ಅಗರ್ತಲಾ: ತ್ರಿಪುರಾದ ಸೆಪಹಿಜಾಲಾ ಜಿಲ್ಲೆಯ ಸೋನಮುರಾ ಉಪವಿಭಾಗದ ಮೆಲಾಘರ್‌ನಲ್ಲಿ ಫೆಬ್ರವರಿ 8 ಹಾಗು 10 ರಂದು ವ್ಯಕ್ತಿಯೊಬ್ಬನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ತ್ರಿಪುರಾ ಪೊಲೀಸರು ಇಂದು ಮೂವರನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಫೆಬ್ರವರಿ 08 ರಂದು ರಾತ್ರಿ ಪೋಂಗ್ಬರಿ ಕೆಮ್ಟಾಲ್ ರಸ್ತೆಯಲ್ಲಿ ಸಾಜಿಬ್ ಬರ್ಮನ್ ಅವರ ಮನೆಯ ಸಮೀಪ ದೈಹಿಕ ಹಲ್ಲೆ ನಡೆದಿದೆ. ಪೋಂಘರಿಯ ಬಲರಾಮ್ ದೇಬನಾಥ್ (25) ಮೃತ ವ್ಯಕ್ತಿ ಎಂಬುದು ತಿಳಿದು ಬಂದಿದೆ.
ಘಟನೆಯಲ್ಲಿ ಒಬ್ಬ ಪ್ರಸೇನ್‌ಜಿತ್ ನಾಮಾ ಬಲರಾಮ್ ದೇಬನಾಥ್ ಮತ್ತು ಸಾಜಿಬ್ ಬರ್ಮನ್ ಮೇಲೆ ಹರಿತವಾದ ಕತ್ತರಿಸುವ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ನಂತರ ಅವರಿಬ್ಬರನ್ನು ಮೆಲಾಘರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ತನಿಖೆಯ ಸಮಯದಲ್ಲಿ ಪೊಲೀಸರು ಇಂದು ಮೆಲಾಘರ್ ಪೊಲೀಸ್ ಠಾಣಾ ವ್ಯಾಪ್ತಿಯ ಪೊಂಗ್ಬರಿಯ ಮೂವರು ಆರೋಪಿಗಳಾದ ಪ್ರಸೇನ್‌ಜಿತ್ ನಾಮಾ (34) ರತನ್ ನಾಮಾ (35) ಬಾದಲ್ ನಾಮಾ (28) ಎಂಬ ಮೂವರ ವಿರುದ್ದ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ಓದಿ: ಪ್ರಕರಣ ಇತ್ಯರ್ಥವಾಗುವವರೆಗೆ ಧಾರ್ಮಿಕ ಸಂಕೇತದ ಉಡುಪು ಧರಿಸುವಂತಿಲ್ಲ.. ವಿಸ್ತೃತ ಪೀಠದಲ್ಲಿ ಹೀಗಿತ್ತು ವಾದ ಸರಣಿ!