ETV Bharat / bharat

ರಾಜಸ್ಥಾನ: ತರಬೇತಿ ವೇಳೆ ಮೂವರು ಸೈನಿಕರು ಬೆಂಕಿಗಾಹುತಿ

author img

By

Published : Mar 25, 2021, 7:31 PM IST

Updated : Mar 25, 2021, 7:39 PM IST

ರಾಜಸ್ಥಾನದ ಶ್ರೀಗಂಗನಗರ ಜಿಲ್ಲೆಯಲ್ಲಿ ನಡೆಯುತ್ತಿದ್ದ ಮಿಲಿಟರಿ ತರಬೇತಿ ವೇಳೆ ಮೂವರು ಸೈನಿಕರು ಬೆಂಕಿಗೆ ಆಹುತಿಯಾಗಿದ್ದಾರೆ. ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಎಂ.ಎಚ್.ಸುರತ್‌ಗಢದಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ದುರ್ಘಟನೆಗೆ ರಾಜಸ್ಥಾನ ಸಿಎಂ ಸಂತಾಪ ಸೂಚಿಸಿದ್ದಾರೆ.

3 soldiers charred to death during training exercise in Rajasthan
ರಾಜಸ್ಥಾನದಲ್ಲಿ ತರಬೇತಿ ವೇಳೆ 3 ಸೈನಿಕರು ಬೆಂಕಿಗಾಹುತಿ

ಜೈಪುರ: ರಾಜಸ್ಥಾನದ ಶ್ರೀಗಂಗನಗರ ಜಿಲ್ಲೆಯಲ್ಲಿ ತರಬೇತಿ ನಡೆಯುತ್ತಿದ್ದ ವೇಳೆ ಮೂವರು ಸೈನಿಕರು ಜೀವಂತ ಸುಟ್ಟು ಕರಕಲಾಗಿದ್ದು, ಐವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾತ್ರಿ ವೇಳೆ ನಡೆಯುತ್ತಿದ್ದ ತರಬೇತಿ ಕಾರ್ಯದಲ್ಲಿ ದುರದೃಷ್ಟವಶಾತ್ ಸಾವು ನೋವುಗಳು ವರದಿಯಾಗಿವೆ ಎಂದು ರಕ್ಷಣಾ ಪಿಆರ್​ಒ ಲೆಫ್ಟಿನೆಂಟ್ ಕರ್ನಲ್ ಅಮಿತಾಬ್ ಶರ್ಮಾ ಮಾಹಿತಿ ನೀಡಿದರು.

ಸಿಎಂ ಸಂತಾಪ
ಸಿಎಂ ಸಂತಾಪ

ಗಾಯಾಳು ಸೈನಿಕರನ್ನು ಎಂ.ಎಚ್.ಸುರತ್‌ಗಢದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಸೈನಿಕರಿಗೆ ವಿಭಿನ್ನ ತರಬೇತಿ ನೀಡುತ್ತಿರುವಾಗ ವಾಡಿಕೆಯಂತೆ ಈ ಪ್ರಯೋಗವನ್ನು ಮಾಡಿಸಲಾಗುತ್ತಿತ್ತು. ಈ ವೇಳೆ ದುರಂತ ನಡೆದಿದೆ ಎಂದು ಅವರು ಹೇಳಿದ್ದಾರೆ.

ತರಬೇತಿ ವೇಳೆ ಮೂವರು ಸೈನಿಕರು ಬೆಂಕಿಗಾಹುತಿ

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ: ಸಿಆರ್‌ಪಿಎಫ್ ಯೋಧ ಹುತಾತ್ಮ, ಇಬ್ಬರಿಗೆ ಗಾಯ

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘಟನೆ ಬಗ್ಗೆ ಟ್ವೀಟ್ ಮಾಡಿ, ಸಂತಾಪ ಸೂಚಿಸಿದ್ದಾರೆ. ಅವಘಡದಿಂದ ದುಃಖವಾಗಿದೆ. ಮೂವರು ಸೇನಾ ಸೈನಿಕರು ಪ್ರಾಣ ಕಳೆದುಕೊಂಡಿದ್ದು, ಐವರು ಗಾಯಗೊಂಡಿದ್ದಾರೆ. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪ. ಕುಟುಂಬದವರಿಗೆ ದುರ್ಘಟನೆಯನ್ನು ಅರಗಿಸಿಕೊಳ್ಳುವ ಶಕ್ತಿ ಬರಲಿ ಎಂದಿದ್ದಾರೆ.

Last Updated : Mar 25, 2021, 7:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.