಕಿಳಿಸದ ಸಿಪಿಎಂ  ಐವರು ಸಚಿವರನ್ನು ಕಣಕ್ಕಿಳಿಸದ ಸಿಪಿಎಂ ಸುದ್ದಿ,  ಕೇರಳ ವಿಧಾನಸಭಾ ಚುನಾವಣೆ  ಕೇರಳ ವಿಧಾನಸಭಾ ಚುನಾವಣೆ 2021  ಕೇರಳ ವಿಧಾನಸಭಾ ಚುನಾವಣೆ 2021 ಸುದ್ದಿ
ಕೇರಳ ವಿಧಾನಸಭಾ ಚುನಾವಣೆ
author img

By

Published : Mar 5, 2021, 7:15 AM IST

ತಿರುವನಂತಪುರಂ: ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಕಾರ್ಯತಂತ್ರ ರೂಪಿಸುತ್ತಿದ್ದು, ಸಿಪಿಎಂ ತನ್ನ ಐವರು ಸಚಿವರನ್ನು ಚುನಾವಣೆಗೆ ಸ್ಪರ್ಧಿಸದಂತೆ ನೋಡಿಕೊಳ್ಳುತ್ತಿದೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಐವರು ಸಚಿವರು ಸ್ಪರ್ಧಿಸುವ ಅಗತ್ಯವಿಲ್ಲ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ನಿರ್ಧರಿಸಿದೆ.

ಥಾಮಸ್ ಐಸಾಕ್, ಜಿ ಸುಧಾಕರನ್, ಸಿ ರವೀಂದ್ರನಾಥ್, ಇಪಿ ಜಯರಾಜನ್ ಮತ್ತು ಎಕೆ ಬಾಲನ್ ಸೇರಿದಂತೆ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಸಿಪಿಎಂ ತಡೆಯೊಡ್ಡಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಸಂಪುಟದಲ್ಲಿ ಐವರನ್ನು ಹೊರತು ಪಡಿಸಿ ಇತರರು ಕಣಕ್ಕೆ ಇಳಿಯುವ ಸಾಧ್ಯತೆ ಇದೆ. 14 ಜಿಲ್ಲೆಗಳಲ್ಲಿ 140 ಸದಸ್ಯರ ಕೇರಳ ವಿಧಾನಸಭೆಯ ಚುನಾವಣೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ನಡೆಯಲಿದೆ.

14 ನೇ ಕೇರಳ ವಿಧಾನಸಭೆಯ ಅಧಿಕಾರಾವಧಿ 2021 ರ ಜೂನ್ 1 ರಂದು ಮುಕ್ತಾಯಗೊಳ್ಳಲಿದೆ. ಒಟ್ಟು 2,67,88,268 ಮತದಾರರು ಕೇರಳದಲ್ಲಿ 15 ನೇ ವಿಧಾನಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ವಿಧಾನಸಭೆ ಚುನಾವಣೆ 2021 ಕ್ಕೆ ಕೇರಳದ ಮತಗಟ್ಟೆಗಳ ಸಂಖ್ಯೆಯನ್ನು 21,498 ರಿಂದ 40,771 ಕ್ಕೆ ವಿಸ್ತರಿಸಲಾಗಿದೆ.

ಮೇ 2 ರಂದು ಮತ ಎಣಿಕೆ ನಡೆಯಲಿದೆ. ಆಯೋಗದ ಪ್ರಕಾರ 140 ವಿಧಾನಸಭಾ ಸ್ಥಾನಗಳಲ್ಲಿ 14 ಸ್ಥಾನಗಳನ್ನು ಎಸ್‌ಸಿ ವರ್ಗಕ್ಕೆ ಮತ್ತು ಎರಡು ಸ್ಥಾನಗಳನ್ನು ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.

2016 ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ (ಎಂ) ನೇತೃತ್ವದ ಲೆಫ್ಟ್​ ಡೆಮಾಕ್ರಟಿಕ್ ಫ್ರಂಟ್​​ನ (ಎಲ್‌ಡಿಎಫ್) 140 ಸದಸ್ಯರ ವಿಧಾನಸಭೆಯಲ್ಲಿ 91 ಸ್ಥಾನಗಳನ್ನು ಗಳಿಸಿತು. ನೆಮೊಮ್ ಕ್ಷೇತ್ರದಲ್ಲಿ ಒ.ರಾಜಗೋಪಾಲ್ ಸ್ಥಾನವನ್ನು ಗೆದ್ದ ನಂತರ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆಯನ್ನ ಈ ರಾಜ್ಯದಲ್ಲಿ ತೆರೆದಿತ್ತು.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಒಕ್ಕೂಟವು 20 ಸಂಸದೀಯ ಕ್ಷೇತ್ರಗಳಲ್ಲಿ 19 ರಲ್ಲಿ ಗೆಲುವಿನೊಂದಿಗೆ ಗಮನಾರ್ಹ ಜಯ ದಾಖಲಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.