ETV Bharat / bharat

ಠಾಣೆಯಲ್ಲೇ ಐವರು ಪೊಲೀಸರು, ಹೋಂ ಗಾರ್ಡ್​​ಗೆ ಚಾಕು ಇರಿತ! - cyber police station

ದೆಹಲಿ ಪೊಲೀಸ್​ ಠಾಣೆಯಲ್ಲಿ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ನಡೆದಿದೆ.

5 cops, 1 home guard stabbed inside police station in Delhi
ಠಾಣೆಯಲ್ಲೇ ಐವರು ಪೊಲೀಸರು, ಹೋಂ ಗಾರ್ಡ್​​ಗೆ ಚಾಕು ಇರಿತ
author img

By

Published : Jun 22, 2022, 9:35 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಬುಧವಾರ ಆತಂಕಕಾರಿ ಘಟನೆ ನಡೆದಿದೆ. ಕೆಲ ದುಷ್ಕರ್ಮಿಗಳು ಠಾಣೆಯಲ್ಲೇ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಐವರು ಪೊಲೀಸರು ಮತ್ತು ಒಬ್ಬ ಗೃಹ ರಕ್ಷಕ ದಳದ ಸಿಬ್ಬಂದಿ ಗಾಯಗೊಂಡಿದ್ದಾರೆ.

ಶಾಹದಾರ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಗೆ ಬುಧವಾರ ಮಧ್ಯಾಹ್ನ ಕೆಲ ಆರೋಪಿಗಳನ್ನು ಕರೆತಂದಾಗ ಘಟನೆ ನಡೆಯಿತು. ಗಾಯಗೊಂಡ ಪೊಲೀಸರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳನ್ನು ಜಿಟಿಬಿ ಆಸ್ಪತ್ರೆಗೆ ಸೇರಿಸಲಾಗಿದೆ.

ಈ ಸಂಬಂಧ ಆರೋಪಿಯೊಬ್ಬನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸ್ ವಕ್ತಾರ ಸುಮನ್ ನಲ್ವಾ ತಿಳಿಸಿದ್ದಾರೆ. ದಾಳಿಯ ಹಿಂದಿನ ಕಾರಣವೇನು ಎಂಬ ಬಗ್ಗೆ ಪೊಲೀಸರು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: 'ಇದು ಸ್ಕೂಟರ್​ ಅಲ್ಲ ಕತ್ತೆ' ಓವರ್​ಲೋಡ್​ ವಸ್ತು ತುಂಬಿಕೊಂಡು ರೈಡ್​: ವಿಡಿಯೋ ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.