ETV Bharat / bharat

ಆಕ್ಸಿಜನ್ ಕಾನ್ಸಂಟ್ರೇಟರ್ ಬ್ಲ್ಯಾಕ್​ ಮಾರ್ಕೆಟ್​; ಒಂದಕ್ಕೆ 70 ಸಾವಿರ ರೂ. ಬೆಲೆ, ನಾಲ್ವರ ಬಂಧನ - ಕೋವಿಡ್​ ಸಲಕರಣೆ

ದೆಹಲಿಯಲ್ಲಿ ಪ್ರಸ್ತುತ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ತಂಡಕ್ಕೆ ಲೋಧಿ ಕಾಲನಿಯಲ್ಲಿ ರೆಸ್ಟಾರೆಂಟ್ ಒಂದರ ಬಾಗಿಲು ತೆರೆದಿರುವುದು ಕಾಣಿಸಿದ್ದು, ಸಂಶಯದಿಂದ ಪೊಲೀಸರು ಹೆಚ್ಚಿನ ತಪಾಸಣೆ ನಡೆಸಿದಾಗ ಈ ಕಾಳಸಂತೆ ವ್ಯವಹಾರ ಬೆಳಕಿಗೆ ಬಂದಿದೆ.

4 held for black marketing of oxygen concentrators in Delhi
ಆಕ್ಸಿಜನ್ ಕಾನ್ಸಂಟ್ರೇಟರ್ ಬ್ಲ್ಯಾಕ್​ ಮಾರ್ಕೆಟ್​; ಒಂದಕ್ಕೆ 70 ಸಾವಿರ ರೂ. ಬೆಲೆ, ನಾಲ್ವರ ಬಂಧನ
author img

By

Published : May 7, 2021, 7:14 PM IST

ನವದೆಹಲಿ: ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಲೋಧಿ ಕಾಲನಿಯ ನೆಗೆಜು ಬಾರ್ ಮತ್ತು ರೆಸ್ಟಾರೆಂಟಿನಲ್ಲಿ ಈ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 419 ಕಾನ್ಸಂಟ್ರೇಟರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರತಿಯೊಂದು ಕಾನ್ಸಂಟ್ರೇಟರಿಗೆ 70 ಸಾವಿರ ರೂಪಾಯಿಗಳಂತೆ ಇವರು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ದೆಹಲಿಯಲ್ಲಿ ಪ್ರಸ್ತುತ ಸಂಪೂರ್ಣ ಲಾಕ್​ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ತಂಡಕ್ಕೆ ಲೋಧಿ ಕಾಲನಿಯಲ್ಲಿ ರೆಸ್ಟಾರೆಂಟ್ ಒಂದರ ಬಾಗಿಲು ತೆರೆದಿರುವುದು ಕಾಣಿಸಿದ್ದು, ಸಂಶಯದಿಂದ ಪೊಲೀಸರು ಹೆಚ್ಚಿನ ತಪಾಸಣೆ ನಡೆಸಿದಾಗ ಈ ಕಾಳಸಂತೆ ವ್ಯವಹಾರ ಬೆಳಕಿಗೆ ಬಂದಿದೆ.

ರೆಸ್ಟಾರೆಂಟಿನಲ್ಲಿ ಲ್ಯಾಪ್​ಟಾಪ್​ನೊಂದಿಗೆ ಕುಳಿತಿದ್ದ ವ್ಯಕ್ತಿಯೊಬ್ಬ ಆನ್ಲೈನ್ ಪೋರ್ಟಲ್ ಒಂದರ ಮೂಲಕ ಆಕ್ಸಿಜನ್ ಕಾನ್ಸಂಟ್ರೇಟರುಗಳ ಆರ್ಡರ್ ಪಡೆದುಕೊಳ್ಳುತ್ತಿರುವುದು ಕಂಡು ಬಂದಿದೆ. ರೆಸ್ಟಾರೆಂಟಿನಲ್ಲಿ ಒಂಬತ್ತು ಲೀಟರ್ ಹಾಗೂ ಐದು ಲೀಟರ್​ ಸಾಮರ್ಥ್ಯದ ಕಾನ್ಸಂಟ್ರೇಟರುಗಳಿರುವ 5 ಬಾಕ್ಸ್​ಗಳು ಪತ್ತೆಯಾಗಿವೆ. ಥರ್ಮಲ್ ಸ್ಕ್ಯಾನರುಗಳು, ಎನ್​-95 ಮಾಸ್ಕಗಳು ಸಹ ಇಲ್ಲಿ ಸಿಕ್ಕಿವೆ.

ಅಗತ್ಯ ವಸ್ತುಗಳ ಕಾಯ್ದೆ ಹಾಗೂ ಸೋಂಕುರೋಗ ತಡೆ ಕಾಯ್ದೆಗಳ ಅಡಿಯಲ್ಲಿ ಗೌರವ ಸಿಂಗ್, ಸತೀಶ ಸೇಠಿ, ವಿಕ್ರಾಂತ್ ಹಾಗೂ ಹಿತೇಶ (ಎಲ್ಲರೂ ದೆಹಲಿ ನಿವಾಸಿಗಳು) ಎಂಬುವರ ವಿರುದ್ಧ ಎಫ್​ಐಆರ್​ ದಾಖಲಿಸಿದ್ದು, ನಾಲ್ವರನ್ನೂ ವಶಕ್ಕೆ ಪಡೆಯಲಾಗಿದೆ.

ಛತ್ತರಪುರ್ ಮಂಡಿ ಗ್ರಾಮದಲ್ಲಿ ಖುಲ್ಲರ್ ಫಾರ್ಮ ಪ್ರದೇಶದಲ್ಲಿ ಗೋಡೌನ್ ಇದ್ದು, ಅಲ್ಲಿ ಈ ಸಲಕರಣೆಗಳನ್ನು ಸಂಗ್ರಹಿಸಿ ಇಟ್ಟಿರುವುದಾಗಿಯೂ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಹೀಗಾಗಿ ಮತ್ತಷ್ಟು ಹುಡುಕಾಟ ನಡೆಸಿದ ಪೊಲೀಸರು 387 ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ಪತ್ತೆ ಮಾಡಿ ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಇವುಗಳನ್ನು ಬ್ಲ್ಯಾಕ್​ ಮಾರ್ಕೆಟ್​ ಮೂಲಕ ಸಿಕ್ಕಾಪಟ್ಟೆ ಹೆಚ್ಚಿನ ಬೆಲೆಗೆ ಮಾರಲಾಗುತ್ತಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.