ನವದೆಹಲಿ: ದೇಶಾದ್ಯಂತ ಕೊರೊನಾ 2ನೇ ಅಲೆ ಅಬ್ಬರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಇದೀಗ ಕೊರೊನಾ ಇನ್ನಷ್ಟು ಉಲ್ಬಣವಾಗಲಿದೆ ಅಂತ ಐಐಟಿ ವಿಜ್ಞಾನಿಗಳು ಆತಂಕಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
ದೇಶದಲ್ಲಿ ವ್ಯಾಪಿಸಿರುವ 2ನೇ ಅಲೆಯು ಮೇ11-15ರ ನಡುವೆ ಇನ್ನಷ್ಟು ಹೆಚ್ಚಲ್ಲಿದ್ದು, ಒಟ್ಟು 33 ರಿಂದ 35 ಲಕ್ಷದಷ್ಟು ಸಕ್ರಿಯ ಪ್ರಕರಣಗಳು ದಾಖಲಾಗಲಿವೆ ಎಂಬ ಮಾಹಿತಿ ತಿಳಿಸಿದೆ. ಆದರೆ, ಈ ಸಕ್ರಿಯ ಪ್ರಕರಣಗಳ ಸಂಖ್ಯೆಯು ಮೇ ಅಂತ್ಯದ ವೇಳೆಗೆ ತೀವ್ರವಾಗಿ ಕುಸಿಯಲಿದೆ ಎಂದಿದ್ದಾರೆ.
ವೈರಾಲಜಿಸ್ಟ್ ಹೇಳೋದೇನು..?
ವೈರಾಲಜಿಸ್ಟ್ ಗಗನ್ದೀಪ್ ಕಾಂಗ್ ಅವರ ಪ್ರಕಾರ, ಮೊದಲ ಬಾರಿ ಬಂದಿದ್ದ ಅಲೆಗೆ ಹೋಲಿಸಿದರೆ 2ನೇ ಅಲೆ ತುಂಬಾನೆ ವೇಗವಾಗಿ ಹರಡುತ್ತಿದೆ. ಏಕೆಂದರೆ ಮೊದಲ ಅಲೆಯಲ್ಲಿ ಕಂಡು ಬಂದ ವೈರಸ್ ಭಿನ್ನವಾಗಿದೆ. ಜನತೆ ಸಹ ನಿಯಮಾವಳಿಯ ಸರಿಯಾಗಿ ಅನುಸರಿಸುತ್ತಿಲ್ಲ ಮತ್ತು ವೈರಸ್ ರೂಪಾಂತರವು ನಾವು ಈ ಹಿಂದೆ ನೋಡಿದ್ದಕ್ಕಿಂತ ಹೆಚ್ಚು ಪ್ರಬಲವಾಗಿದೆ ಎಂದಿದ್ದಾರೆ.
ಸರ್ಕಾರ ಪ್ರತಿಯೊಬ್ಬರಿಗೆ ತಕ್ಷಣವೇ ಲಸಿಕೆ ನೀಡಲು ಸಾಧ್ಯವಾಗದಿರುವ ಕಾರಣ, ಜನತೆ ಒಬ್ಬರಿಗೊಬ್ಬರು ಸಂಪರ್ಕಕ್ಕೆ ಬರದೇ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡರೇ ಮಾತ್ರ ವೈರಸ್ ಹರಡುವುದನ್ನು ತಡೆಯಬಹುದು. ಇದರರ್ಥ ಉತ್ತಮ ಗುಣಮಟ್ಟದ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು.
ಆರೋಗ್ಯ ವ್ಯವಸ್ಥೆ ಬುಡಮೇಲು
2ನೇ ಅಲೆಯು ಹೆಚ್ಚು ಗಂಭೀರವಾಗಿದೆ ಏಕೆಂದರೆ ದೊಡ್ಡ ಸಮುದಾಯಕ್ಕೆ ಸೋಂಕು ತಗುಲಿದ್ದರೆ, ಅದು ಅಲ್ಪ ಪ್ರಮಾಣದ ಜನರನ್ನು ಗಂಭೀರ ಅನಾರೋಗ್ಯಕ್ಕೆ ಒಳಮಾಡುತ್ತದಲ್ಲದೆ, ಆರೋಗ್ಯ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ.
ಸರ್ಕಾರದ ಎಲ್ಲ ಕ್ರಮದ ನಡುವೆಯೂ ಪ್ರಕರಣಗಳು ಏರುತ್ತಲೇ ಇದೆ. ಆದರೆ ಅದೃಷ್ಟವಶಾತ್ ರಾಜ್ಯಗಳು ಈಗೀಗ ಲಾಕ್ಡೌನ್ ಘೋಷಿಸುವ ಮೂಲಕ ಸೋಂಕಿಗೆ ಕಡಿವಾಣ ಹಾಕಲು ಮುಂದಾಗಿವೆ. ಇದರಿಂದ ಸರಿ ಸುಮಾರು 4 ಲಕ್ಷ ಜನರನ್ನು ಸೋಂಕಿನಿಂದ ಪಾರುಮಾಡಬಹುದು ಎಂದು ಅಂದಾಜಿಸಲಾಗಿದೆ.
2ನೇ ಅಲೆಯ ತೀವ್ರತೆಯೂ ಅಂದಾಜು ಮೂರರಿಂದ ನಾಲ್ಕು ತಿಂಗಳ ಕಾಲ ಮುಂದುವರೆಯಬಹುದು. ನಾವೀಗ 2ನೇ ತಿಂಗಳ ಅಂತ್ಯದಲ್ಲಿದ್ದು, ಸೋಂಕಿನ ತೀವ್ರತೆ ಹಾಗೂ ಕ್ಷೀಣವಾಗುವ ಸಮಯಕ್ಕೆ ಹತ್ತಿರವಾಗಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಮನೆಯಲ್ಲೇ ಸಿಲುಕಿದ್ದೀರಾ? ಫಿಟ್‌ನೆಸ್ ವ್ಯಾಯಾಮ ಪ್ರಾರಂಭಿಸಲು ಕೆಲ ಸಲಹೆಗಳು ಇಲ್ಲಿವೆ!