ನವದೆಹಲಿ/ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ದೀದಿ ನಾಡಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಕಳೆದ ಕೆಲ ದಿನಗಳ ಹಿಂದೆ ತೃಣಮೂಲ ಕಾಂಗ್ರೆಸ್ಗೆ ವಿದಾಯ ಹೇಳಿದ್ದ ಐವರು ನಾಯಕರು ಇಂದು ಬಿಜೆಪಿ ಸೇರಿಕೊಂಡಿದ್ದಾರೆ.
ಇಂದು ಪಶ್ಚಿಮ ಬಂಗಾಳದಿಂದ ನವದೆಹಲಿಗೆ ಆಗಮಿಸಿದ್ದ ಐವರು ಮುಖಂಡರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ತಮಿಳುನಾಡು ವಿಧಾನಸಭೆ ಫೈಟ್: ಎಐಎಡಿಎಂಕೆ ಜತೆ ಬಿಜೆಪಿ ಮೈತ್ರಿ ಘೋಷಣೆ!
ಅಮಿತ್ ಶಾ ನಾಳೆ ಪಶ್ಚಿಮ ಬಂಗಾಳ ಪ್ರವಾಸ ಕೈಗೊಳ್ಳಬೇಕಾಗಿತ್ತು. ಆದರೆ ದೆಹಲಿ ರೈತ ಪ್ರತಿಭಟನೆ ಹಾಗೂ ಇಸ್ರೇಲ್ ರಾಯಭಾರ ಕಚೇರಿ ಎದುರು ಬಾಂಬ್ ಸ್ಫೋಟ ಪ್ರಕರಣದ ಕಾರಣ ತಮ್ಮ ಪ್ರವಾಸ ಮುಂದೂಡಿಕೆ ಮಾಡಿದ್ದಾರೆ.
ರಾಜೀವ್ ಬ್ಯಾನರ್ಜಿ, ಶಾಸಕರಾದ ಬೈಶಾಲಿ ದಾಲ್ಮಿಯಾ, ಪ್ರಬಿರ್ ಘೋಶಾಲ್, ಹೌರಾ ಮೇಯರ್ ರತಿನ್ ಚಕ್ರವರ್ತಿ, ಮಾಜಿ ಶಾಸಕ ರಣಘಟ್ ಪಾರ್ಥಸಾರಥಿ ಚಟರ್ಜಿ ಇದೀಗ ಕಮಲ ಮುಡಿದಿದ್ದಾರೆ. ಪಶ್ಚಿಮ ಬಂಗಾಳದ ಹೌರಾದಲ್ಲಿ ನಾಳೆ ದೊಡ್ಡ ಸಮಾರಂಭ ಏರ್ಪಾಡಾಗಿತ್ತು. ಆ ಸಂದರ್ಭದಲ್ಲಿ ಇವರೆಲ್ಲರೂ ಭಾರತೀಯ ಜನತಾ ಪಾರ್ಟಿ ಸೇರ್ಪಡೆಗೊಳ್ಳಬೇಕಾಗಿತ್ತು. ಆದರೆ ಇದೀಗ ಅದು ಕ್ಯಾನ್ಸಲ್ ಆಗಿರುವ ಕಾರಣ ದೆಹಲಿಯಲ್ಲಿ ಬಿಜೆಪಿ ಸೇರಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.