ETV Bharat / bharat

ಚೀನಾದ ಕಲ್ಲಿದ್ದಲು ಗಣಿ ದುರಂತ : 23 ಮಂದಿ ಸಾವು, ಓರ್ವ ಪಾರು - ಚೀನಾದ ಯೋಂಗ್​ಚುವಾನ್ ಜಿಲ್ಲೆ

ಯೋಂಗ್​ಚುವಾನ್ ಜಿಲ್ಲೆಯಲ್ಲಿ ಮುಚ್ಚಲ್ಪಟ್ಟಿದ್ದ ಡಯೋಶುಯಿಡಾಂಗ್ ಎಂಬ ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ..

23 killed, 1 rescued in China's coal mine accident
ಚೀನಾದ ಕಲ್ಲಿದ್ದಲು ಗಣಿ ದುರಂತ: 23 ಮಂದಿ ಸಾವು, ಓರ್ವ ಪಾರು
author img

By

Published : Dec 6, 2020, 6:54 AM IST

ಚಾಂಗ್​ಕಿಂಗ್(ಚೀನಾ): ನೈಋತ್ಯ ಚೀನಾದಲ್ಲಿ ಅಧಿಕ ಪ್ರಮಾಣದ ಕಾರ್ಬನ್ ಮೊನಾಕ್ಸೈಡ್‌ನಿಂದಾಗಿ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ದುರಂತದಲ್ಲಿ 23 ಜನರು ಸಾವನ್ನಪ್ಪಿದ್ದು, ಓರ್ವನನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೋಂಗ್​ಚುವಾನ್ ಜಿಲ್ಲೆಯಲ್ಲಿ ಮುಚ್ಚಲ್ಪಟ್ಟಿದ್ದ ಡಯೋಶುಯಿಡಾಂಗ್ ಎಂಬ ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಕಾರ್ಮಿಕರು ಪಿಟ್‌ನಲ್ಲಿ ಉಪಕರಣಗಳನ್ನು ತೆಗೆದು ಹಾಕುವಾಗ ಈ ದುರ್ಘಟನೆ ಸಂಭವಿಸಿದ್ದು, 24 ಕಾರ್ಮಿಕರು ಮಣ್ಣಿನಲ್ಲಿ ಸಿಲುಕಿಕೊಂಡಿದ್ದರು. ಎರಡು ತಿಂಗಳ ಹಿಂದೆ ಗಣಿಗಾರಿಕೆ ಮುಚ್ಚಲಾಗಿತ್ತು. ದುರ್ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ತನಿಖೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.