ಮಲಪ್ಪುರಂ(ಕೇರಳ): ಕೇರಳದ ಒಟ್ಟಪಾಲಂನ 22 ವರ್ಷದ ಯುವತಿ ಐಪಿ ಅರುಣಿಮಾ ಎಂಬುವವರು 22 ವಿದೇಶಗಳಿಗೆ ಸೈಕಲ್ ಪ್ರವಾಸವನ್ನು ಆರಂಭಿಸಿದ್ದಾರೆ. ರಾಜ್ಯದ ಕ್ರೀಡಾ ಸಚಿವ ವಿ ಅಬ್ದುರಹಿಮಾನ್ ಮಲಪ್ಪುರಂನಲ್ಲಿ ಸುದೀರ್ಘ ಸಾಹಸ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿಸಿದರು.
![22 year old kerala girl set bicycle journey to 22 countries](https://etvbharatimages.akamaized.net/etvbharat/prod-images/whatsapp-image-2022-11-23-at-71232-pm-1_2311newsroom_1669211360_657.jpeg)
ಪ್ರವಾಸಿ ಪ್ರಿಯೆಯಾದ ಅರುಣಿಮಾ ಅವರು, ಸಾಹಸ ಪ್ರಯಾಣದ ಆರಂಭದಲ್ಲಿ ಮೊದಲು ಮುಂಬೈಗೆ ತಲುಪಲಿದ್ದು, ಬಳಿಕ ಅಲ್ಲಿಂದ ಅವರು ವಿದೇಶಗಳಿಗೆ ಸೈಕಲ್ನಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಸಾಹಸಿ ಅರುಣಿಮಾ ಸುಮಾರು 25 ಸಾವಿರ ಕಿಲೋಮೀಟರ್ ಪ್ರಯಾಣ ಮಾಡಲಿದ್ದು, ಈ ವೇಳೆ ಅವರು ಗಲ್ಫ್ ಮತ್ತು ಆಫ್ರಿಕನ್ ರಾಷ್ಟ್ರಗಳಿಗೆ ಪ್ರವಾಸ ಮಾಡಲಿದ್ದಾರೆ.
![22 year old kerala girl set bicycle journey to 22 countries](https://etvbharatimages.akamaized.net/etvbharat/prod-images/whatsapp-image-2022-11-23-at-71230-pm_2311newsroom_1669211360_354.jpeg)
2 ವರ್ಷಗಳ ಸುದೀರ್ಘ ಪ್ರಯಾಣ: ಸೈಕಲ್ ಹತ್ತಿ ವಿಶ್ವಪರ್ಯಟನೆ ಶುರು ಮಾಡಿರುವ ಅರುಣಿಮಾ ಅವರ ಪ್ರಯಾಣದ ಅವಧಿ 2 ವರ್ಷಗಳು ಹಿಡಿಯಲಿವೆ ಎಂದು ಅಂದಾಜಿಸಲಾಗಿದೆ. ಅರುಣಿಮಾ ಭೇಟಿ ನೀಡುವ ಕೆಲವು ದೇಶಗಳಿಗೆ ವೀಸಾ ಸಿಗುವುದು ಕಷ್ಟಕರವಾಗಿದ್ದರೂ, ವಿದೇಶಿ ಪ್ರವಾಸಿಯಾಗಿ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ.
![22 year old kerala girl set bicycle journey to 22 countries](https://etvbharatimages.akamaized.net/etvbharat/prod-images/whatsapp-image-2022-11-23-at-71232-pm_2311newsroom_1669211360_299.jpeg)
ಅರುಣಿಮಾ ಅವರು ಸಾಹಸ ಪ್ರಯಾಣವನ್ನು ಇಷ್ಟಪಡುವ ಕಾರಣ ಪೋಷಕರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಆಕೆಯ ಈ ಸಾಹಸಗಾಥೆ ಇತರ ಯುವತಿಯರಿಗೆ ಸ್ಫೂರ್ತಿ ಸಿಗಲಿ ಎಂದು ಅವರು ಹೇಳುತ್ತಾರೆ. ಅರುಣಿಮಾ ಈವರೆಗೂ 5 ವಿದೇಶಗಳಿಗೆ ಮತ್ತು ಭಾರತದ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.
![22 year old kerala girl set bicycle journey to 22 countries](https://etvbharatimages.akamaized.net/etvbharat/prod-images/whatsapp-image-2022-11-23-at-71254-pm_2311newsroom_1669211360_144.jpeg)
ಓದಿ: ಮಧ್ಯಪ್ರದೇಶದ ಯುವಕನ ಮುಖ ಸೇರಿ ದೇಹದ ತುಂಬೆಲ್ಲ ದಟ್ಟವಾದ ಕೂದಲು.. ಕಾರಣ?