ETV Bharat / bharat

15 ವರ್ಷಗಳ ಸಂಸಾರ, 6 ಮಕ್ಕಳ ಮುಂದೆ ಮೂವರನ್ನು ಮದುವೆಯಾದ 42 ವರ್ಷದ ವ್ಯಕ್ತಿ - ವಿಭಿನ್ನ ವಿವಾಹ

ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ನಾನ್ಪುರ ಗ್ರಾಮದ ಮೋರಿ ಪಾಲಿಯೆ ಎಂಬಲ್ಲಿ ವ್ಯಕ್ತಿಯೊಬ್ಬ ಮೂರು ವಧುಗಳನ್ನು ವಿವಾಹವಾಗುವ ಜೊತೆಗೆ ಸುಖವಾಗಿ ಸಂಸಾರ ಮಾಡುತ್ತೇವೆಂದು ಪ್ರತಿಜ್ಞೆ ಮಾಡಿದ್ದಾನೆ. ವಿಶೇಷ ಅಂದ್ರೆ, ಈ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿದ್ದು, ಗ್ರಾಮಸ್ಥರು ಮಾತ್ರವಲ್ಲದೇ, ಮದುಮಕ್ಕಳ ಆರು ಮಕ್ಕಳು ಸಹ ವಿವಾಹ ಸಮಾರಂಭದಲ್ಲಿ ಭಾಗವಹಿಸಿದರು.

ಮದುವೆ
ಮದುವೆ
author img

By

Published : May 9, 2022, 9:14 AM IST

ಅಲಿರಾಜಪುರ(ಮಧ್ಯಪ್ರದೇಶ): ಮದುವೆ ಮನೆ ಅಂದ್ರೆ ಅಲ್ಲಿನ ಸಂಭ್ರಮವೇ ಬೇರೆ. ವಿವಾಹ ನಿಗದಿಯಾದ ದಿನದಿಂದಲೇ ವಧು-ವರ ಅನೇಕ ಕನಸುಗಳನ್ನು ಕಾಣುತ್ತಾರೆ. ಆದರೆ, ಕೆಲವೊಂದು ಮದುವೆಗಳು ಬಹಳ ವಿಶಿಷ್ಟವಾಗಿರುತ್ತದೆ. ಅಂತಹದ್ದೇ ವಿಭಿನ್ನ ವಿವಾಹ ಕಾರ್ಯಕ್ರಮವೊಂದು ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ನಾನ್ಪುರ ಗ್ರಾಮದಲ್ಲಿ ನಡೆದಿದೆ.

ನಾನ್ಪುರ ಗ್ರಾಮದ ಮೋರಿ ಪಾಲಿಯೆ ಎಂಬಲ್ಲಿ ವ್ಯಕ್ತಿಯೊಬ್ಬ ಮೂವರು ಮಹಿಳೆಯರನ್ನು ವಿವಾಹವಾಗುವ ಜೊತೆಗೆ ಸುಖ ಸಂಸಾರದ ಪ್ರತಿಜ್ಞೆ ಮಾಡಿದ್ದಾನೆ. ವಿಶೇಷ ಅಂದ್ರೆ, ಈ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿದ್ದು, ಗ್ರಾಮಸ್ಥರು ಮಾತ್ರವಲ್ಲ, ಮದುಮಕ್ಕಳ ಆರು ಮಕ್ಕಳು ಸಹ ಸಮಾರಂಭದಲ್ಲಿ ಭಾಗವಹಿಸಿದರು.

15 ವರ್ಷಗಳ ನಂತರ ಮದುವೆ: ವರ ಸಮರ್ಥ ಮೌರ್ಯ (42) ಅವರು ಖಾರ್ಪೈ ಗ್ರಾಮದ ಮಗನ್ ಮುಜಲ್ದಾ ಅವರ ಪುತ್ರಿ ನೈನಾಬಾಯಿ, ಅಜಂದದ ಭೂರು ಸೋಲಂಕಿ ಅವರ ಪುತ್ರಿ ಮೇಲಾ ಮತ್ತು ಖಾರ್ಕುವಾ ಮೂಲದ ನಾಥುಸಿಂಗ್ ಚೋಂಗಡ್ ಅವರ ಪುತ್ರಿ ಸಕ್ರಿ ಅವರನ್ನು ಒಂದೇ ಮಂಟಪದಲ್ಲಿ ವರಿಸಿದರು. ಮಾಹಿತಿಯ ಪ್ರಕಾರ, ಸಮರ್ಥ ಮೂವರು ಹುಡುಗಿಯರನ್ನು 15 ವರ್ಷಗಳ ಹಿಂದೆಯೇ ಅವರ ಮನೆಗೆ ಕರೆದುಕೊಂಡು ಹೋಗಿ, ಸಂಸಾರ ಮಾಡುತ್ತಿದ್ದ. ಈತ ಆರು ಮಕ್ಕಳನ್ನು ಹೊಂದಿದ್ದಾನೆ. ಪ್ರತಿ ಮಹಿಳೆಯರು ತಲಾ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಮದುವೆಯ ಆಮಂತ್ರಣ ಪತ್ರಿಕೆ
ಮದುವೆಯ ಆಮಂತ್ರಣ ಪತ್ರಿಕೆ

ಬುಡಕಟ್ಟು ಸಂಪ್ರದಾಯ: ಮೌರ್ಯ ಬುಡಕಟ್ಟು ಭಿಲಾಲ ಸಮುದಾಯಕ್ಕೆ ಸೇರಿದವರು. ಈ ಬುಡಕಟ್ಟು ಸಮುದಾಯದಲ್ಲಿ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಮಹಿಳೆಯರೊಂದಿಗೆ ಬಾಳುವ ಸಂಪ್ರದಾಯವಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಅವರು ಮಕ್ಕಳನ್ನೂ ಹೊಂದಿದ್ದರೆ ಅವರು ಮದುವೆಯ ಬಗ್ಗೆ ನಿರ್ಧರಿಸಬಹುದು. ಆದರೆ, ಮದುವೆಯ ತನಕ ಯಾವುದೇ ಮಾಂಗ್ಲಿಕ್ ಕೆಲಸದಲ್ಲಿ ಭಾಗವಹಿಸುವಂತಿಲ್ಲ. ಈ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡು ಸಮರ್ಥ ಈ ಹೆಜ್ಜೆ ಇಟ್ಟಿದ್ದಾರೆ.

ಸಂವಿಧಾನ ಅನುಮತಿ ನೀಡಿದೆ: 15 ವರ್ಷಗಳ ಹಿಂದೆ ತನ್ನ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ, ಸದ್ಯಕ್ಕೆ ಪರಿಸ್ಥಿತಿ ಸುಧಾರಿಸಿದೆ. ಆದ್ದರಿಂದ ನನ್ನ ಮೂವರು ಗೆಳತಿಯರನ್ನು ಮದುವೆಯಾಗಲು ಸಾಧ್ಯವಾಯಿತು. ಮದುವೆಯ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಲಾಗಿದೆ. ಅದರಲ್ಲಿ ಮೂವರು ಗೆಳತಿಯರ ಹೆಸರನ್ನೂ ಮುದ್ರಿಸಲಾಗಿದೆ ಎಂದು ವರ ತಿಳಿಸಿದ್ದಾನೆ. ಭಾರತೀಯ ಸಂವಿಧಾನದ 342ನೇ ವಿಧಿಯು ಬುಡಕಟ್ಟು ಪದ್ಧತಿಗಳು ಮತ್ತು ನಿರ್ದಿಷ್ಟ ಸಾಮಾಜಿಕ ಸಂಪ್ರದಾಯಗಳ ಬಗ್ಗೆ ತಿಳಿಸುತ್ತದೆ. ಈ ಪ್ರಕಾರ, ಒಂದೇ ಸಮಯದಲ್ಲಿ ಮೂರು ವಧುಗಳನ್ನು ಮದುವೆಯಾಗುವುದು ಕಾನೂನುಬಾಹಿರವಲ್ಲವಂತೆ.

ಇದನ್ನೂ ಓದಿ: ದೇಗುಲಗಳಲ್ಲಿ ಭಜನೆ, ಸುಪ್ರಭಾತ; ಬೆಳಗಾವಿಯ 500ಕ್ಕೂ ಹೆಚ್ಚು ‌ಸೂಕ್ಷ್ಮ ಪ್ರದೇಶದಲ್ಲಿ ಭದ್ರತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.