ETV Bharat / bharat

ಕೊನೆಗೂ ಉಳಿಯಲಿಲ್ಲ ಕೊಳವೆ ಬಾವಿಗೆ ಬಿದ್ದ ಮೂರು ವರ್ಷದ ಬಾಲಕ

ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮೂರು ವರ್ಷದ ಬಾಲಕನನ್ನು ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಯಶಸ್ವಿಯಾದರಾದೂ, ಮಗುವಿನ ಪ್ರಾಣ ಉಳಿಯಲಿಲ್ಲ.

3-year-old falls into 20-feet deep borewell in Uttar Pradesh
ಕೊನೆಗೂ ಉಳಿಯಲಿಲ್ಲ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷ ಬಾಲಕ
author img

By

Published : Apr 28, 2021, 9:52 AM IST

ಹಾರ್ದೋಯಿ(ಉತ್ತರ ಪ್ರದೇಶ): ಆಟ ಆಡುತ್ತಿದ್ದಾಗ ಕೊಳವೆ ಬಾವಿಯೊಳಗೆ ಬಿದ್ದ ಮೂರು ವರ್ಷ ಬಾಲಕನನ್ನು ಉಳಿಸಲು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಕೈಗೊಂಡಿದ್ದ ಪ್ರಯತ್ನ ವಿಫಲವಾಗಿದೆ.

ಉತ್ತರ ಪ್ರದೇಶದ ಹಾರ್ದೋಯಿ ಜಿಲ್ಲೆಯ ಹರ್ಪಲ್​ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸತೌತ ಗ್ರಾಮದಲ್ಲಿ ಘಟನೆ ನಡೆದಿದೆ. ಶ್ಯಾಮ್​ಜಿತ್ ಎಂಬ ಮೂರು ವರ್ಷದ ಬಾಲಕ ತನ್ನ ಏಳು ವರ್ಷದ ಅಣ್ಣನ ಜೊತೆ ಆಡವಾಡುತ್ತಿದ್ದಾಗ ನಿರ್ಜೀವ ಕೊಳವೆ ಬಾವಿಗೆ ಬಿದ್ದಿದ್ದಾನೆ.

ಇದನ್ನೂ ಓದಿ: ಕೊಳವೆ ಬಾಯಿಯೊಳಗೆ ಬಿದ್ದ ಮೂರು ವರ್ಷದ ಬಾಲಕನ ರಕ್ಷಣೆಗೆ ಹರಸಾಹಸ

ಸುಮಾರು 25 ಅಡಿ ಆಳದಲ್ಲಿ ಬಾಲಕ ಸಿಲುಕಿಕೊಂಡಿದ್ದು, ಬಾಲಕನ ಅಣ್ಣನ ಚೀರಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದರು. ನಂತರ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದರು. ತುರ್ತು ಸೇವೆಗಳ ಸಿಬ್ಬಂದಿ ಮತ್ತು ಪೊಲೀಸರು ಶ್ರಮವಹಿಸಿ ಆತನನ್ನು ಹೊರತೆಗೆದಿದ್ದರು.

ಗಂಭೀರ ಗಾಯಗಳ ಹಿನ್ನೆಲೆಯಲ್ಲಿ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.