ನವದೆಹಲಿ: ಡಿಆರ್ಡಿಒ ತೆಗೆದುಕೊಂಡ 55 ಮಿಷನ್ ಮೂಡ್ (ಎಂಎಂ) ಪ್ರಾಜೆಕ್ಟ್ನಲ್ಲಿ 23 ವಿಳಂಬವಾಗಿದೆ ಎಂದು ಸರ್ಕಾರ ಇಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿತು. ಈ ಸಂಬಂಧ ರಾಜ್ಯ ರಕ್ಷಣಾ ಸಚಿವ ಅಜಯ್ ಭಟ್ ಲಿಖಿತ ಉತ್ತ ಒದಗಿಸಿದರು. ಏರ್ ಡ್ರಾಪಬಲ್ ಕಂಟೈನರ್‌ಗಳು, ಸಿಮ್ಯುಲೇಟರ್‌ಗಳು, ಟ್ಯಾಕ್ಟಿಕಲ್ ರೇಡಿಯೊಗಳು, ಲೈಟ್ ಮೆಷಿನ್ ಗನ್, ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ ಸಿಸ್ಟಮ್ಸ್, ಸರ್ಫೇಸ್ ಏರ್ ಮಿಸೈಲ್‌ಗಳು, ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ಎಂಕೆ2 ಮತ್ತು ಎಲ್ಸಿಎಯ ನೌಕಾ ಆವೃತ್ತಿಗಳು ವಿಳಂಬಗೊಂಡಿದೆ ಎಂದು ಸಚಿವರು ತಿಳಿಸಿದರು.
ರಾಕೆಟ್, ಬಾಂಬ್, ಪದಾತಿಸೈನ್ಯದ ಯುದ್ಧ ವಾಹನ ಕಮಾಂಡ್, ಲೈಫ್ ಸಪೋರ್ಟ್ ಸಿಸ್ಟಮ್, ಸರ್ಫೇಸ್ ಟು ಸರ್ಫೇಸ್ ಕ್ಷಿಪಣಿ, ಪೆರಿಸ್ಕೋಪ್, ಅಡ್ವಾನ್ಸ್ಡ್ ಟೋವ್ಡ್, ಆರ್ಟಿಲರಿ ಗನ್ ಸಿಸ್ಟಮ್ ಮತ್ತು ಮಾನವರಹಿತ ವೈಮಾನಿಕ ವಾಹನದಂತಹ ಯೋಜನೆಗಳು ವಿಳಂಬವಾಗಿವೆ. ಮುಂದುವರೆದು ಮಾತನಾಡಿದ ಕೇಂದ್ರ ಸಚಿವರು, 55 ಎಂಎಂ ಪ್ರಾಜೆಕ್ಟ್ನಲ್ಲಿ 12 ಪ್ರಾಜೆಕ್ಟ್ ವೆಚ್ಚ ಹೆಚ್ಚಳಗೊಂಡಿದೆ. ಆದಾಗ್ಯೂ, ಹೆಚ್ಚಳವಾದ ವೆಚ್ಚವನ್ನು ನಷ್ಟದ ವೆಚ್ಚ ಎಂದು ಪರಿಗಣಿಸಿಲ್ಲ. ಕಾರಣ ಇದನ್ನು ಯೋಜನೆಯ ವ್ಯಾಪ್ತಿಯ ವರ್ಧನೆಗಾಗಿ ವೆಚ್ಚ ಎಂದು ಪರಿಗಣಿಸಲಾಗಿದೆ. ಈ ಯೋಜನೆಗಳ ಮಂಜೂರಾದ ಒಟ್ಟು ವೆಚ್ಚ 73,900 ಕೋಟಿ ರೂ.ಗಿಂತ ಹೆಚ್ಚಿದೆ
ಕ್ರೂಸ್ ಮಿಸೆಲ್, ಇನ್ಫ್ಯಾಂಟ್ರಿ ಕಾಂಬೊಟ್ ವೆಹಿಕಲ್ ಕಮಾಂಡ್, ರಾಕೆಟ್, ವಾಯು ಸ್ವತಂತ್ರ ಮಾಲಿನ್ಯ ವ್ಯವಸ್ಥೆ, ಪೆರಿಸ್ಕೋಪ್, ಅಡ್ವಾನ್ಸ್ ಟೊವ್ಡ್ ಅರ್ಟಿಲೆರಿ ಗನ್ ಸಿಸ್ಟಂ (ಎಟಿಎಜಿಎಸ್), ಲೈಟ್ ಕಾಂಬೊಟ್ ಏರ್‌ಕ್ರಾಫ್ಟ್ ಎಂಕೆ2, ಸರ್ಫೇಸ್ನಿಂದ ವಾಯು ಕ್ಷಿಪಣಿ, ಟೊರ್ಪೆಡೊಸ್, ಎಸ್ಸಿಎ ನೌಕೆ ಮತ್ತು ದಿ ಎಲೆಕ್ಟ್ರಾನಿಕ್ ವಾರ್ಫೇರ್ ಸಿಸ್ಟಂ ಸಹ ಯೋಜನೆಗಳ ಕುರಿತು ಅವರು ಬಹಿರಂಗ ಪಡಿಸಿದರು.
ವಿಳಂಬ ತಡೆಯಲು ನಿರಂತರ ನಿಗಾ: ಕೇಂದ್ರ ಸರ್ಕಾರ ಪೂರ್ವ ಯೋಜನಾ ಚಟುವಟಿಕೆಯ ಮೇಲೆ ಕಡ್ಡಾಯವಾಗಿ ಗಮನಹರಿಸುವುದು. ಯೋಜನಾ ವಿಮರ್ಶೆಗಳ ಆವರ್ತನವನ್ನು ಹೆಚ್ಚಿಸುವುದು. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸೇವೆಗಳು ಮತ್ತು ಉತ್ಪಾದನಾ ಪಾಲುದಾರರ ಹೆಚ್ಚಿನ ಒಳಗೊಳ್ಳುವಿಕೆ ಮತ್ತು ವಿಳಂಬವನ್ನು ನಿವಾರಿಸಲು ವಿಮರ್ಶೆಗಳು ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.
2018 ಜನವರಿಯಿಂದ ಫೆಬ್ರವರಿ 2023ರ ವೇಳೆ ಡಿಆರ್ಡಿಒಯಿಂದ 35 ಎಂಎಂ ಪ್ರಾಜೆಕ್ಟ್ಗಳನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ರೆಡಿಯೋ, ಇಎಸ್ಎಂ, ಎಲ್ಆರ್ಯುಡಿ, ಸಾಫ್ಟ್ವೇರ್, ಲ್ಯಾಡಿಂಗ್ ಗೇರ್, ಸಿಬಿಆರ್ಎನ್ ರೆಕ್ಕೆ, ವೆಹಿಕಲ್, ಫುಲ್ ಮಿಷನ್ ಸಿಮ್ಯುಲಟೊರ್ ಮತ್ತು ಎಲ್ಸಿಎ ಯೋಜನೆ ಒಳಗೊಂಡಿದೆ ಎಂದರು.
ಹೆಚ್ಚಾದ ವಲಸೆ ಪ್ರಮಾಣ: ಭಾರತದ ಪೌರತ್ವ ತ್ಯಜಿಸಿದ ಕುರಿತು ವಿವರಣೆ ನೀಡಿರುವ ಬೆನ್ನಲ್ಲೇ ಇಂದು ರಾಜ್ಯಸಭೆಯಲ್ಲಿ ವಲಸೆ ಪ್ರಮಾಣದ ಕುರಿತು ತಿಳಿಸಲಾಗಿದೆ. ಭಾರತದಲ್ಲಿ ವಲಸೆ ಪ್ರಮಾಣವೂ ಶೇಕಡಾ 28.9ರಷ್ಟಿದೆ ಎಂದು ಸರ್ಕಾರ ರಾಜ್ಯಸಭೆಯಲ್ಲಿ ತಿಳಿಸಿದೆ.
ಭಾರದಲ್ಲಿ ವಕಸೆ 2020-21ರ ವರದಿ ಅನುಸಾರ ವರದಿ ತಿಳಿಸಿದ ಅಂಕಿ - ಅಂಶಗಳ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ. ಸಮೀಕ್ಷೆ ಅಂದಾಜಿನ ಪ್ರಕಾರ, ಭಾರತದಲ್ಲಿ ವಲಸೆ ಶೇ 28.9ರಷ್ಟಿದೆ ಎಂದ ಅವರು, 87.5 ರಷ್ಟು ವಲಸಿಗರು ಅದೇ ರಾಜ್ಯದ ಇತರ ಸ್ಥಳಗಳಿಗೆ ವಲಸೆ ಹೋಗಿದ್ದಾರೆ ಎಂದು ಸದನಕ್ಕೆ ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: ಸುಪ್ರೀಂ ಮಾಜಿ ನ್ಯಾಯಮೂರ್ತಿ ರಾಜ್ಯಪಾಲರಾಗಿ ನೇಮಕ.. ಟೀಕಾಕಾರರಿಗೆ ಕೇಂದ್ರ ಕಾನೂನು ಸಚಿವರ ತಿರುಗೇಟು