ನವದೆಹಲಿ : ಇಂಡೋ-ಟಿಬೇಟಿಯನ್ ಗಡಿ ಭದ್ರತಾ ಪಡೆ (ಐಟಿಬಿಪಿ) ಯ 23 ಮಂದಿ ಸಿಬ್ಬಂದಿಗೆ ನಾಳೆ ಸ್ವಾತಂತ್ರ್ಯ ದಿನಾಚರಣೆಯಂದು ಪೊಲೀಸ್ ಶೌರ್ಯ ಪದಕ ( Police Medal for Gallantry-PMG) ಪ್ರದಾನ ಮಾಡಲಾಗುತ್ತದೆ. ಈ ಪೈಕಿ 20 ಮಂದಿಯನ್ನು 2020 ಮೇ- ಜೂನ್ನಲ್ಲಿ ಪೂರ್ವ ಲಡಾಖ್ನಲ್ಲಿ ನಡೆದ ಘರ್ಷಣೆ ವೇಳೆ ತೋರಿದ ಧೈರ್ಯಕ್ಕಾಗಿ ಗೌರವಿಸಲಾಗ್ತಿದೆ.
ಗಡಿ ಮುಖಾಮುಖಿ, ಚಕಮಕಿ, ಗಡಿ ಕಾವಲು ಕರ್ತವ್ಯಗಳಲ್ಲಿ ತೋರಿರುವ ಶೌರ್ಯಕ್ಕಾಗಿ ಐಟಿಪಿಬಿ ಸಿಬ್ಬಂದಿಗೆ ನೀಡಲಾಗುತ್ತಿರುವ ಅತೀ ಹೆಚ್ಚು ಮತ್ತು ಅತ್ಯುನ್ನತ ಶೌರ್ಯ ಪದಕ ಇದಾಗಿದೆ.
ಜೂನ್ 15, 2020 ರಂದು ಗಾಲ್ವಾನ್ನ ನಲ್ಲಾದಲ್ಲಿ ಚೀನಾ ಸೇನೆಯೊಂದಿಗೆ ನಡೆದ ಘರ್ಷಣೆ ವೇಳೆ, ನಿಖರವಾದ ಯೋಜನೆ ಮತ್ತು ಯುದ್ಧತಂತ್ರ ಮಾಡಿ ಧೈರ್ಯ ತೋರಿದಕ್ಕಾಗಿ 5 ಮಂದಿ ಸಿಬ್ಬಂದಿಗೆ ಪಿಎಂಜಿ ಪದಕ ನಿಡಲಾಗ್ತಿದೆ.
ಮೇ 18, 2020 ರಂದು ಫಿಂಗರ್ IV ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಮುಖಾಮುಖಿಯಲ್ಲಿ ಪಾಲ್ಗೊಂಡ 6 ಸಿಬ್ಬಂದಿ ಹಾಗೂ ಮೇ 18, 2020 ರಂದು ಲಡಾಖ್‌ನ ಹಾಟ್ ಸ್ಪ್ರಿಂಗ್ಸ್ ಬಳಿ ನಡೆದ ಮುಖಾಮುಖಿಯಲ್ಲಿ ಪಾಲ್ಗೊಂಡಿದಕ್ಕಾಗಿ 6 ಸಿಬ್ಬಂದಿಗೆ ಪದಕ ಪ್ರದಾನ ಮಾಡಲಾಗ್ತಿದೆ.
ಇನ್ನೂ ಮೂವರು ಸಿಬ್ಬಂದಿಗೆ ಚತ್ತೀಸ್ಗಢದಲ್ಲಿ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ತೋರಿದ ಧೈರ್ಯಕ್ಕಾಗಿ ಪಿಎಂಜಿ ನೀಡಿ ಗೌರವಿಸಲಾಗ್ತಿದೆ.
ಪೂರ್ವ ಲಡಾಖ್‌ನ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡವರು
1 ರಿಂಕು ಥಾಪಾ, 2 ನೇ ಕಮಾಂಡ್
2 ಶರತ್ ಕುಮಾರ್ ತ್ರಿಪಾಠಿ, ಉಪ ಕಮಾಂಡೆಂಟ್
3 ಅರ್ಬಿಂದ್ ಕುಮಾರ್ ಮಹಾಟೊ, ಸಹಾಯಕ ಕಮಾಂಡೆಂಟ್
4 ನಿತಿನ್ ಕುಮಾರ್, ಇನ್ಸ್‌ಪೆಕ್ಟರ್
5 ಪಾಟೀಲ್ ಸಚಿನ್ ಮೋಹನ್, ಸಬ್ ಇನ್ಸ್‌ಪೆಕ್ಟರ್
6 ಮನೀಶ್ ಕುಮಾರ್, ಹೆಡ್ ಕಾನ್ಸ್ಸ್ಟೇಬಲ್
7 ಮನೀಶ್ ಕುಮಾರ್,ಕಾನ್ಸ್ಸ್ಟೇಬಲ್
8 ಕೌಪ್ಪಸ್ವಾಮಿ ಎಂ, ಕಾನ್ಸ್ಸ್ಟೇಬಲ್
9 ಅಕ್ಷಯ್ ಅಹುಜಾ, ಸಹಾಯಕ ಕಮಾಂಡೆಂಟ್
10 ಧರ್ಮೇಂದ್ರ ಕುಮಾರ್ ವಿಶ್ವಕರ್ಮ, ಸಹಾಯಕ ಕಮಾಂಡೆಂಟ್
11 ರವೀಂದ್ರ ಮಹಾರಾಣ, ಇನ್ಸ್‌ಪೆಕ್ಟರ್
12 ಶಿವ ಶಂಕರ್ ತಿವಾರಿ, ಹೆಡ್ ಕಾನ್ಸ್ಸ್ಟೇಬಲ್
13 ಸ್ಟಾಂಜಿನ್ ಥಿನ್ಲೆಸ್, ಕಾನ್ಸ್ಸ್ಟೇಬಲ್
14 ವಿನೋದ್ ಕುಮಾರ್ ಶರ್ಮಾ, ಕಾನ್ಸ್ಸ್ಟೇಬಲ್
15 ಕಿಶೋರ್ ಸಿಂಗ್ ಬಿಶ್ತ್, ಕಮಾಂಡೆಂಟ್
16 ಪಂಕಜ್ ಶ್ರೀವಾಸ್ತವ, ಸಹಾಯಕ ಕಮಾಂಡೆಂಟ್
17 ಘನಶ್ಯಾಮ್ ಸಾಹು, ಇನ್ಸ್‌ಪೆಕ್ಟರ್
18 ಅಶ್ರಫ್ ಅಲಿ, ಕಾನ್ಸ್ಸ್ಟೇಬಲ್
19 ಮೊಹಮ್ಮದ್ ಶಫ್ಕತ್ ಮೀರ್, ಕಾನ್ಸ್ಸ್ಟೇಬಲ್
20 ರಿಗ್ಜಿನ್ ದವಾ, ಕಾನ್ಸ್ಸ್ಟೇಬಲ್
2018 ರ ಜುಲೈ ತಿಂಗಳಲ್ಲಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರು
21 ರವೀಂದರ್ ಸಿಂಗ್ ಪುನಿಯಾ, ಸಹಾಯಕ ಕಮಾಂಡೆಂಟ್
22 ಕುಲದೀಪ್ ಸಿಂಗ್, ಇನ್ಸ್‌ಪೆಕ್ಟರ್
23 ಎಸ್ .ಮುತ್ತು ರಾಜ