ಪಾಟ್ನಾ: ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ 5.5 ತೀವ್ರತೆಯ ಭೂಕಂಪದಿಂದ ಬಿಹಾರದ ಹಲವಾರು ಸ್ಥಳಗಳು ತತ್ತರಿಸಿವೆ. ಈ ಬಗ್ಗೆ ಭೂಕಂಪಶಾಸ್ತ್ರದ ರಾಷ್ಟ್ರೀಯ ಅಧ್ಯಯನ ಕೇಂದ್ರ ಮಾಹಿತಿ ನೀಡಿದೆ. ಬಿಹಾರದ ಕತಿಹಾರ್, ಮುಂಗೇರ್, ಮಾಧೇಪುರ ಮತ್ತು ಬೇಗುಸರೈಗಳಲ್ಲಿ ಕಂಪನದ ಅನುಭವವಾಗಿದೆ. ಇದರಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪನವು ಕಠ್ಮಂಡುವಿನಿಂದ ಪೂರ್ವ-ಆಗ್ನೇಯಕ್ಕೆ 147 ಕಿಲೋ ಮೀಟರ್ ಸುತ್ತಲೂ 10 ಕಿಲೋ ಮೀಟರ್ ಆಳದಲ್ಲಿ ಬೆಳಗ್ಗೆ 7:58 ಕ್ಕೆ ಸಂಭವಿಸಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಈ ಕುರಿತು ಪಾಟ್ನಾದ ಹವಾಮಾನ ಕೇಂದ್ರದ ನಿರ್ದೇಶಕ ವಿವೇಕ್ ಸಿನ್ಹಾ ಮಾತನಾಡಿ, ಭಾನುವಾರ ಬೆಳಗ್ಗೆ 7.58 ಕ್ಕೆ ಭೂಕಂಪ ಸಂಭವಿಸಿದೆ. ಜನರು ಬಿಹಾರದ ಅನೇಕ ನಗರಗಳಲ್ಲಿ ಇದನ್ನು ಅನುಭವಿಸಿದ್ದಾರೆ. ಇದರ ಕೇಂದ್ರವು ನೇಪಾಳದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಡಿಕ್ಟೆಲ್‌ನಲ್ಲಿದೆ. ಅದರ ತೀವ್ರತೆ 5.5 ರಷ್ಟಿದೆ ಎಂದಿದ್ದಾರೆ.
-
#Earthquake in #Kathmandu, Nepal
— The Tall Indian (@BihariBaba1008) July 31, 2022 " class="align-text-top noRightClick twitterSection" data="
An earthquake of magnitude 5.5 on the Richter scale occurred 147 km east-southeast of Kathmandu, Nepal at 0758 hours.
Tremors felt in #Patna and Mithila region of #Bihar
">#Earthquake in #Kathmandu, Nepal
— The Tall Indian (@BihariBaba1008) July 31, 2022
An earthquake of magnitude 5.5 on the Richter scale occurred 147 km east-southeast of Kathmandu, Nepal at 0758 hours.
Tremors felt in #Patna and Mithila region of #Bihar#Earthquake in #Kathmandu, Nepal
— The Tall Indian (@BihariBaba1008) July 31, 2022
An earthquake of magnitude 5.5 on the Richter scale occurred 147 km east-southeast of Kathmandu, Nepal at 0758 hours.
Tremors felt in #Patna and Mithila region of #Bihar
ಬೆಳಗ್ಗೆ 8.10ರ ಸುಮಾರಿಗೆ ಪೂರ್ನಿಯಾದಲ್ಲಿಯೂ ಭೂಕಂಪನದ ಅನುಭವವಾಗಿದೆ. ನಮ್ಮ ಸುತ್ತಮುತ್ತಲಿನ ವಸ್ತುಗಳು ಅಲುಗಾಡಲು ಪ್ರಾರಂಭಿಸಿದಾಗ ಭೂಕಂಪ ಎಂದು ದೃಢಪಟ್ಟಿತು, ಜನರು ತಮ್ಮ ಮನೆಗಳಿಂದ ಬಂದರು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
ಇದಕ್ಕೂ ಮೊದಲು ನೇಪಾಳವು 2015 ರಲ್ಲಿ ಭೂಕಂಪದಿಂದ ದೊಡ್ಡ ದುರಂತವನ್ನು ಕಂಡಿದೆ. ಏಪ್ರಿಲ್ 25, 2015 ರಂದು ಬೆಳಗ್ಗೆ 11:56 ಕ್ಕೆ 7.8 ತೀವ್ರತೆಯೊಂದಿಗೆ ನೇಪಾಳದಲ್ಲಿ ಭೂಕಂಪ ಸಂಭವಿಸಿತ್ತು. ಈ ಭೂಕಂಪನವು ಎಷ್ಟು ತೀವ್ರವಾಗಿತ್ತು ಎಂದರೆ ಭಾರತದ ಹಲವು ರಾಜ್ಯಗಳಲ್ಲಿ ಪ್ರಬಲ ಭೂಕಂಪನದ ಅನುಭವ ಆಗಿತ್ತು. ಈ ಭೂಕಂಪದಿಂದ 9000 ಕ್ಕೂ ಹೆಚ್ಚು ಜನರು ಸಾವಿಗೀಡಾದರೆ, 8 ದಶಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟ ಅನುಭವಿಸಿದ್ದರು.
ಇದನ್ನೂ ಓದಿ: ಹರಿಯಾಣದ ನಾಲ್ವರು ಶಾಸಕರಿಗೆ ವಿದೇಶದಿಂದ ಕೊಲೆ ಬೆದರಿಕೆ.. ಮೊಬೈಲ್ ಸಂಖ್ಯೆ ಪಾಕ್ನಲ್ಲಿ ಆ್ಯಕ್ಟಿವ್