ಚೆನ್ನೈ: ಅಕ್ರಮವಾಗಿ ಸಾಗಿಸುತ್ತಿದ್ದ 1.85 ಕೋಟಿ ಮೌಲ್ಯದ 3.5 ಕೆಜಿ ಚಿನ್ನವನ್ನು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ದುಬೈನಿಂದ ಆಗಮಿಸಿದ ನಾಲ್ಕು ಪ್ರಯಾಣಿಕರನ್ನು ಪರಿಶೀಲಿಸಿದಾಗ ಮಾಸ್ಕ್ನಲ್ಲಿ 114 ಗ್ರಾಂ ತೂಕದ ಎರಡು ಪ್ಯಾಕೆಟ್ ಚಿನ್ನದ ಪೇಸ್ಟ್ ಮತ್ತು ಮತ್ತು ಗುದನಾಳದಲ್ಲಿ ಅಡಗಿರುವ 16 ಕಟ್ಟುಗಳ ಚಿನ್ನದ ಪೇಸ್ಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 97.82 ಲಕ್ಷ ಮೌಲ್ಯದ 1.84 ಕೆಜಿ ಚಿನ್ನ ವಶಕ್ಕೆ ಪಡೆದು ಮೂವರನ್ನು ಬಂಧಿಸಲಾಗಿದೆ.
ಮತ್ತೊಬ್ಬ ಪ್ರಯಾಣಿಕನ ಪ್ಯಾಂಟ್ ಜೇಬಿನಲ್ಲಿದ್ದ ಚಿನ್ನದ ಚೂರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸತತ ಪ್ರಶ್ನೆಗಳ ನಂತರ ಐವರು ಪ್ರಯಾಣಿಕರು ತಮ್ಮ ಗುದನಾಳದಲ್ಲಿ ಅಡಗಿಸಿಟ್ಟಿದ್ದ ಚಿನ್ನದ ಪೇಸ್ಟ್ ಕಟ್ಟುಗಳ ಬಗ್ಗೆ ಮಾಹಿತಿ ನೀಡಿದ್ರು. ಗುದನಾಳದಿಂದ 12 ಕಟ್ಟುಗಳ ಚಿನ್ನದ ಪೇಸ್ಟ್ ಅನ್ನು ವಶಪಡಿಸಿಕೊಳ್ಳಲಾಗಿದೆ, ಜೀನ್ಸ್‌ನಿಂದ ಆರು ಪಟ್ಟಿಗಳು ಮತ್ತು ಐದು ಚಿನ್ನದ ಕಟ್ ಬಿಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 87.48 ಲಕ್ಷ ರೂಪಾಯಿ ಮೌಲ್ಯದ 1.65 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.