ಹಲ್ಡಿಯಾ (ಪಶ್ಚಿಮ ಬಂಗಾಳ): ಹಲ್ಡಿಯಾದಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಕಟ್ಟಡದಲ್ಲಿ ಸ್ಫೋಟ ಸಂಭವಿಸಿ ಅಗ್ನಿ ಅವಘಡ ಉಂಟಾದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಸುಮಾರು 25 ಮಂದಿ ಗಾಯಗೊಂಡಿದ್ದಾರೆ.
ಇಂದು ಸಂಜೆ ಘಟನೆ ನಡೆದಿದ್ದು, ಸ್ಥಳಕ್ಕೆ 10 ವಾಹನಗಳಲ್ಲಿ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಗಾಯಾಳುಗಳನ್ನು ತಮ್ಲೋಕ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಕೋಲ್ಕತ್ತಾಗೆ ರವಾನಿಸಲಾಗಿದೆ.
ಇದನ್ನೂ ಓದಿ: ಚಳಿಯಲ್ಲಿ ಕ್ಯಾಂಪ್ಫೈರ್ ಹಾಕಿದ್ದಾಗ ಸೀರೆಗೆ ಬೆಂಕಿ ತಗುಲಿ ವೃದ್ಧೆ ಸಾವು
-
Deeply anguished by the fire in IOC, Haldia.
— Mamata Banerjee (@MamataOfficial) December 21, 2021 " class="align-text-top noRightClick twitterSection" data="
Three precious lives were lost and my thoughts are with the bereaved families in this hour of grief. Those injured are being brought to Kolkata through a green corridor. GoWB will extend all assistance to ensure their speedy recovery.
">Deeply anguished by the fire in IOC, Haldia.
— Mamata Banerjee (@MamataOfficial) December 21, 2021
Three precious lives were lost and my thoughts are with the bereaved families in this hour of grief. Those injured are being brought to Kolkata through a green corridor. GoWB will extend all assistance to ensure their speedy recovery.Deeply anguished by the fire in IOC, Haldia.
— Mamata Banerjee (@MamataOfficial) December 21, 2021
Three precious lives were lost and my thoughts are with the bereaved families in this hour of grief. Those injured are being brought to Kolkata through a green corridor. GoWB will extend all assistance to ensure their speedy recovery.
ಘಟನೆ ಬಗ್ಗೆ ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಹಲ್ಡಿಯಾದ ಐಒಸಿಯಲ್ಲಿ ಸಂಭವಿಸಿದ ಬೆಂಕಿಯಿಂದ ತೀವ್ರ ನೊಂದಿದ್ದೇನೆ. ಮೂರು ಅಮೂಲ್ಯ ಜೀವಗಳು ಕಳೆದುಹೋಗಿವೆ ಮತ್ತು ದುಃಖದ ಈ ಸಮಯದಲ್ಲಿ ದುಃಖಿತ ಕುಟುಂಬಗಳೊಂದಿಗೆ ಸಾಂತ್ವನ ಹೇಳುತ್ತೇನೆ. ಗಾಯಾಳುಗಳ ತ್ವರಿತ ಚೇತರಿಕೆಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಾಯವನ್ನು ನೀಡುತ್ತದೆ" ಎಂದು ಹೇಳಿದ್ದಾರೆ.