ETV Bharat / bharat

ಕೊರೊನಾ ಸೋಂಕಿಗೆ ಭಾರತದಲ್ಲಿ ಸಾವಿರ ವೈದ್ಯರು ಬಲಿ - 270 doctors across the country have succumbed to the coronavirus

ಕಳೆದ ವರ್ಷ ಕೋವಿಡ್​ ಮೊದಲ ಅಲೆಯಲ್ಲಿ ಭಾರತದಾದ್ಯಂತ 748 ವೈದ್ಯರು ವೈರಸ್​ಗೆ ಬಲಿಯಾಗಿದ್ದರು. ಆದರೆ ಈಗ ಎರಡನೇ ಅಲೆ ವೇಳೆ ಅಲ್ಪಾವಧಿಯಲ್ಲೇ ನಾವು ರೋಗಿಗಳ ಸೇವೆಯಲ್ಲಿದ್ದ 270 ವೈದ್ಯರನ್ನು ಕಳೆದುಕೊಂಡಿದ್ದೇವೆ.

270 doctors have died of COVID in second wave of pandemic
ಕೋವಿಡ್​ 2ನೇ ಅಲೆಯಲ್ಲಿ ದೇಶದ 270 ವೈದ್ಯರು ವೈರಸ್​ಗೆ ಬಲಿ.
author img

By

Published : May 18, 2021, 12:04 PM IST

ನವದೆಹಲಿ: ದೇಶದಲ್ಲಿ ಉಲ್ಬಣಿಸಿರುವ ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿಗೆ ಒಳಗಾಗಿ 270 ವೈದ್ಯರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಾಹಿತಿ ನೀಡಿದೆ.

ಮೃತ ವೈದ್ಯರ ಪಟ್ಟಿಯಲ್ಲಿ ಐಎಂಎ ಮಾಜಿ ಅಧ್ಯಕ್ಷ ಡಾ.ಕೆ.ಕೆ ಅಗರ್ವಾಲ್ ಕೂಡ ಸೇರಿದ್ದಾರೆ. ವೈರಸ್​ಗೆ ತುತ್ತಾಗಿದ್ದ ಇವರು ನಿನ್ನೆ ರಾತ್ರಿ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಾವನ್ನಪ್ಪಿದ 270 ಡಾಕ್ಟರ್​ಗಳಲ್ಲಿ ಅತೀ ಹೆಚ್ಚು ವೈದ್ಯರು ಬಿಹಾರ (78), ಉತ್ತರ ಪ್ರದೇಶ (37), ದೆಹಲಿ (29) ಮತ್ತು ಆಂಧ್ರಪ್ರದೇಶ (22) ರಾಜ್ಯದವರಾಗಿದ್ದಾರೆ.

ಇದನ್ನೂ ಓದಿ: ಐಎಂಎ ಮಾಜಿ ಅಧ್ಯಕ್ಷ, ಪದ್ಮಶ್ರೀ ವಿಜೇತ ಡಾ.ಅಗರ್‌ವಾಲ್ ಕೋವಿಡ್​ಗೆ ಬಲಿ

ಕಳೆದ ವರ್ಷ ಕೋವಿಡ್​ ಮೊದಲ ಅಲೆಯಲ್ಲಿ ಭಾರತದಾದ್ಯಂತ 748 ವೈದ್ಯರು ವೈರಸ್​ಗೆ ಬಲಿಯಾಗಿದ್ದರು. ಆದರೆ ಈಗ ಅಲ್ಪಾವಧಿಯಲ್ಲಿ ನಾವು ರೋಗಿಗಳ ಸೇವೆಯಲ್ಲಿದ್ದ 270 ವೈದ್ಯರನ್ನು ಕಳೆದುಕೊಂಡಿದ್ದೇವೆ.

ಇದನ್ನೂ ಓದಿ: ಎರಡು ಡೋಸ್​ ವ್ಯಾಕ್ಸಿನ್​ ಪಡೆದಿದ್ದ ವೈದ್ಯನೂ ಕೊರೊನಾಗೆ ಬಲಿ.. 80 ಸಿಬ್ಬಂದಿಗೂ ಕೋವಿಡ್​ ದೃಢ!

"ಸಾಂಕ್ರಾಮಿಕದ ಎರಡನೇ ಅಲೆಯೂ ಎಲ್ಲರಿಗೂ, ವಿಶೇಷವಾಗಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಅತ್ಯಂತ ಮಾರಕವಾಗಿದೆ" ಎಂದು ಐಎಂಎ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.