ETV Bharat / bharat

ರಾಜ್ಯಸಭೆ ಚುನಾವಣೆ: ಬಿಜೆಪಿಯ 14 ಅಭ್ಯರ್ಥಿಗಳು ಸೇರಿ 41 ಮಂದಿ ಅವಿರೋಧ ಆಯ್ಕೆ - ರಾಜ್ಯಸಭೆಗೆ 44 ಅಭ್ಯರ್ಥಿಗಳು ಅವಿರೋಧ ಆಯ್ಕೆ

ರಾಜ್ಯಸಭೆಗೆ 12 ರಾಜ್ಯಗಳ 41 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ ಸ್ಥಾನಗಳಿಗಾಗಿ ಜೂನ್​ 10ರಂದು ಮತದಾನ ನಡೆಯಲಿದೆ.

Rajya Sabha election result
Rajya Sabha election result
author img

By

Published : Jun 4, 2022, 3:13 PM IST

Updated : Jun 4, 2022, 3:27 PM IST

ನವದೆಹಲಿ: ರಾಜ್ಯಸಭೆಯ 57 ಸ್ಥಾನಗಳಿಗೆ ಜೂನ್​ 10ರಂದು ಚುನಾವಣೆ ನಡೆಯಲಿದೆ. ಆದರೆ, ಇದರಲ್ಲಿ 12 ರಾಜ್ಯದ 41 ಸ್ಥಾನಗಳಿಗೆ ಅವಿರೋಧವಾಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಭಾರತೀಯ ಜನತಾ ಪಕ್ಷದ 14 ಅಭ್ಯರ್ಥಿಗಳು ಸಹ ಸೇರಿಕೊಂಡಿದ್ದು, ಉಳಿದ 16 ಸ್ಥಾನಗಳಿಗೆ ಮಾತ್ರ ಇದೀಗ ಮತದಾನ ನಡೆಯಲಿದೆ.

ಕಾಂಗ್ರೆಸ್​​ ಪಕ್ಷದ ಪಿ. ಚಿದಂಬರಂ ಸೇರಿದಂತೆ ಕಾಂಗ್ರೆಸ್​ನ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಆಂಧ್ರಪ್ರದೇಶದ ನಾಲ್ಕು ಸ್ಥಾನಗಳಿಗಾಗಿ ವೈಎಸ್​​​ಆರ್​ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ, ಒಡಿಶಾದಲ್ಲಿ ಬಿಜೆಡಿ ಮೂವರನ್ನು ಆಯ್ಕೆ ಮಾಡಿದ್ದರೆ, ಆಮ್​ ಆದ್ಮಿ ಪಕ್ಷ, ತೆಲಂಗಾಣ ರಾಷ್ಟ್ರ ಸಮಿತಿ, ಎಐಡಿಎಂಕೆಯ ಇಬ್ಬರು ಅಭ್ಯರ್ಥಿಗಳು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಯಾವ ರಾಜ್ಯದಲ್ಲಿ ಎಷ್ಟು ಅಭ್ಯರ್ಥಿಗಳು ಅವಿರೋಧ ಆಯ್ಕೆ: ಉತ್ತರ ಪ್ರದೇಶದಲ್ಲಿ-11, ತಮಿಳುನಾಡು- 6, ಬಿಹಾರ -5, ಆಂಧ್ರಪ್ರದೇಶ-4, ಮಧ್ಯಪ್ರದೇಶ, ಒಡಿಶಾದಲ್ಲಿ ತಲಾ ಮೂವರು, ಛತ್ತೀಸ್​ಗಢ, ಪಂಜಾಬ್, ತೆಲಂಗಾಣ ಮತ್ತು ಜಾರ್ಖಂಡ್​ನಲ್ಲಿ ತಲಾ ಇಬ್ಬರು ಹಾಗೂ ಉತ್ತರಾಖಂಡದಲ್ಲಿ ತಲಾ ಓರ್ವ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

ಇದೀಗ ಉಳಿದ ಸ್ಥಾನಗಳಿಗಾಗಿ ಜೂನ್​ 10ರಂದು ವೋಟಿಂಗ್ ನಡೆಯಲಿದ್ದು, ಇದರಲ್ಲಿ ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸಹ ಸೇರಿಕೊಂಡಿದೆ. ಮುಖ್ಯವಾಗಿ ಕರ್ನಾಟಕದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ನಟ ಜಗೇಶ್ ಮತ್ತು ಮೂರನೇ ಅಭ್ಯರ್ಥಿಯಾಗಿ ಲೆಹರ್​ ಸಿಂಗ್​ ಕಣದಲ್ಲಿದ್ದಾರೆ. ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದು, ಇದಕ್ಕೆ ತೀವ್ರ ಪೈಪೋಟಿ ನೀಡುವ ಉದ್ದೇಶದಿಂದ ಜೆಡಿಎಸ್​ ಕೂಡ ತನ್ನ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಿದೆ.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಸಿಬ್ಬಂದಿ ಎದುರೇ ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ ಗಂಡ.. ಕೃತ್ಯದ ವಿಡಿಯೋ ವೈರಲ್​​!

ಅವಿರೋಧವಾಗಿ ಕಾಂಗ್ರೆಸ್​ನ ಪಿ. ಚಿದಂಬರಂ, ಕಪಿಲ್ ಸಿಬಲ್​, ರಾಜೀವ್ ಶುಕ್ಲಾ ಆಯ್ಕೆಯಾಗಿದ್ದು, ಬಿಜೆಪಿಯಿಂದ ಸುಮಿತ್ರಾ ವಾಲ್ಮೀಕಿ, ಕವಿತಾ ಪಾಟಿದಾರ್​ ಆಯ್ಕೆಯಾಗಿದ್ದಾರೆ.

Last Updated : Jun 4, 2022, 3:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.