ಜೈಪುರ್(ರಾಜಸ್ಥಾನ): ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬರೋಬ್ಬರಿ 21 ಐಎಎಸ್, 56 ಐಪಿಎಸ್ ಹಾಗೂ 28 ಐಎಫ್ಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.
ಇದರ ಜತೆಗೆ ಮೂವರು ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ನಿನ್ನೆ ತಡರಾತ್ರಿ ಈ ಆದೇಶ ಗೆಹ್ಲೋಟ್ ಸರ್ಕಾರದಿಂದ ಹೊರ ಬಿದ್ದಿದೆ. ಜಿಲ್ಲಾಧಿಕಾರಿಗಳಾದ ಚುರು, ಬಾರನ್ ಮತ್ತು ಜಲಾವರ್ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿಗಳು. ಇದರ ಜತೆಗೆ ಎಡಿಜಿ ನಿನಾ ಸಿಂಗ್ ಹಾಗೂ ಗೋವಿಂದ್ ಗುಪ್ತಾ, ಐಜಿಗಳಾದ ಬಿನಿತಾ ಠಾಕೂರ್, ಸಚಿನ್ ಮಿತಲ್, ಸಂಜೀಬ್ ಕುಮಾರ್, ಹವಾ ಸಿಂಗ್ ಹಾಗೂ ಸೇಗತಿರಾ ವರ್ಗಾವಣೆಯಾಗಿದ್ದಾರೆ.
ಉದಯಪುರ್, ಭರತ್ಪುರ್, ಬರಾನ್, ಜೋದಪುರ್ ಗ್ರಾಮೀಣಮ, ಅಜ್ಮೀರ್, ಬಿಕಾನೇರ್, ಹನುಮಘಡ ಸೇರಿದಂತೆ ಅನೇಕ ಜಿಲ್ಲೆಗಳ ಎಸ್ಪಿಗಳು ವರ್ಗಾವಣೆಯಾಗಿದ್ದಾರೆ.