ETV Bharat / bharat

ಕೊರೊನಾ ನಿರ್ಮೂಲನೆಗೆ ನಿಯಮ ಮೀರಿ ಧಾರ್ಮಿಕ ಮೆರವಣಿಗೆ: 46 ಮಂದಿ ಅರೆಸ್ಟ್

ಕೋವಿಡ್​ ಸಾಂಕ್ರಾಮಿಕವು ದೇವರ ಶಾಪವಾಗಿದೆ ಎಂದುಕೊಂಡು ಗುಜರಾತ್​ನ ಗಾಂಧಿನಗರದ ರಾಯ್‌ಪುರ ಗ್ರಾಮದ ಜನರು ಕೊರೊನಾ​ ನಿಯಮ ಉಲ್ಲಂಘಿಸಿ ಬೃಹತ್​ ಸಂಖ್ಯೆಯಲ್ಲಿ ಮೆರವಣಿಗೆ ನಡೆಸಿ, ದೇವರಿಗೆ ಪೂಜೆ ಸಲ್ಲಿಸಿದ್ದಾರೆ.

People throng temple to 'eradicate COVID-19' defying COVID norms
ಕೊರೊನಾ ನಿರ್ಮೂಲನೆಗೆ ನಿಯಮ ಮೀರಿ ಧಾರ್ಮಿಕ ಮೆರವಣಿಗೆ
author img

By

Published : May 7, 2021, 12:09 PM IST

ಗಾಂಧಿನಗರ (ಗುಜರಾತ್​): ಕೊರೊನಾ ವೈರಸ್​​ ಅನ್ನು ಹೊಡೆದೋಡಿಸಬೇಕು, ಸಾಂಕ್ರಾಮಿಕವನ್ನು ನಿರ್ಮೂಲನೆ ಮಾಡಬೇಕೆಂದು ಕೋವಿಡ್​ ನಿಯಮ ಉಲ್ಲಂಘಿಸಿ ಧಾರ್ಮಿಕ ಮೆರವಣಿಗೆ ನಡೆಸಿದ ಕಾರಣ 46 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊರೊನಾ ನಿರ್ಮೂಲನೆಗೆ ನಿಯಮ ಮೀರಿ ಧಾರ್ಮಿಕ ಮೆರವಣಿಗೆ

ಗುಜರಾತ್​ನ ಗಾಂಧಿನಗರದ ರಾಯ್‌ಪುರ ಗ್ರಾಮದಲ್ಲಿನ ಜನರು ಕೋವಿಡ್​ ಸಾಂಕ್ರಾಮಿಕವು ಬಲಿಯಾದೇವ್ ಮಹಾರಾಜ್ ದೇವರ ಶಾಪವಾಗಿದೆ ಎಂದು ನಂಬಿ, ಬಲಿಯಾದೇವ್ ದೇಗುಲಕ್ಕೆ ಬೃಹತ್​ ಸಂಖ್ಯೆಯಲ್ಲಿ ಮೆರವಣಿಗೆ ಮಾಡಿಕೊಂಡು ತೆರಳಿ ಪೂಜೆ ಸಲ್ಲಿಸಿದ್ದರು. ಈ ವೇಳೆ ಮಾಸ್ಕ್​​ ಧರಿಸದೆ, ದೈಹಿಕ ಅಂತರ ಕಾಯ್ದುಕೊಳ್ಳದೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯದ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಪೊಲೀಸರು 46 ಜನರನ್ನು ಬಂಧಿಸಿದ್ದಾರೆ ಎಂದು ಗಾಂಧಿನಗರ ಉಪ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ ರಾಣಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.