ETV Bharat / bharat

ತಮಿಳುನಾಡು ಪಂಚಾಯತ್ ಚುನಾವಣೆ: 22 ವರ್ಷದ ಇಂಜಿನಿಯರಿಂಗ್ ಪದವೀಧರೆ ಅಧ್ಯಕ್ಷೆಯಾಗಿ ಆಯ್ಕೆ - ಎಂಜಿನಿಯರಿಂಗ್ ಪದವೀಧರೆ ಅಧ್ಯಕ್ಷೆಯಾಗಿ ಆಯ್ಕೆ

ಇಂಜಿನಿಯರಿಂಗ್ ಪದವೀಧರೆಯೊಬ್ಬರು ತಮಿಳುನಾಡಿನ ಕಡಾಯಂ ಪಂಚಾಯತ್ ಯೂನಿಯನ್​ನ ವೆಂಕಟಂಪಟ್ಟಿಯ ಕೌನ್ಸಿಲ್​​ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

22-year-old-woman engineering graduate as elected panchayat president in TN
ತಮಿಳುನಾಡು ಪಂಚಾಯತ್ ಚುನಾವಣೆ: 22 ವರ್ಷದ ಎಂಜಿನಿಯರಿಂಗ್ ಪದವೀಧರೆ ಅಧ್ಯಕ್ಷೆಯಾಗಿ ಆಯ್ಕೆ
author img

By

Published : Oct 14, 2021, 2:03 PM IST

ತೆಂಕಸಿ (ತಮಿಳುನಾಡು): 22 ವರ್ಷದ ಇಂಜಿನಿಯರಿಂಗ್ ಪದವೀಧರೆ ತಮಿಳುನಾಡಿನ ಕಡಾಯಂ ಪಂಚಾಯತ್ ಯೂನಿಯನ್​ನ ವೆಂಕಟಂಪಟ್ಟಿ ಪಂಚಾಯತ್ ಕೌನ್ಸಿಲ್​​ನ ಅಧ್ಯಕ್ಷರಾಗಿ ಆಯ್ಕೆಯಾಗಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ವೆಂಕಟಂಪಟ್ಟಿ ಪಂಚಾಯತ್​ನ ಲಕ್ಷ್ಮಿಯೂರು ಗ್ರಾಮದವರಾದ ರವಿ ಸುಬ್ರಮಣಿಯನ್ ಮತ್ತು ಶಾಂತಿಯವರ ಪುತ್ರಿಯಾದ ಚಾರುಕಲಾ (22) ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಬಿ.ಟೆಕ್ ಮುಗಿಸಿರುವ ಅವರು ಈಗ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.

ತಂದೆ ರವಿ ಸುಬ್ರಮಣಿಯನ್ ಸಲಹೆಯ ಮೇರೆಗೆ, ಪಂಚಾಯತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ ಚಾರುಕಲಾಗೆ ಜನರು ಉತ್ತಮ ಸ್ಪಂದನೆ ನೀಡಿದರು. ಮತ ಎಣಿಕೆಯ ನಂತರ ಚಾರುಕಲಾ ಭಾರಿ ಮತಗಳ ಅಂತರದಲ್ಲಿ ವಿಜಯಶಾಲಿಯಾಗಿದ್ದಾರೆ. ಈಗ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ.

ಅಕ್ಟೋಬರ್ 6 ಮತ್ತು 9ರಂದು ತಮಿಳುನಾಡಿನ 9 ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲಾಯಿತು. ಈ ಚುನಾವಣೆಯಲ್ಲಿ ಹೊಸದಾಗಿ ರಚನೆಯಾದ ತೆಂಕಾಸಿ ಜಿಲ್ಲೆಯಲ್ಲಿ ಅನೇಕ ವಿದ್ಯಾವಂತ ಯುವಕರು ಭಾರಿ ಸಂಖ್ಯೆಯಲ್ಲಿ ಸ್ಪರ್ಧಿಸಿದ್ದರು.

ಇದನ್ನೂ ಓದಿ: ಮೊದಲ ಬಾರಿಗೆ ಕಾಂಗ್ರೆಸ್​ನವರೇ ಸ್ವಪಕ್ಷದ ಬಗ್ಗೆ ಸತ್ಯ ಹೇಳಿದ್ದಾರೆ: ಶೋಭಾ ಕರಂದ್ಲಾಜೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.