ನವದೆಹಲಿ: ಭಾರತದಲ್ಲಿ ಇಲ್ಲಿಯವರೆಗೆ 358 ಜನರಲ್ಲಿ ಹೊಸ ರೂಪಾಂತರಿ ಒಮಿಕ್ರಾನ್ ಪತ್ತೆಯಾಗಿದ್ದು, ಈ ಪೈಕಿ 114 ಜನರು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್, ದೇಶದಲ್ಲಿ ಇದೀಗ 244 ಸೋಂಕಿತ ಪ್ರಕರಣಗಳಿವೆ ಎಂದು ತಿಳಿಸಿದರು.
ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ 31 ಒಮಿಕ್ರಾನ್ ಪ್ರಕರಣಗಳಿದ್ದು, ಮಹಾರಾಷ್ಟ್ರದಲ್ಲಿ 88, ದೆಹಲಿ 67, ತೆಲಂಗಾಣ 38, ತಮಿಳುನಾಡು 34, ಗುಜರಾತ್ 30, ಕೇರಳ 27 ಹಾಗೂ ರಾಜಸ್ಥಾನದಲ್ಲಿ 22 ಪ್ರಕರಣಗಳು ದಾಖಲಾಗಿವೆ.
ಉಳಿದಂತೆ ಹರಿಯಾಣ, ಒಡಿಶಾ, ಜಮ್ಮು - ಕಾಶ್ಮೀರ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡನಲ್ಲೂ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದರು. ಕಳೆದ 24 ಗಂಟೆಯಲ್ಲಿ ದಾಖಲೆಯ 122 ಹೊಸ ಪ್ರಕರಣಗಳು ದಾಖಲಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚಿನ ಪ್ರಕರಣ ದಾಖಲಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
-
The top five states with the highest number of active cases, at the moment, are Kerala, Maharashtra, Tamil Nadu, West Bengal and Karnataka: Union Health Secretary Rajesh Bhushan on COVID19 pic.twitter.com/G0fwBQ95f2
— ANI (@ANI) December 24, 2021 " class="align-text-top noRightClick twitterSection" data="
">The top five states with the highest number of active cases, at the moment, are Kerala, Maharashtra, Tamil Nadu, West Bengal and Karnataka: Union Health Secretary Rajesh Bhushan on COVID19 pic.twitter.com/G0fwBQ95f2
— ANI (@ANI) December 24, 2021The top five states with the highest number of active cases, at the moment, are Kerala, Maharashtra, Tamil Nadu, West Bengal and Karnataka: Union Health Secretary Rajesh Bhushan on COVID19 pic.twitter.com/G0fwBQ95f2
— ANI (@ANI) December 24, 2021
ಪಶ್ಚಿಮ ಬಂಗಾಳ, ಕೇರಳ, ಮಹಾರಾಷ್ಟ್ರ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಕೆಲವೊಂದು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ವಿಧಿಸಲು ಸೂಚನೆ ನೀಡಿದ್ದಾಗಿ ತಿಳಿಸಿದರು. ದೇಶದಲ್ಲಿ 18,10,083 ಪ್ರತ್ಯೇಕ ಹಾಸಿಗೆಗಳು ಲಭ್ಯವಿದ್ದು, 4,94,314 O2 ಸಪೋರ್ಟ್ ಬೆಡ್, 1,39,300 ICU ಹಾಸಿಗೆ,24,057 ಪೀಡಿಯಾಟ್ರಿಕ್ ICU ಹಾಸಿಗೆ ಮತ್ತು 64,796 ಪೀಡಿಯಾಟ್ರಿಕ್ ನಾನ್-ಐಸಿಯು ಹಾಸಿಗೆಗಳು ಲಭ್ಯ ಇವೆ ಎಂದರು.
ಇದನ್ನೂ ಓದಿರಿ: ಲಂಡನ್ನಿಂದ ವಾಪಸಾದ ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ವಡಿವೇಲುಗೆ ಕೊರೊನಾ
ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ ಇದೀಗ ಭಾರತದಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾರಣ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಹಾಗೂ ಸಾಮೂಹಿಕ ಸಮಾರಂಭಗಳಿಂದ ದೂರ ಉಳಿದುಕೊಳ್ಳುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ರಾಜ್ಯಗಳಿಗೆ ಮಾರ್ಗಸೂಚಿ ಸಹ ನೀಡಿದೆ.