ETV Bharat / bharat

ದಂತೇವಾಡದಲ್ಲಿ 5 ಕೆಜಿ ತೂಕದ ಟಿಫಿನ್‌ ಬಾಂಬ್‌ ವಶ: ಅನಾಹುತ ತಪ್ಪಿಸಿದ ಭದ್ರತಾ ಪಡೆ

ಸಿಆರ್‌ಪಿಎಫ್‌ನ 231ನೇ ಬೆಟಾಲಿಯನ್‌ ಛತ್ತೀಸ್‌ಗಢದ ದಂತೇವಾಡ ನಕ್ಸಲ್‌ ಪ್ರದೇಶದಲ್ಲಿ ತೀವ್ರ ಶೋಧಕಾರ್ಯ ನಡೆಸಿ 5 ಕೆಜಿ ತೂಕದ ಟಿಫಿನ್‌ ಬಾಂಬ್‌ ವಶಪಡಿಸಿಕೊಂಡಿದೆ. ಬಳಿಕ ಅದನ್ನು ನಿಷ್ಕ್ರಿಯಗೊಳಿಸಲಾಗಿದೆ.

5-kg tiffin bomb recovered in Chhattisgarh's Dantewada
ಛತ್ತೀಸ್‌ಗಢದ ದಂತೇವಾಡದಲ್ಲಿ ಸಿಆರ್‌ಪಿಎಫ್‌ ಕಾರ್ಯಾಚರಣೆ; 5 ಕೆಜಿ ತೂಕದ ಟಿಫಿನ್‌ ಬಾಂಬ್‌ ವಶ
author img

By

Published : Aug 30, 2021, 11:18 AM IST

ದಂತೇವಾಡ: ಛತ್ತೀಸ್‌ಗಢದ ಜಗರ್‌ಗುಂಡ ಮತ್ತು ದಂತೇವಾಡ ಗಡಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಆರ್‌ಪಿಎಫ್‌ನ 231ನೇ ಬೆಟಾಲಿಯನ್‌ 5 ಕೆಜಿ ತೂಕದ ಟಿಫಿನ್‌ ಬಾಂಬ್‌ ವಶಪಡಿಸಿಕೊಂಡಿದೆ.

ಕಮಾಂಡೆಂಟ್‌ ಸುರೇಂದ್ರ ಸಿಂಗ್‌ ಅವರ ಸೂಚನೆ ಮೇರೆಗೆ ನಿನ್ನೆ ನಕ್ಸಲ್‌ ಪ್ರದೇಶದಲ್ಲಿ ಶೋಧಕಾರ್ಯ ನಡೆಸಿದ್ದ ಸೇನೆ ಸ್ಫೋಟಕವನ್ನು ವಶಕ್ಕೆ ಪಡೆದುಕೊಂಡಿದೆ. ಯಾವುದೇ ರೀತಿಯ ಪ್ರಾಣಹಾನಿ ಹಾಗೂ ಆಸ್ತಿ-ಪಾಸ್ತಿಗೆ ಹಾನಿಯಾಗದ ರೀತಿಯಲ್ಲಿ ಬಾಂಬ್‌ ಅನ್ನು ನಿಷ್ಕ್ರಿಯಗೊಳಿಸಲಾಗಿದೆ.

ಭಾರಿ ಹಾನಿ ಮಾಡುವ ಉದ್ದೇಶದಿಂದ ಬಾಂಬ್‌ ಅನ್ನು ನೆಲದಡಿ ಇಡಲಾಗಿತ್ತು. ಸಿಆರ್‌ಪಿಎಫ್‌ನ 231ನೇ 2 ಬೆಟಾಲಿಯನ್‌ಗಳು (ಇ ಮತ್ತು ಜಿಯ231, ಜಿಯ165 ಬೆಟಾಲಿಯನ್‌) ಕೊಂಡಸಾನ್ವಾಲಿ ಕ್ಯಾಂಪ್‌ನಿಂದ ನಾಗ ಟೆಕ್ರಿಗೆ ಹೋಗುವ ಮಾರ್ಗದಲ್ಲಿ ಶೋಧ ಕಾರ್ಯಾಚರಣೆಯಲ್ಲಿದ್ದಾಗ ಈ ಸ್ಫೋಟಕ ಪತ್ತೆಯಾಗಿದೆ.

ಕಳೆದೆರಡು ವರ್ಷಗಳಲ್ಲಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ನಡೆದ ಎನ್ಕೌಂಟರ್‌ಗಳಲ್ಲಿ ನಕ್ಸಲರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿದ್ದು ಕಂಡುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.