ETV Bharat / bharat

SIMBEX-2021 : ಭಾರತ, ಸಿಂಗಾಪುರ ನಡುವೆ ನೌಕಾ ಸಮರಾಭ್ಯಾಸ ಅಂತ್ಯ - ಸಿಂಗಾಪುರ-ಇಂಡಿಯಾ ಸಾಗರೋತ್ತರ ದ್ವಿಪಕ್ಷೀಯ ಸಮರಾಭ್ಯಾಸ

SIMBEX 1994ರಲ್ಲಿ ಆರಂಭವಾದ, ಭಾರತ ಮತ್ತು ಸಿಂಗಾಪುರ ನೌಕಾಪಡೆಗಳ ಸಾಗರೋತ್ತರ ಸಮರಾಭ್ಯಾಸವಾಗಿದೆ. ಭಾರತ ಸ್ವಾತಂತ್ರ್ಯಗೊಂಡು 75ನೇ ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ವರ್ಷದ SIMBEX ಕೂಡ ವಿಶೇಷವಾಗಿದೆ..

28th edition of Singapore-India Maritime bilateral exercise 'SIMBEX' concludes
SIMBEX-2021: ಭಾರತ, ಸಿಂಗಾಪುರ ನಡುವೆ ನೌಕಾ ಸಮರಾಭ್ಯಾಸ ಅಂತ್ಯ
author img

By

Published : Sep 4, 2021, 8:26 PM IST

ನವದೆಹಲಿ : ಭಾರತ ಮತ್ತು ಸಿಂಗಾಪುರದ ನಡುವೆ ಸೆಪ್ಟೆಂಬರ್ 2ರಂದು ಆರಂಭವಾಗಿದ್ದ ಸಿಂಗಾಪುರ-ಇಂಡಿಯಾ ಸಾಗರೋತ್ತರ ದ್ವಿಪಕ್ಷೀಯ ಸಮರಾಭ್ಯಾಸದ (SIMBEX) 28ನೇ ಆವೃತ್ತಿ ಇಂದು ಸಮಾರೋಪಗೊಂಡಿದೆ.

ಭಾರತೀಯ ನೌಕಾಪಡೆಯು ಗೈಡೆಡ್ ಮಿಸೈಲ್ ಡೆಸ್ಟ್ರಾಯರ್ ಐಎನ್ಎಸ್ ರಣವಿಜಯ್, ಐಎನ್ಎಸ್ ಕಿಲ್ತಾನ್ ಮತ್ತು ಐಎನ್ಎಸ್ ಕೋರಾ ಮತ್ತು ಪಿ8ಐ ಲಾಂಗ್ ರೇಂಜ್ ಮ್ಯಾರಿಟೈಮ್ ಪೆಟ್ರೋಲ್ ಏರ್​ಕ್ರಾಫ್ಟ್​ ಈ ಸಮರಾಭ್ಯಾಸದಲ್ಲಿ ಭಾಗವಹಿಸಿದ್ದವು.

28th edition of Singapore-India Maritime bilateral exercise 'SIMBEX' concludes
ಭಾರತ, ಸಿಂಗಾಪುರ ನಡುವೆ ನೌಕಾ ಸಮರಾಭ್ಯಾಸ

ಸಿಂಗಾಪುರದಿಂದ ಫರ್ಮಿಡಬಲ್ ಕ್ಲಾಸ್ ಫ್ರಿಗೇಟ್, ಎಸ್-70ಬಿ ನೌಕಾ ಹೆಲಿಕಾಪ್ಟರ್, ಆರ್ಚರ್ ಕ್ಲಾಸ್ ಜಲಾಂತರ್ಗಾಮಿ ನೌಕೆ, ನಾಲ್ಕು ಎಫ್-16 ಫೈಟರ್ ಏರ್ ಕ್ರಾಫ್ಟ್​​ಗಳು ಮುಂತಾದವುಗಳು ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದವು.

SIMBEX 1994ರಲ್ಲಿ ಆರಂಭವಾದ, ಭಾರತ ಮತ್ತು ಸಿಂಗಾಪುರ ನೌಕಾಪಡೆಗಳ ಸಾಗರೋತ್ತರ ಸಮರಾಭ್ಯಾಸವಾಗಿದೆ. ಭಾರತ ಸ್ವಾತಂತ್ರ್ಯಗೊಂಡು 75ನೇ ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ವರ್ಷದ SIMBEX ಕೂಡ ವಿಶೇಷವಾಗಿದೆ.

ಈ ಬಾರಿಯ SIMBEX ಯಶಸ್ಸು ಕಂಡಿದ್ದು, ಮುಂಬರುವ ವರ್ಷಗಳಲ್ಲಿ ಎರಡೂ ರಾಷ್ಟ್ರಗಳ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಈ ಸಮರಾಭ್ಯಾಸ ಅವಕಾಶ ಕಲ್ಪಿಸುತ್ತದೆ ಎಂದು ಭಾರತೀಯ ನೌಕಾಪಡೆ ಹೇಳಿದೆ.

ಇದನ್ನೂ ಓದಿ: ಪಾಕ್​ ಐಎಸ್​ಐ ಮುಖ್ಯಸ್ಥ ಅಫ್ಘನ್​ಗೆ ಭೇಟಿ : ಅಂತಾರಾಷ್ಟ್ರೀಯ ಸಮುದಾಯದಲ್ಲಿ ಕುತೂಹಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.