ಟೊರಾಂಟೋ (ಕೆನಡಾ): ಆಟೋ-ಟ್ರ್ಯಾಕರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಟೊರಾಂಟೋದಲ್ಲಿ ಶನಿವಾರ ನಡೆದಿದೆ.
ಭೀಕರ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿ, ಇಬ್ಬರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಸ್ನೇಹಿತರ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ಟೊರಾಂಟೋದಲ್ಲಿನ ಭಾರತದ ಹೈಕಮೀಷನರ್ ಅಜಯ್ ಬಿಸಾರಿಯಾ ಮಾಹಿತಿ ನೀಡಿದ್ದಾರೆ.
ಮೃತ ವಿದ್ಯಾರ್ಥಿಗಳನ್ನು ಹಪ್ರೀತ್ ಸಿಂಗ್, ಜಸ್ಪಿಂದರ್ ಸಿಂಗ್, ಕರನ್ಪಾಲ್ ಸಿಂಗ್, ಮೋಹಿತ್ ಚವ್ಹಾಣ್ ಮತ್ತು ಪವನ್ ಕುಮಾರ್ ಎಂದು ಗುರುತಿಸಲಾಗಿದೆ.
(ಇದನ್ನೂ ಓದಿ: ಅಪ್ಪು ಇಲ್ಲ, ರಾಘುಗೂ ಹುಷಾರಿಲ್ಲ.. ಇದನ್ನೆಲ್ಲ ನೋಡ್ಕೊಂಡು ನಾನಿರಬೇಕಲ್ಲ.. )