ETV Bharat / bharat

ನೌಕಾಪಡೆಯ ಬೇಸ್​​ಕ್ಯಾಂಪ್​​ನಿಂದ ಕೆಲಸಗಾರ ನಾಪತ್ತೆ.. 22ರ ಯುವಕನ ಹುಡುಕಿಕೊಡಿ ಎಂದು ಪೋಷಕರ ಒತ್ತಾಯ - ಆತ್ಮಾಹುತಿ ಎಚ್ಚರಿಕೆ

ನ.3 ರಂದು ನೌಕಾಪಡೆಯ ಬೇಸ್ ಕ್ಯಾಂಪ್​​​ನಿಂದ ಉರಾನ್ ನಗರದ ಈಜುಕೊಳಕ್ಕೆ ಬಂದಿದ್ದ 22 ವರ್ಷದ ವಿಶಾಲ್ ಮಹೇಶ್ ಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಆದರೆ, ನೌಕಾಪಡೆಯಿಂದ ಈ ಬಗ್ಗೆ ಸೂಕ್ತ ಉತ್ತರ ಸಿಕ್ಕಿಲ್ಲ ಎಂದು ವಿಶಾಲ್ ಮಹೇಶ್ ಕುಮಾರ್ ಕುಟುಂಬ ಆರೋಪಿಸುತ್ತಿದೆ.

22 year old Navy officer missing parents demand high level inquiry
ನೌಕಾಪಡೆಯ ಬೇಸ್​​ಕ್ಯಾಂಪ್​​ನಿಂದ ಕೆಲಸಗಾರ ನಾಪತ್ತೆ
author img

By

Published : Nov 7, 2022, 8:02 PM IST

ರಾಯಗಢ( ಮಹಾರಾಷ್ಟ್ರ): ಉರಾನ್ ತಾಲೂಕಿನ ಕಾರಂಜಾ ದ್ವೀಪದಲ್ಲಿರುವ ನೌಕಾಪಡೆಯ ಬೇಸ್ ಕ್ಯಾಂಪ್​​​​ನಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ವಿಶಾಲ್ ಮಹೇಶಕುಮಾರ್ ಎಂಬ ಅಧಿಕಾರಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಉನ್ನತ ಮಟ್ಟದ ತನಿಖೆಯಾಗಬೇಕು ಎಂಬ ಆಗ್ರಹ ಅವರ ಕುಟುಂಬದಿಂದ ವ್ಯಕ್ತವಾಗಿದೆ.

ನ.3 ರಂದು ನೌಕಾಪಡೆಯ ಬೇಸ್ ಕ್ಯಾಂಪ್​​​ನಿಂದ ಉರಾನ್ ನಗರದ ಈಜುಕೊಳಕ್ಕೆ ಬಂದಿದ್ದ 22 ವರ್ಷದ ವಿಶಾಲ್ ಮಹೇಶ್ ಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಆದರೆ ನೌಕಾಪಡೆಯಿಂದ ಈ ಬಗ್ಗೆ ಸೂಕ್ತ ಉತ್ತರ ಸಿಕ್ಕಿಲ್ಲ ಎಂದು ವಿಶಾಲ್ ಮಹೇಶ್ ಕುಮಾರ್ ಕುಟುಂಬದವರು ಹೇಳುತ್ತಿದ್ದಾರೆ.

ವಿಶಾಲ್​ ನಾಪತ್ತೆ ಹಿಂದೆ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿವೆ. ಇಡೀ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕುಟುಂಬದವರು ಒತ್ತಾಯಿಸಿದ್ದಾರೆ. ಸಿಕ್ಕಿರುವ ಮಾಹಿತಿಯ ಪ್ರಕಾರ 22 ವರ್ಷದ ವಿಶಾಲ್ ನವೆಂಬರ್ 3 ರಂದು ನೇವಿ ಬೇಸ್ ಕ್ಯಾಂಪ್‌ನಿಂದ ಉರಾನ್ ನಗರದ ಈಜುಕೊಳಕ್ಕೆ ಈಜಲು ಬಂದಾಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ನೌಕಾಪಡೆ ಸರಿಯಾಗಿ ಯಾವುದೇ ಮಾಹಿತಿ ನೀಡುತ್ತಿಲ್ಲ ಎನ್ನುವುದು ವಿಶಾಲ್ ಪೋಷಕರ ಆರೋಪವಾಗಿದೆ.

ಇನ್ನು ನೌಕಾಪಡೆಯಿಂದ ಕಾಣೆಯಾದ ದೂರು ದಾಖಲಾಗಿಲ್ಲ ಎನ್ನಲಾಗುತ್ತಿದೆ. ಈಜುಕೊಳದಲ್ಲಿ ವಿಶಾಲ್ ಅವರ ಮೋಟಾರ್ ಸೈಕಲ್ ಅನ್ನು ನೌಕಾಪಡೆ ತೆಗೆದುಕೊಂಡು ಹೋಗಿದ್ದು ಏಕೆ ಎಂದು ಪ್ರಶ್ನಿಸುತ್ತಿರುವ ವಿಶಾಲ್​ ಕುಟುಂಬಸ್ಥರು, ವಿಶಾಲ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಹಿಂಜರಿಕೆ ಏಕೆ ಎಂದು ಕೇಳುತ್ತಿದ್ದಾರೆ.

ಆತ್ಮಾಹುತಿ ಎಚ್ಚರಿಕೆ: ವಿಶಾಲ್ ನಾಪತ್ತೆಯಾಗಿ ನಾಲ್ಕು ದಿನಗಳು ಕಳೆದಿದ್ದು, ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ವಿಶಾಲ್ ವಿಳಾಸ ಪತ್ತೆ ಮಾಡಿಕೊಡಿ ಎಂದು ಪಾಲಕರು ಆಗ್ರಹಿಸುತ್ತಿದ್ದಾರೆ. ವಿಶಾಲ್ ಬಗ್ಗೆ ಮಾಹಿತಿ ಸಿಗದಿದ್ದರೆ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಇದೇ ವೇಳೆ ಪೋಷಕರು ಎಚ್ಚರಿಕೆ ಕೂಡಾ ನೀಡಿದ್ದಾರೆ.

ಇದನ್ನು ಓದಿ: ನಪುಂಸಕಳೆಂದು ಟೀಕೆ, ಮಗುವಾಗಿದ್ದರೂ ಲಿಂಗ ಪರೀಕ್ಷೆ ಮಾಡಿಸಿದ ಪತಿ ವಿರುದ್ಧ ಪತ್ನಿ ದೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.