ETV Bharat / bharat

ಮುಂಬೈ ದಾಳಿಗೆ 13 ವರ್ಷ... 26/11 ಉಗ್ರರ ಅಟ್ಟಹಾಸದ ಕರಾಳ ನೆನಪು - ಮುಂಬೈ ತಾಜ್​​​​​ ಹೋಟೆಲ್​ ಮೇಲಿ ಉಗ್ರರ ದಾಳಿ

2008ರಲ್ಲಿ ಸಂಭವಿಸಿದ್ದ ಮುಂಬೈ ಉಗ್ರರ ದಾಳಿ ಭಾರತೀಯ ಇತಿಹಾಸ ಪುಟದಲ್ಲಿ ಮರೆಯಲಾಗದ ಕಹಿ ಘಟನೆಯಾಗಿ ಅಚ್ಚಾಗಿದೆ. 160 ಅಮಾಯಕರ ಬಲಿ ಪಡೆದಿದ್ದ ಉಗ್ರರು ಮುಂಬೈ ನಗರಿಯನ್ನು 4 ದಿನಗಳ ಕಾಲ ಅಕ್ಷರಶಃ ನರಕ ಮಾಡಿದ್ದರು. 18 ಮಂದಿ ಭದ್ರತಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ವೇಳೆ ಹುತಾತ್ಮರಾಗಿದ್ದರು. ಆ ಕರಾಳ ದಿನಕ್ಕಿಂದು 13 ವರ್ಷ ತುಂಬಿದೆ.

26/11 Attack
ಮುಂಬೈ ದಾಳಿ
author img

By

Published : Nov 26, 2021, 7:55 AM IST

Updated : Nov 26, 2021, 8:33 AM IST

ಮುಂಬೈ: ಭಾರತ ನೆಲದೊಳಗೆ ನಡೆದ ಭೀಕರ ಉಗ್ರರ ಅಟ್ಟಹಾಸದಲ್ಲಿ ಮುಂಬೈ ತಾಜ್​​​​​ ಹೋಟೆಲ್​ ಮೇಲೆ ನಡೆದಿದ್ದ ಘಟನೆ ಘೋರ ಅಧ್ಯಾಯವಾಗಿ ಉಳಿದು ಬಿಟ್ಟಿದೆ. ಘಟನೆ ನಡೆದು ಇಂದಿಗೆ 13 ವರ್ಷ ಕಳೆದರೂ ಅದರ ಭೀಕರತೆ ಮಾತ್ರ ಇನ್ನೂ ಕಣ್ಣು ಮುಂದೆಯೇ ಇದೆ. ಸರಿಯಾಗಿ 12 ವರ್ಷದ ಹಿಂದೆ 2008ರ ನವೆಂಬರ್​​ 26ರ ರಾತ್ರಿ ವೇಳೆಗೆ ಮುಂಬೈ ನಡುಗಿ ಹೋಗಿತ್ತು.

ಕೈಯಲ್ಲಿ ಮದ್ದುಗುಂಡು, ಬಂದೂಕು ಹಿಡಿದಿದ್ದ 10 ಮಂದಿ ಲಷ್ಕರ್-ಎ-ತೋಯ್ಬಾ ಸಂಘಟನೆಯ ಉಗ್ರರು ವಾಣಿಜ್ಯ ನಗರಿಯ ರಕ್ತದೋಕುಳಿಗೆ ಸಮುದ್ರ ದಾಟಿ ಬಂದಿದ್ದರು. ಈ ವೇಳೆ ದಾರಿಯಲ್ಲಿ ಸಿಕ್ಕವರಿಗೆಲ್ಲ ಗುಂಡು ಹಾರಿಸಿದ್ದ ಭಯೋತ್ಪಾದಕರು 166 ಮಂದಿಯ ಜೀವ ತೆಗೆದಿದ್ದರು. ಅಲ್ಲದೆ ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದರು. ಈ ಕಹಿ ಘಟನೆಯ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಘಟನೆಯಲ್ಲಿ ಮಡಿದವರಿಗಾಗಿ ಶ್ರದ್ಧಾಂಜಲಿ ಅರ್ಪಿಸುತ್ತ ಬಂದಿದ್ದಾರೆ.

26/11 Attack
ಹೊತ್ತಿ ಉರಿದ ತಾಜ್​ ಹೋಟೆಲ್​

ಇಂದು ಸಹ ಈ ಕಾರ್ಯಕ್ರಮ ಜರುಗಲಿದ್ದು, ಇದರಲ್ಲಿ ಹುತಾತ್ಮರಾದ ಪೊಲೀಸ್​​ ಕುಟುಂಬಸ್ಥರು ಮತ್ತು ಭದ್ರತಾ ಸಿಬ್ಬಂದಿ ಭಾಗಿಯಾಗಲಿದ್ದಾರೆ.

9 ಉಗ್ರರು ಬಲಿ, ಕಸಬ್ ಸೆರೆ:

ಮುಂಬೈ ಮಹಾನಗರ ತಲುಪಿದ್ದ 10 ಮಂದಿ ಉಗ್ರರು ಸಿಕ್ಕಸಿಕ್ಕವರಿಗೆ ಗುಂಡು ಹಾರಿಸಿ ಅಟ್ಟಹಾಸ ಮೆರೆದಿದ್ದರು. ಮೊದಲಿಗೆ ಇಲ್ಲಿನ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಉಗ್ರರು, ರೈಲು ಬರುವುದನ್ನೇ ಕಾದಿದ್ದ ಪ್ರಯಾಣಿಕರ ಮೇಲೆ ಏಕಾಏಕಿ ಗುಂಡಿನ ಮಳೆಗರೆದಿದ್ದರು.

26/11 Attack
ದಾಳಿಯ ಕರಾಳತೆ ತೆರೆದಿಟ್ಟ ಫೋಟೊಗಳು

ಇದಾದ ಬಳಿಕ ನಾರಿಮನ್ ಹೌಸ್ ಕಾಂಪ್ಲೆಕ್ಸ್​ ತಲುಪಿದ್ದ ಉಗ್ರರು ಅಲ್ಲಿಯೂ ಮನಸೋಯಿಚ್ಛೆ ಅಮಾಯಕರ ಬಲಿ ಪಡೆದರು. ಮೂರನೆಯದಾಗಿ ಲಿಯೋಪೋಲ್ಡ್​ ಕೆಫೆಗೆ ನುಗ್ಗಿ ಹಲವರನ್ನು ಬಲಿ ಪಡೆದಿದ್ದರು. ಇದಾದ ಬಳಿಕ ಮುಂಬೈನ ಹೃದಯ ಭಾಗದಲ್ಲಿನ ತಾಜ್ ಹೋಟೆಲ್​​​ನಲ್ಲಿ ಅಡಗಿ ಕುಳಿತಿದ್ದ ರಾಕ್ಷಸರು ಅಲ್ಲಿದ್ದ ನಾಗರಿಕರ ಮೇಲೆ ದಾಳಿ ಮಾಡಿದ್ದರು.

ನಾಲ್ಕು ದಿನಗಳ ಕಾಲ ಹೋಟೆಲ್​​ನಲ್ಲಿದ್ದ ಉಗ್ರರು, ಭದ್ರತಾ ಪಡೆಯ 18 ಯೋಧರನ್ನು ಕೊಂದಿದ್ದರು. ಆದರೆ ಒಟ್ಟು 10 ಮಂದಿ ಉಗ್ರರನ್ನು ಹತ್ಯೆ ಮಾಡಿದ್ದ ಭದ್ರತಾ ಪಡೆ ಉಗ್ರ ಅಜ್ಮಲ್ ಕಸಬ್​​ನನ್ನು ಜೀವಂತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಅಜ್ಮಲ್ ಅಮಿರ್ ಕಸಬ್​ನನ್ನು ನವೆಂಬರ್ 21, 2012ರಲ್ಲಿ ಪುಣೆಯ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿತ್ತು.

ಇದನ್ನೂ ಓದಿ: coal mine fire: ಕಲ್ಲಿದ್ದಲು ಗಣಿಯಲ್ಲಿ 52 ಜನ ಸಜೀವ ದಹನ!

Last Updated : Nov 26, 2021, 8:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.