ನವದೆಹಲಿ: ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮುಂದಿನ ಮೂರು ದಿನಗಳಲ್ಲಿ ಉಕ್ರೇನ್ನಲ್ಲಿರುವ ಸಾವಿರಾರು ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗಲಿದ್ದಾರೆ.
ಇಂದು ಉಕ್ರೇನ್ನ ಖಾರ್ಕಿವ್ ನಗರಿಯ ಮೇಲೆ ರಷ್ಯಾ ಶೆಲ್ ದಾಳಿ ನಡೆಸಿದ್ದು ಕರ್ನಾಟಕದ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ್ದಾನೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಉನ್ನತ ಮಟ್ಟದ ಸಭೆ ನಡೆಸಿದರು. ಈ ವೇಳೆ ಉಕ್ರೇನ್ನ ವಿವಿಧ ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಪ್ರಕಾರ, ಮುಂದಿನ ಮೂರು ದಿನಗಳಲ್ಲಿ ಭಾರತದಿಂದ 26 ವಿಮಾನಗಳು ಉಕ್ರೇನ್ಗೆ ತೆರಳಲಿದ್ದು, ಸಾವಿರಾರು ವಿದ್ಯಾರ್ಥಿಗಳು/ ನಾಗರಿಕರನ್ನು ಹೊತ್ತು ತರಲಿವೆ.
ಉಕ್ರೇನ್ ಮೇಲೆ ರಷ್ಯಾ ಕಳೆದ ಆರು ದಿನಗಳಿಂದ ಮಿಲಿಟರಿ ದಾಳಿ ನಡೆಸುತ್ತಿದ್ದು, ಈ ವಿಚಾರವಾಗಿ ಅನೇಕ ಸಲ ಪ್ರಧಾನಿ ಪ್ರಮುಖ ಸಚಿವರು, ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ನಿನ್ನೆ ಕೂಡ ಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ, ಕೇಂದ್ರದ ನಾಲ್ವರು ಸಚಿವರನ್ನು ಉಕ್ರೇನ್ ನೆರೆ ದೇಶಗಳಿಗೆ ಕಳುಹಿಸಿ, ಭಾರತೀಯರ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗುವಂತೆ ಸೂಚನೆ ನೀಡಿದ್ದರು.
-
#WATCH | In United Nations we take positions that are based on certain careful considerations & certainly, we do regard the merits of each& every case that comes before us...take decisions in our best interest: Foreign Secy Harsh V Shringla on reconsidering India's stand at UNSC pic.twitter.com/0iAuSKeUFG
— ANI (@ANI) March 1, 2022 " class="align-text-top noRightClick twitterSection" data="
">#WATCH | In United Nations we take positions that are based on certain careful considerations & certainly, we do regard the merits of each& every case that comes before us...take decisions in our best interest: Foreign Secy Harsh V Shringla on reconsidering India's stand at UNSC pic.twitter.com/0iAuSKeUFG
— ANI (@ANI) March 1, 2022#WATCH | In United Nations we take positions that are based on certain careful considerations & certainly, we do regard the merits of each& every case that comes before us...take decisions in our best interest: Foreign Secy Harsh V Shringla on reconsidering India's stand at UNSC pic.twitter.com/0iAuSKeUFG
— ANI (@ANI) March 1, 2022
ಈ ಕುರಿತು ವಿವರವಾದ ಮಾಹಿತಿ ನೀಡಿರುವ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಬುಕಾರೆಸ್ಟ್ ಮತ್ತು ಬುಡಾಪೆಸ್ಟ್ ಹೊರತುಪಡಿಸಿ ಮುಂದಿನ ಮೂರು ದಿನಗಳಲ್ಲಿ ಭಾರತೀಯ ನಾಗರಿಕರನ್ನು ಕರೆತರಲು 26 ವಿಮಾನ ನಿಯೋಜನೆ ಮಾಡಲಾಗಿದೆ. ಇದಕ್ಕಾಗಿ ಪೋಲೆಂಡ್ ಮತ್ತು ಸ್ಲೊವಾಕ್ ಗಣರಾಜ್ಯದ ವಿಮಾನ ನಿಲ್ದಾಣಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಇದನ್ನೂ ಓದಿ: ನವೀನ್ ಸಾವಿನ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
ಎಲ್ಲ ಭಾರತೀಯ ಪ್ರಜೆಗಳು ಈಗಾಗಲೇ ಕೀವ್ ನಗರ ತೊರೆದಿದ್ದಾರೆ. ಉಕ್ರೇನ್ನಲ್ಲಿ ಉಳಿದುಕೊಂಡಿರುವ ಶೇ. 40ರಷ್ಟು ಜನರಲ್ಲಿ ಅರ್ಧದಷ್ಟು ಜನರು ಖಾರ್ಕಿವ್, ಸಮಿ ಪ್ರದೇಶದಲ್ಲಿದ್ದಾರೆ. ಅವರನ್ನು ಕರೆತರಲು ನಿರ್ಧರಿಸಲಾಗಿದೆ ಎಂದರು.