ನವದೆಹಲಿ: ಚಂಚಲ್ ಪಾರ್ಕ್‌ನಲ್ಲಿರುವ ಕೇಬಲ್ ಮತ್ತು ವೈಫೈ ಕಚೇರಿಗೆ ಬಂದ ಇಬ್ಬರು ದುಷ್ಕರ್ಮಿಗಳು ಮೂರು ಸುತ್ತಿನ ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ಓರ್ವನಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಂಚಲ್ ಪಾರ್ಕ್‌ನ ಸೋಮ್ ಬಜಾರ್ ರಸ್ತೆಯಲ್ಲಿರುವ ಕೇಬಲ್ ಮತ್ತು ವೈಫೈ ಕಚೇರಿಯ ಮುಂದೆ ನಿಂತಿದ್ದರು. ಅವರಲ್ಲಿ ಇಬ್ಬರು ಕಚೇರಿಗೆ ನುಗ್ಗಿ ಹಿತೇಶ್ (22) ಎಂಬಾತನ ಮೇಲೆ ಗುಂಡು ಹಾರಿಸಿದ್ದಾರೆ. ಕೂಡಲೇ ಹಿತೇಶ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ಧಾರೆ.
ದೆಹಲಿಯ ಚಂಚಲ್ ಪಾರ್ಕ್‌ನಲ್ಲಿರುವ ಕೇಬಲ್ ಕಚೇರಿಯಲ್ಲಿ ಗುಂಡಿನ ದಾಳಿಯ ಘಟನೆಯ ಕುರಿತು ರಂಹೋಲಾ ಪೊಲೀಸ್ ಠಾಣೆಯಲ್ಲಿ ಪಿಸಿಆರ್ ಕರೆ ಬಂದಿದೆ. ವಿಚಾರಣೆಯ ಸಮಯದಲ್ಲಿ, ಇಲ್ಲಿನ ಕೇಬಲ್ ಮತ್ತು ವೈಫೈ ಕಚೇರಿಯ ಮುಂದೆ ಮೂವರು ಅಪರಿಚಿತ ಯುವಕರು ಅಪಾಚೆ ಬೈಕ್‌ನಲ್ಲಿ ಬಂದಿರುವುದು ಕಂಡು ಬಂದಿದೆ. ಅವರಲ್ಲಿ ಇಬ್ಬರು ಕಚೇರಿಗೆ ಪ್ರವೇಶಿಸಿದರು ಮತ್ತು ಅವರಲ್ಲಿ ಒಬ್ಬ ಹಿತೇಶ್ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಅಲ್ಲದೇ ಸ್ಥಳದಿಂದ ಪಲಾಯನ ಮಾಡುವ ಮೊದಲು ಹೊರಗಿನಿಂದ 15 ಸುತ್ತು ಗುಂಡು ಹಾರಿಸಿದ್ದಾರೆ. ಆದರೆ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕಾಶ್ಮೀರಿ ಪಂಡಿತ ಸಂಜಯ್ ಶರ್ಮಾ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರ ಹತ: ಪೊಲೀಸ್ ಇಲಾಖೆ
ಪಾರ್ಕಿಂಗ್ ಸ್ಥಳದಲ್ಲಿ ಗುಂಡಿನ ದಾಳಿ: ಶನಿವಾರ(ಫೆ 27) ಮಿನ್ನೇಸೋಟದ ಸೇಂಟ್ ಪಾಲ್ನಲ್ಲಿ ಗುಂಡು ದಾಳಿಯಿಂದ ಇಬ್ಬರು ಸಾವನ್ನಪ್ಪಿದ್ದರು. ಐವರ ಮೇಲೆ ಗುಂಡು ಹಾರಿಸಿದ್ದಾರೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಗುಂಡಿನ ದಾಳಿಗೆ ಸೂಕ್ತ ಕಾರಣ ತಿಳಿದು ಬಂದಿಲ್ಲ. ಕಾರ್ಯಕ್ರಮ ಒಂದರ ನಂತರ ಈ ಘಟನೆ ನಡೆದಿದೆ ಎನ್ನಲಾಗಿದೆ.
ಶನಿವಾರ ಸಂಜೆ 5 ಗಂಟೆಗೆ ಸೆಲೆಬ್ರೇಷನ್ ಆಫ್ ಲೈಫ್ ಕಾರ್ಯಕ್ರಮದ ನಂತರ ಪಾರ್ಕಿಂಗ್ ಸ್ಥಳದಲ್ಲಿ ನಡೆದ ಜಗಳದಲ್ಲಿ ಎಲ್ಲ ಐವರು ಗುಂಡು ಹಾರಿಸಿದ್ದಾರೆ. ಇದರಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟರೆ, ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದ ಬಳಿಕ ಎರಡನೇ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಸೇಂಟ್ ಪಾಲ್ ಪೊಲೀಸರು ತಿಳಿಸಿದ್ದರು.
ವಿನಾಕಾರಣ ಗುಂಡಿನ ದಾಳಿಯಿಂದ ಸಾವು: ಅಮೆರಿಕದಲ್ಲಿ ವಿನಾ ಕಾರಣ ಶೂಟೌಟ್ ಮಾಡಿ ಮೂವರನ್ನು ಕೊಲೆ ಮಾಡಿರುವ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಮೆಕ್ಸಿಕೋದ ಅಲ್ಬುಕರ್ಕ್ನಲ್ಲಿ ಒಬ್ಬ ವ್ಯಕ್ತಿ ಚಾಕು ಇರಿತ ಹಾಗೂ ಇಬ್ಬರು ಶೂಟೌಟ್ನಿಂದ ಕೊಲೆಯಾಗಿರುವ ಪ್ರಕರಣ ನಡೆದಿತ್ತು. ಈ ಎರಡೂ ಘಟನೆಗಳಲ್ಲಿ ಕೊಲೆಗಳಿಗೆ ಯಾವುದೇ ಕಾರಣಗಳಿರಲ್ಲಿಲ್ಲ.
ಇದನ್ನೂ ಓದಿ: ಸೆಲೆಬ್ರೇಷನ್ ಆಫ್ ಲೈಫ್ ಕಾರ್ಯಕ್ರಮದ ನಂತರ ಶೂಟೌಟ್: ಇಬ್ಬರ ಸಾವು