ನವದೆಹಲಿ: ಅಲಿಗಢ ಮುಸ್ಲಿಂ ವಿವಿಯಲ್ಲಿ 26 ಪ್ರಾಧ್ಯಾಪಕರು ಸೇರಿದಂತೆ ಸುಮಾರು 44 ಸಿಬ್ಬಂದಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ರೂಪಾಂತರವು ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಕೋವಿಡ್‌ಗೆ ಪ್ರಾಣ ಕಳೆದುಕೊಂಡ 26 ಪ್ರಾಧ್ಯಾಪಕರಲ್ಲಿ 10 ನಿವೃತ್ತ ಅಧ್ಯಾಪಕರು ಸೇರಿದ್ದಾರೆ. ವಿಶ್ವವಿದ್ಯಾಲಯದ ಕೋರಿಕೆಯ ಮೇರೆಗೆ ಸಿಬ್ಬಂದಿಯ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾದರಿಗಳನ್ನು ಪರೀಕ್ಷೆಗೆ ದೆಹಲಿಯ ಸಿಎಸ್‌ಐಆರ್ ಇನ್‌ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ: 2 ವರ್ಷದ ಮಕ್ಕಳ ಮೇಲೆ ಕೋವಾಕ್ಸಿನ್ ಲಸಿಕೆ ಪ್ರಯೋಗಕ್ಕೆ ತಜ್ಞರ ಸಮಿತಿ ಶಿಫಾರಸು
ಎಎಮ್‌ಯು ಐಸಿಎಂಆರ್‌ಗೆ ಪತ್ರವೊಂದನ್ನು ಬರೆದಿದ್ದು, ಕೋವಿಡ್ ಮಾದರಿಗಳ ಜೀನೋಮ್ ಅಧ್ಯಯನ ವರದಿಯನ್ನು ತುರ್ತಾಗಿ ರವಾನಿಸುವಂತೆ ತಿಳಿಸಿದೆ. ಈ ಅಧ್ಯಯನದಿಂದ, ಕೋವಿಡ್ ಹೊಸ ರೂಪಾಂತರವು ವಿಶ್ವವಿದ್ಯಾಲಯದಲ್ಲಿ ಹರಡಿದೆಯೇ? ಎಂದು ಕಂಡುಹಿಡಿಯಬಹುದು.
ಪೋಸ್ಟ್ ಹಾರ್ವೆಸ್ಟ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಮೊಹಮ್ಮದ್ ಅಲಿ ಖಾನ್ (60), ರಾಜಕೀಯ ವಿಜ್ಞಾನ ವಿಭಾಗದ ಪ್ರೊ.ಕಾಜಿ ಮೊಹಮ್ಮದ್ ಜಮ್ಶೆಡ್ (55), ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಸಾಜಿದ್ ಅಲಿ ಖಾನ್ (63), ಮ್ಯೂಸಿಯಂ ಇಲಾಖೆಯ ಅಧ್ಯಕ್ಷರಾದ ಮೊಹಮ್ಮದ್ ಇರ್ಫಾನ್ (62) ಸೇರಿ ಸುಮಾರು 44 ಜನ ಕೋವಿಡ್‌ಗೆ ಬಲಿಯಾಗಿದ್ದಾರೆ.