ETV Bharat / bharat

ಸಿಡಿಲಬ್ಬರಕ್ಕೆ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್​ನಲ್ಲಿ 40 ಮಂದಿ ಬಲಿ - Lightning killed 40 people

ಮಳೆಯ ಜೊತೆಗೆ ಸಿಡಿಲೂ ಜೋರಾಗಿದ್ದು, ಬಿಹಾರದಲ್ಲಿ ಒಂದೇ ದಿನ ಮಿಂಚಿನಾಟಕ್ಕೆ 20 ಮಂದಿ ಬಲಿಯಾಗಿದ್ದಾರೆ. ಉತ್ತರಪ್ರದೇಶ, ಜಾರ್ಖಂಡ್​ನಲ್ಲೂ 20 ಮಂದಿ ಪ್ರಾಣ ತೆತ್ತಿದ್ದಾರೆ.

40-killed-in-lightning-strikes
ಸಿಡಿಲಬ್ಬರಕ್ಕೆ 40 ಮಂದಿ ಬಲಿ
author img

By

Published : Jul 27, 2022, 11:19 AM IST

ನವದೆಹಲಿ: ದೇಶಾದ್ಯಂತ ಮಳೆ, ಗಾಳಿ ಜೋರಾಗಿದೆ. ಮಿಂಚಿನೇಟಿಗೆ ಬಿಹಾರ, ಉತ್ತರಪ್ರದೇಶ ಮತ್ತು ಜಾರ್ಖಂಡ್​ನಲ್ಲಿ 40 ಮಂದಿ ಬಲಿಯಾಗಿರುವುದು ವರದಿಯಾಗಿದೆ. ಬಿಹಾರದಲ್ಲಿ 20 ಮಂದಿ ಸಿಡಿಲಿಗೆ ಅಸುನೀಗಿದರೆ, ಉತ್ತರಪ್ರದೇಶದಲ್ಲಿ 18, ಜಾರ್ಖಂಡ್​ನಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.

ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಮಿಂಚಿನ ಅಬ್ಬರ ಜೋರಾಗಿದ್ದು, ಮಂಗಳವಾರ ಒಂದೇ ದಿನ 38 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಿಹಾರದ 8 ಜಿಲ್ಲೆಗಳಲ್ಲಿ ಕೈಮೂರ್ ಜಿಲ್ಲೆಯೊಂದರಲ್ಲೇ 7 ಮಂದಿ, ಭೋಜ್‌ಪುರ ಮತ್ತು ಪಾಟ್ನಾದಲ್ಲಿ ತಲಾ ನಾಲ್ವರು ಮತ್ತು ಜಹಾನಾಬಾದ್, ಅರ್ವಾಲ್, ರೋಹ್ತಾಶ್, ಸಿವಾನ್ ಮತ್ತು ಔರಂಗಾಬಾದ್‌ನಲ್ಲಿ ತಲಾ ಒಬ್ಬರ ಪ್ರಾಣಪಕ್ಷಿ ಹಾರಿಹೋಗಿದೆ.

ಉತ್ತರ ಪ್ರದೇಶದಲ್ಲಿ ಕಳೆದೆರಡು ದಿನಗಳಲ್ಲಿ ಸಿಡಿಲು ಬಡಿದು 18 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ಒಂದೇ ದಿನದಲ್ಲಿ 12 ಜನರ ಪ್ರಾಣಾಹುತಿಯಾಗಿದೆ. ಕೌಸಾಂಬಿಯಲ್ಲಿ ಏಳು, ಪ್ರಯಾಗ್‌ರಾಜ್‌ನಲ್ಲಿ ಐದು, ಗಾಜಿಪುರದಲ್ಲಿ ನಾಲ್ವರು ಮತ್ತು ಭದೋಹಿಯಲ್ಲಿ ಇಬ್ಬರು ಬದುಕು ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಾರ್ಖಂಡ್‌ನಲ್ಲಿ ಜಮೀನಿನಲ್ಲಿ ದನ ಮೇಯಿಸುತ್ತಿದ್ದಾಗ ಸಿಡಿಲು ಬಡಿದು ಇಬ್ಬರು ಅಸುನೀಗಿದ್ದಾರೆ.

ಇದನ್ನೂ ಓದಿ: ಫಿಲಿಪ್ಪೀನ್ಸ್‌​ನಲ್ಲಿ ಗಢಗಢ ನಡುಗಿದ ಭೂಮಿ; 7.3 ತೀವ್ರತೆಯ ಭಾರಿ ಭೂಕಂಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.