ETV Bharat / bharat

ಶಾಕಿಂಗ್ ನ್ಯೂಸ್​!: ಕೊರೊನಾ ಸೋಂಕಿತರಲ್ಲದಿದ್ದರೂ 40 ಮಂದಿಗೆ ಬ್ಲ್ಯಾಕ್ ಫಂಗಸ್ ದೃಢ! - ಕೋವಿಡ್​ ಹಿನ್ನಲೆಯಿಲ್ಲದವರಿಗೂ ಬ್ಲ್ಯಾಕ್ ಫಂಗಸ್ ದಾಳಿ

ರಾಜ್ಯದಲ್ಲಿ 1179 ಬ್ಲ್ಯಾಕ್ ಫಂಗಸ್​ ಸೋಂಕಿತ ಪ್ರತರಣಗಳಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. 1068 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ, 97 ಮಂದಿ ಗುಣಮುಖರಾಗಿದ್ದಾರೆ ಹಾಗೂ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಿಎಂಗೆ ಮಾಹಿತಿ ನೀಡಿದರು.

ಬ್ಲ್ಯಾಕ್ ಫಂಗಸ್​
ಬ್ಲ್ಯಾಕ್ ಫಂಗಸ್​
author img

By

Published : Jun 1, 2021, 5:35 AM IST

ಅಮರಾವತಿ: ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈಎಸ್​ ಜಗನ್​ ಮೋಹನ್​ ರೆಡ್ಡಿ ಸೋಮವಾರ ಕೊರೊನಾ ವಾಕ್ಸಿನೇಷನ್​, ರಾಜ್ಯದಲ್ಲಿನ ಕೋವಿಡ್​ 19 ಸ್ಥಿತಿಗತಿ ಕುರಿತು ಪರಿಶೀಲನಾ ಸಭೆ ನಡೆಸಿದರು.

ರಾಜ್ಯದಲ್ಲಿ 1179 ಬ್ಲ್ಯಾಕ್ ಫಂಗಸ್​ ಸೋಂಕಿತ ಪ್ರಕರಣಗಳಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. 1068 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ, 97 ಮಂದಿ ಗುಣಮುಖರಾಗಿದ್ದಾರೆ ಹಾಗೂ 14 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಸಿಎಂಗೆ ಮಾಹಿತಿ ನೀಡಿದರು..

ಆದರೆ ಆಶ್ಚರ್ಯಕರ ವಿಷಯವೆಂದರೆ, ಇತ್ತೀಚೆಗೆ ವೈದ್ಯರ ಗಮನಕ್ಕೆ ಬಂದಿರುವಂತೆ ಕೋವಿಡ್ -19 ಸೋಂಕಿಗೆ ಒಳಗಾಗದೇ ಇರುವ ಕೆಲವು ರೋಗಿಗಳಲ್ಲೂ ಈ ಕಪ್ಪು ಶಿಲೀಂಧ್ರ ಅಥವಾ ಬ್ಲ್ಯಾಕ್ ಫಂಗಸ್​ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿನ 1139 ಬ್ಲ್ಯಾಕ್​ ಫಂಗಸ್​ ಸೋಂಕಿತರಲ್ಲಿ 40 ಮಂದಿಗೆ ಹಿಂದೆ ಕೋವಿಡ್​ 19 ವೈರಸ್​ ತಗುಲಿಲ್ಲ ಎಂದು ಪ್ರಧಾನ ಕಾರ್ಯದರ್ಶಿ(ಆರೋಗ್ಯ) ಅನಿಲ್ ಕುಮಾರ್ ಸಿಂಘಲ್ ತಿಳಿಸಿದ್ದಾರೆ.

ಇತ್ತೀಚಿನ ಅಧ್ಯಯನ ಪ್ರಕಾರ ಮಧುಮೇಹ ರೋಗಿಗಳು ಈ ಬ್ಲ್ಯಾಕ್ ಫಂಗಸ್ ಸೋಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ ಇದು ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಇಂದೋರ್​​ನ ಈ ಆಸ್ಪತ್ರೆಯಲ್ಲಿ ರೋಗಿಗಳ ಮಿದುಳಿನಲ್ಲಿ ಕಪ್ಪು ಶಿಲೀಂಧ್ರ ಪತ್ತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.