ETV Bharat / bharat

5 ಕೆಜಿ ತೂಕದ ಐಇಡಿ ಪತ್ತೆ ಹಚ್ಚಿ, ಉಗ್ರರ ಸಂಚು ವಿಫಲಗೊಳಿಸಿದ ಭದ್ರತಾ ಪಡೆ - ಕೇಂದ್ರೀಯ ಮೀಸಲು ಪೊಲೀಸ್ ಪಡೆ ಜಮ್ಮು ಕಾಶ್ಮೀರದಲ್ಲಿ ಕಾರ್ಯಾಚರಣೆ

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ರೂಪಿಸಿದ್ದ ಅತಿ ದೊಡ್ಡ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದು, ರಸ್ತೆಯಲ್ಲಿ ಹುದುಗಿಸಿಟ್ಟಿದ್ದ ಐಇಡಿಯನ್ನು ಪತ್ತೆ ಹಚ್ಚಿ, ನಾಶಪಡಿಸಿದ್ದಾರೆ.

5-kg IED was found in Pulwama Bomb disposal team of Police and Army destroyed it
Pulwama terrorists: 5 ಕೆಜಿ ತೂಕದ ಐಇಡಿ ಪತ್ತೆ ಹಚ್ಚಿ, ಉಗ್ರರ ಸಂಚು ವಿಫಲಗೊಳಿಸಿದ ಭದ್ರತಾ ಪಡೆ
author img

By

Published : Dec 23, 2021, 12:25 PM IST

ಶ್ರೀನಗರ(ಜಮ್ಮು ಕಾಶ್ಮೀರ): ಭಯೋತ್ಪಾದಕರ ಅತಿ ದೊಡ್ಡ ಸಂಚನ್ನು ಜಮ್ಮು ಕಾಶ್ಮೀರ ಪೊಲೀಸರು ತಪ್ಪಿಸಿದ್ದಾರೆ. ಶ್ರೀನಗರದ ವಾನ್ಪೋರಾ ಪ್ರದೇಶದ ನೇವಾ ಶ್ರೀನಗರ ರಸ್ತೆಯಲ್ಲಿ ಭಯೋತ್ಪಾದಕರು ಹುದುಗಿಸಿಟ್ಟಿದ್ದ ಐಇಡಿಯನ್ನು ಪೊಲೀಸರು ಪತ್ತೆ ಹಚ್ಚಿ ನಾಶಪಡಿಸಿದ್ದಾರೆ.

ಪತ್ತೆಯಾದ ಐಇಡಿ ಸುಮಾರು 5 ಕೆಜಿ ತೂಕವಿದ್ದು, ರಾಷ್ಟ್ರೀಯ ರೈಫಲ್ಸ್​, ಪುಲ್ವಾಮಾ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್​) ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಐಇಡಿಯನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಪ್ತಚರ ವರದಿಗಳ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ತಂಡವು ಸ್ಥಳದಲ್ಲೇ ಐಇಡಿಯನ್ನು ನಾಶಪಡಿಸಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಹಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆ: ಇಂದು ಮುಂಬೈ ಪೊಲೀಸರ ಮುಂದೆ ಕಂಗನಾ ರಣಾವತ್ ಹಾಜರಾಗುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.