ETV Bharat / bharat

ಗುಜರಾತ್: ಬೋರ್‌ವೆಲ್​ನಿಂದ ರಕ್ಷಿಸಿದ್ದ ಬಾಲಕಿ ಚಿಕಿತ್ಸೆ ಫಲಿಸದೆ ಸಾವು - ರಕ್ಷಣೆ

30 ಅಡಿ ಬೋರ್​ವೆಲ್​ ಒಳಗಿನಿಂದ ರಕ್ಷಿಸಿದ್ದ ಮೂರು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಗುಜರಾತ್‌ನಲ್ಲಿ ಈ ಘಟನೆ ನಡೆಯಿತು.

borewell
ಬೋರವೆಲ್​​ ಒಳಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯ ರಕ್ಷಣೆ
author img

By PTI

Published : Jan 2, 2024, 9:21 AM IST

Updated : Jan 2, 2024, 9:52 AM IST

ಗುಜರಾತ್: ಸುಮಾರು 30 ಅಡಿ ಆಳದ ತೆರೆದ ಬೋರ್‌ವೆಲ್‌ ಒಳಗಿಂದ ರಕ್ಷಿಸಿದ್ದ 3 ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ​ದ್ವಾರಕಾ ಜಿಲ್ಲೆಯ ರಾನ್​ ಗ್ರಾಮದಲ್ಲಿ ನಡೆಯಿತು. ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಬಾಲಕಿಯನ್ನು ರಕ್ಷಿಸಿತ್ತು. ರಕ್ಷಿಸಿದ 1 ಗಂಟೆಯೊಳಗೆ ಖಂಭಾಲಿಯಾ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಅಧಿಕಾರಿಗಳು ತಿಳಿಸಿದ್ದಾರೆ.

  • #WATCH | Gujarat: Rescue operation underway to rescue a 2.5-year-old girl who fell into a borewell in Ran village of Kalyanpur tehsil of Dwarka district.

    Indian Army personnel are also present at the spot and are assisting in the rescue operation. NDRF team has also been called… pic.twitter.com/s0INRX95Te

    — ANI (@ANI) January 1, 2024 " class="align-text-top noRightClick twitterSection" data=" ">

ಸಂಪೂರ್ಣ ವಿವರ: ​ಸೋಮವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಬಾಲಕಿ ಆಟವಾಡುತ್ತಾ ಹೋಗಿ ಅಲ್ಲೇ ಇದ್ದ ಬೋರ್‌ವೆಲ್‌ಗೆ ಬಿದ್ದಿದ್ದಳು. ಈ ಕುರಿತು ಮಾಹಿತಿ ಪಡೆದ ಜಿಲ್ಲಾಡಳಿತವು ರಕ್ಷಣೆಗಾಗಿ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಹಾಯ ಕೋರಿತ್ತು. ತಜ್ಞರ​ ತಂಡ ಗಾಂಧಿನಗರದಿಂದ ರಾತ್ರಿ 8 ಗಂಟೆಯ ಸುಮಾರಿಗೆ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಆರಂಭಿಸಿತ್ತು. ಬಾಲಕಿಯ ಕೈಗಳನ್ನು ಹಗ್ಗದಿಂದ ಕಟ್ಟಿ ಅದಕ್ಕೆ ಎಲ್​ ಆಕಾರದ ಕೊಕ್ಕೆ ಸಿಕ್ಕಿಸಲಾಗಿತ್ತು. ಆ ಬಳಿಕ ಸಮಾನಾಂತರವಾಗಿ ಜೆಸಿಬಿ ಮೂಲಕ ಮಣ್ಣು ಅಗೆಯಲಾಯಿತು ಎಂದು ಎನ್‌ಡಿಆರ್‌ಎಫ್ ಅಧಿಕಾರಿ ಮಾಹಿತಿ ಒದಗಿಸಿದರು.

"ರಾತ್ರಿ 9:50ಕ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಯಿತು" ಎಂದು ಜಿಲ್ಲಾಧಿಕಾರಿ ಎಚ್‌.ಬಿ.ಭಗೋರಾ ತಿಳಿಸಿದ್ದರು. ಆದರೆ ಇದೀಗ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ಇದನ್ನೂ ಓದಿ: ನೋಯ್ಡಾ: ಮಾಲ್‌ ಪಾರ್ಕಿಂಗ್‌ ಸ್ಥಳದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

Last Updated : Jan 2, 2024, 9:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.