ಹೈದರಾಬಾದ್: 2020ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ(UPSC)ದ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಇದರಲ್ಲಿ ಒಟ್ಟು 761 ಅಭ್ಯರ್ಥಿಗಳು ತೇರ್ಗಡೆಯಾಗಿದ್ದು, 545 ಪುರುಷರು ಹಾಗೂ 216 ಮಹಿಳೆಯರಿದ್ದಾರೆ. ಬಿಹಾರದ 24 ವರ್ಷದ ಶುಭಂ ಕುಮಾರ್ ಮೊದಲ ಸ್ಥಾನ ಪಡೆದುಕೊಳ್ಳುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದು, ಇದರ ಜೊತೆಗೆ 2016ರ ಬ್ಯಾಚ್ನ ಟಾಪರ್ ಟೀನಾ ಡಾಬಿ ಸಹೋದರಿ ಕೂಡ ಪಾಸ್ ಆಗಿದ್ದಾರೆ.
ಟೀನಾ ಡಾಬಿ ಸಹೋದರಿಯಾಗಿರುವ ರಿಯಾ ಡಾಬಿ 2020ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 15ನೇ ಸ್ಥಾನ ಪಡೆದುಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಟೀನಾ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ತಂಗಿ ರಿಯಾ ಡಾಬಿ ಯುಪಿಎಸ್ಸಿ 2020ನೇ ಸಾಲಿನ ಪರೀಕ್ಷೆಯಲ್ಲಿ 15ನೇ ಸ್ಥಾನ ಪಡೆದುಕೊಂಡಿರುವ ವಿಚಾರ ಹಂಚಿಕೊಳ್ಳಲು ಸಂತಸವಾಗುತ್ತದೆ ಎಂದಿದ್ದಾರೆ.
-
I have secured 15th rank in the exam conducted by UPSC. pic.twitter.com/kqMnJ4uzSW
— Ria Dabi (@Ria_dabi) September 24, 2021 " class="align-text-top noRightClick twitterSection" data="
">I have secured 15th rank in the exam conducted by UPSC. pic.twitter.com/kqMnJ4uzSW
— Ria Dabi (@Ria_dabi) September 24, 2021I have secured 15th rank in the exam conducted by UPSC. pic.twitter.com/kqMnJ4uzSW
— Ria Dabi (@Ria_dabi) September 24, 2021
ಟೀನಾ ಹಾಗೂ ರಿಯಾ ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜ್ನಲ್ಲಿ ಅಧ್ಯಯನ ಮಾಡಿದ್ದು, ಇದೀಗ ಅಕ್ಕನ ಹಾದಿಯಲ್ಲೇ ತಂಗಿ ಕೂಡ ದಾಪುಗಾಲು ಇಟ್ಟಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದ ಪೂರ್ವಭಾವಿ ಪರೀಕ್ಷೆಯಲ್ಲಿ ದಾಖಲೆಯ 4,82,770 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ ಕೇವಲ 10,564 ಅಭ್ಯರ್ಥಿಗಳು ಪಾಸ್ ಆಗಿ, ಮುಖ್ಯ ಪರೀಕ್ಷೆ ತೆಗೆದುಕೊಂಡಿದ್ದರು. ಆದರೆ 2,053 ಅಭ್ಯರ್ಥಿಗಳು ಮಾತ್ರ ಸಂದರ್ಶನಕ್ಕೆ ಹಾಜರಾಗಿದ್ದರು.