ನವದೆಹಲಿ: ಜನವರಿ 26ರ ಗಣರಾಜ್ಯೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಭಾರತೀಯ ವಾಯುಪಡೆ (ಐಎಎಫ್)ಯ 38 ವಿಮಾನಗಳು ಮತ್ತು ಭಾರತೀಯ ಸೇನೆಯ ನಾಲ್ಕು ಹೆಲಿಕಾಪ್ಟರ್‌ಗಳು ಭಾಗವಹಿಸಲಿವೆ.
ಐಎಎಫ್‌ನ ಪಿಆರ್‌ಒ ಈ ಕುರಿತು ಮಾಹಿತಿ ನೀಡಿದ್ದು, 15 ಯುದ್ಧ ವಿಮಾನಗಳು, ಐದು ಸಾರಿಗೆ ವಿಮಾನಗಳು, 17 ಹೆಲಿಕಾಪ್ಟರ್‌ಗಳು ಮತ್ತು ಭಾರತೀಯ ವಾಯುಪಡೆಯ ಒಂದು ವಿಂಟೇಜ್ ವಿಮಾನ, ಭಾರತೀಯ ಸೇನೆಯ ನಾಲ್ಕು ಹೆಲಿಕಾಪ್ಟರ್‌ಗಳು ಸೇರಿದಂತೆ ಒಟ್ಟು 42 ವಿಮಾನಗಳು ಈ ವರ್ಷದ ಫ್ಲೈಪಾಸ್ಟ್‌ನಲ್ಲಿ ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.
ಈ ಸುದ್ದಿಯನ್ನೂ ಓದಿ: ಇಲ್ಲಿ ಲವ್ ಜಿಹಾದ್ ಕಾನೂನು ಜಾರಿಯಾದ ಬಳಿಕ ಮೊದಲ ಪ್ರಕರಣ ದಾಖಲು
ಫ್ಲೈಪಾಸ್ಟ್ ಅನ್ನು ಎರಡು ಬ್ಯಾಚ್ ಮೂಲಕ ಹಾರಿಸಲಾಗುತ್ತದೆ. ಮೊದಲು ಬೆಳಗ್ಗೆ 10:04 ರಿಂದ 10:20 ರವರೆಗೆ ಮತ್ತು ಎರಡನೇ ಬ್ಯಾಚ್ ಮೆರವಣಿಗೆಯ ನಂತರ, ಅಂದರೆ ಬೆಳಗ್ಗೆ 11:20 ರಿಂದ 11:45 ರ ನಡುವೆ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.