ಥೇಣಿ (ತಮಿಳುನಾಡು) : ಥೇಣಿ ಜಿಲ್ಲೆಯ 14 ವರ್ಷದ ಬಾಲಕ ಸ್ನೇಹನ್ ಈಜಿನಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದ್ದಾನೆ. ಐರ್ಲೆಂಡ್‌ನ ಉತ್ತರ ಕ್ಯಾನಲ್ನಿಂದ ಸ್ಕಾಟ್ಲೆಂಡ್‌ಗೆ ಇರುವ 35 ಕಿ.ಮೀ. ದೂರವನ್ನು ಸುಮಾರು 14 ಗಂಟೆ 39 ನಿಮಿಷಗಳಲ್ಲಿ ಈಜಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾನೆ.
ಸ್ನೇಹನ್ ಈಗಾಗಲೇ ಈಜಿನಲ್ಲಿ ಹಲವು ಸಾಧನೆ ಮಾಡಿದ್ದು, ಕೆಲವು ವರ್ಷಗಳ ಹಿಂದೆ ಬಾಗ್ ಜಲಸಂಧಿಯನ್ನು ದಾಟಿ ಸಾಧನೆ ಮಾಡಿದ್ದನು. ಇದೀಗ ಐರ್ಲೆಂಡ್‌ನ ಉತ್ತರ ಚಾನಲ್‌ನಿಂದ ಸ್ಕಾಟ್ಲೆಂಡ್‌ಗೆ ಇರುವ 35 ಕಿ.ಮೀ ದೂರ ಈಜಿ ಮತ್ತೊಂದು ಮೈಲಿಗಲ್ಲನ್ನು ಸೃಷ್ಟಿಸಿದ್ದಾನೆ.
ಈ ಸಾಧನೆಗಾಗಿ ಸ್ನೇಹನ್ ತಮ್ಮ ಈಜು ತರಬೇತುದಾರ ವಿಜಯಕುಮಾರ್ ಅವರೊಂದಿಗೆ ಇಂಗ್ಲೆಂಡ್‌ನ ಡೊನಾಘಡೆ ಬಂದರಿನಲ್ಲಿ ಕೆಲವು ವಾರಗಳ ತರಬೇತಿಯನ್ನು ನಡೆಸಿದ್ದರು. 14 ವರ್ಷದೊಳಗಿನವರ ವಿಭಾಗದಲ್ಲಿ ಕಾಲುವೆ ದಾಟಿದ 4ನೇ ಬಾಲಕ ಸ್ನೇಗನ್ ಎಂಬುದು ಗಮನಾರ್ಹ ಸಂಗತಿ.
ಇದನ್ನೂ ಓದಿ : ರಷ್ಯಾ ಮತ್ತು ಉಕ್ರೇನ್ ಯುದ್ಧದ ಭೀಕರತೆ: 4 ತಿಂಗಳ ಬಳಿಕ ಬಿಡುಗಡೆಯಾದ ಯೋಧನ ಅಂದು, ಇಂದಿನ ಸ್ಥಿತಿ