ETV Bharat / bharat

Accident.. ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ಇಬ್ಬರು ಮಕ್ಕಳು ಸೇರಿ ಐವರ ದುರ್ಮರಣ - ಟ್ರಕ್‌ಗೆ ಕಾರು ಡಿಕ್ಕಿ

ಬೋಲಂಗೀರ್​ನಲ್ಲಿ ಭೀಕರ ಅಪಘಾತ - ಔತಣಕೂಟ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ - ಇಬ್ಬರು ಮಕ್ಕಳು ಸೇರಿ ಐವರು ಸಾವು - ಮತ್ತಿಬ್ಬರಿಗೆ ಗಂಭೀರ ಗಾಯ.

car rams into  stationary truck in Bolangir
ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ
author img

By

Published : Jun 14, 2023, 10:11 AM IST

ಬೋಲಂಗೀರ್(ಒಡಿಶಾ): ಬೋಲಂಗೀರ್ ಜಿಲ್ಲೆಯ ಸಂಬಲ್‌ಪುರ-ಬೋಲಂಗೀರ್ ರಾಷ್ಟ್ರೀಯ ಹೆದ್ದಾರಿ-26ರ ಕ್ರಾಸಿಂಗ್ ಚೌಕದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಂಗಳವಾರ ರಾತ್ರಿ 11.00 ಗಂಟೆ ಸುಮಾರಿಗೆ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಮಕ್ಕಳು ಸೇರಿ ಐವರು ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ.

ಮೃತರನ್ನು ಬೋಲಂಗೀರ್​ನ ನಿವಾಸಿ ಆತ್ಮಜ ನಾಯಕ್(25), ದೀಪ್ತಿ ಸಾಯಿ(35) ಆಕೆಯ ಮಗ ಅಂಜಿ ಸಾಯಿ(6), ಇಪ್ಸಿತಾ ಸಾಯಿ(26), ಆಕೆಯ ಮಗಳು ರಿಯಾ ಸಾಯಿ(6) ಎಂದು ಗುರುತಿಸಲಾಗಿದೆ. ಆರತಿ ನಾಯಕ್ ಮತ್ತು ರಸ್ಮಿತಾ ಸಾಯಿ ಎಂಬ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೂಲಗಳ ಪ್ರಕಾರ ಮೂರು ಕುಟುಂಬಗಳ ಏಳು ಮಂದಿ ಕಾರಿನಲ್ಲಿದ್ದರು. ಎಲ್ಲರೂ ಸಂಬಂಧಿಕರು. ಬೋಲಂಗೀರ್ ಜಿಲ್ಲೆಯ ನಿವಾಸಿಗಳಾದ ಇವರು ಅಗಲ್‌ಪುರದ ದುಡುಕಾ ಗ್ರಾಮದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಬೋಲಂಗೀರ್‌ಗೆ ವಾಪಸ್​ ಆಗುತ್ತಿದ್ದಾಗ ದುರ್ಘಟನೆ ನಡೆದಿದೆ. ಅಪಘಾತ ಎಷ್ಟು ತೀವ್ರವಾಗಿತ್ತು ಎಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನೆಯ ನಂತರ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳೀಯರ ನೆರವಿನಿಂದ ಸಂತ್ರಸ್ತರನ್ನು ಭೀಮಾ ಭೋಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿನ ವೈದ್ಯರು 5 ಜನರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಗಾಯಾಳುಗಳ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಮಾಹಿತಿ ಪಡೆದ ಬೋಲಂಗೀರ್ ಪಟ್ಟಣ ಪೊಲೀಸರು ಮತ್ತು ಎಸ್‌ಡಿಪಿಒ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. "ಮೃತರು ದುಡುಕಾದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ವಾಪಸ್​ ತೆರಳುತ್ತಿದ್ದರು. ಅವರ ಕಾರು ರಾಷ್ಟ್ರೀಯ ಹೆದ್ದಾರಿ ಬಳಿ ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ" ಎಂದು ಬೋಲಂಗೀರ್ ಎಸ್‌ಡಿಪಿಒ ತಿಳಿಸಿದ್ದಾರೆ. ಆತ್ಮಜ ನಾಯಕ್ ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ತಪ್ಪಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Oil Tanker Fire: ಎಕ್ಸ್​ಪ್ರೆಸ್​ವೇಯಲ್ಲಿ ಭೀಕರ ರಸ್ತೆ ಅಪಘಾತ.. ಹೊತ್ತಿ ಉರಿಯುತ್ತಿರುವ ಆಯಿಲ್​ ಟ್ಯಾಂಕರ್, ಸಾವು-ನೋವು! ​

ತೈಲ ಟ್ಯಾಂಕರ್‌ ಅಪಘಾತ: ಮಂಗಳವಾರ(ಜೂ.13) ಮುಂಬೈ- ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಬರುವ ಲೋನಾವಾಲಾ ಮೇಲ್ಸೇತುವೆಯಲ್ಲಿ ಅಪಘಾತಕ್ಕೀಡಾದ ನಂತರ ತೈಲ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿದ್ದು ನಾಲ್ವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದರು. ವಿಷಯ ತಿಳಿದ ಅಗ್ನಿಶಾಮದಳ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದರು. ಲೋನಾವಾಲಾ ಮೇಲ್ಸೇತುವೆ ಬದಲಾಗಿ ವಾಹನಗಳಿಗೆ ಬೇರೆ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗುತ್ತಿರುವುದರಿಂದ ತ್ವರಿತವಾಗಿ ಮೇಲ್ಸೇತುವೆಯಿಂದ ತೈಲ ಟ್ಯಾಂಕರ್ ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ತೈಲ ಟ್ಯಾಂಕರ್‌ ಅಪಘಾತ: ನಾಲ್ವರು ಸಾವು, ಮೂವರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.