ETV Bharat / bharat

ಅಗ್ನಿಪಥ್ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ಆರೋಪ.. 35 ವಾಟ್ಸಾಪ್ ಗ್ರೂಪ್​ ನಿಷೇಧ - ಕೇಂದ್ರ ಸರ್ಕಾರ ಮೊನ್ನೆಯಷ್ಟೇ ಘೋಷಣೆ ಮಾಡಿದ ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯ ಬಗ್ಗೆ ಸುಳ್ಳು ಸುದ್ದಿ

ಅಗ್ನಿಪಥ್ ಯೋಜನೆಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ಸರ್ಕಾರವು 35 ವಾಟ್ಸಾಪ್ ಗ್ರೂಪ್​ಗಳನ್ನು ​ನಿಷೇಧಿಸಿದೆ.

ಅಗ್ನಿಪಥ್ ಬಗ್ಗೆ ಸುಳ್ಳು ಸುದ್ದಿ ಪ್ರಕಟ ಮಾಡಿದ್ದ 35 ವಾಟ್ಸಾಪ್ ಗ್ರೂಪ್​ ನಿಷೇಧ

author img

By

Published : Jun 19, 2022, 10:07 PM IST

ನವದೆಹಲಿ: ಕೇಂದ್ರ ಸರ್ಕಾರ ಮೊನ್ನೆಯಷ್ಟೇ ಘೋಷಣೆ ಮಾಡಿದ ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದ ಆರೋಪದಡಿ 35 ವಾಟ್ಸಾಪ್ ಗುಂಪುಗಳನ್ನು ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಘೋಷಣೆಯಾದಾಗಿನಿಂದ ದೇಶದ ವಿವಿಧ ಭಾಗಗಳಲ್ಲಿ ಯೋಜನೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಈ ಬೆಳವಣಿಗೆ ಕಂಡುಬಂದಿದೆ.

ಅಗ್ನಿಪಥ್ ಯೋಜನೆಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ಸರ್ಕಾರವು 35 ವಾಟ್ಸಾಪ್ ಗ್ರೂಪ್​ಗಳನ್ನು ​ನಿಷೇಧಿಸಿದೆ ಎಂದು ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದಾಗ್ಯೂ, ಈ ಗ್ರೂಪ್​ ಬಗ್ಗೆ ಮಾಹಿತಿ ಅಥವಾ ಅವುಗಳ ನಿರ್ವಾಹಕರ ವಿರುದ್ಧ ಯಾವುದಾದರೂ ಕ್ರಮವನ್ನು ಜರುಗಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ವ್ಯಾಪಕ ಪ್ರತಿಭಟನೆಗಳ ನಡುವೆಯೂ ಅಗ್ನಿಪಥ್​ ನೇಮಕಾತಿ ಪ್ರಕ್ರಿಯೆಗೆ ಎಲ್ಲಾ ಕಾರ್ಯಗಳನ್ನು ಮೂರು ಸೇನೆಗಳು ಮಾಡಿಕೊಳ್ಳುತ್ತಿವೆ.

ಇದನ್ನೂ ಓದಿ: ಅಸ್ಸೋಂನಲ್ಲಿ ವರುಣಾರ್ಭಟ: 31 ಲಕ್ಷ ಮಂದಿ ನಿರಾಶ್ರಿತರು, 62 ಜನ ಸಾವು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.