ETV Bharat / bharat

2002ರ ಗುಜರಾತ್​​ ಗಲಭೆ ಪ್ರಕರಣ: ಮಾಜಿ ಹೆಚ್ಚುವರಿ ಡಿಜಿಪಿ ಶ್ರೀಕುಮಾರ್​ಗೆ ಸಮನ್ಸ್ ಜಾರಿ - ಸುಪ್ರೀಂಕೋರ್ಟ್​ ಝಾಕಿಯಾ ಜಾಫ್ರಿ ಅರ್ಜಿ ವಜಾ

ಗುಜರಾತ್​​ ಗಲಭೆ ಪ್ರಕರಣದಲ್ಲಿ ನರೇಂದ್ರ ಮೋದಿ ಅವರಿಗೆ ಕ್ಲೀನ್​ಚಿಟ್ ಪ್ರಶ್ನಿಸಿ ಜಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಒಂದೇ ದಿನದಲ್ಲೇ ಶ್ರೀಕುಮಾರ್ ಅವರಿಗೆ ಸಮನ್ಸ್ ಜಾರಿಯಾಗಿದೆ.

2002 Gujarat riots case: Ahmedabad Crime Branch summons former Additional DGP RB Sreekumar
ಗುಜರಾತ್​​ ಗಲಭೆ ಪ್ರಕರಣ: ಮಾಜಿ ಹೆಚ್ಚುವರಿ ಡಿಜಿಪಿ ಶ್ರೀಕುಮಾರ್​ಗೆ ಸಮನ್ಸ್ ಜಾರಿ
author img

By

Published : Jun 25, 2022, 7:57 PM IST

ಅಹಮದಾಬಾದ್ (ಗುಜರಾತ್​): 2002ರ ಗುಜರಾತ್​​ನ ಗೋಧ್ರಾ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಹೆಚ್ಚುವರಿ ಡಿಜಿಪಿ ಆರ್.ಬಿ.ಶ್ರೀಕುಮಾರ್ ಅವರಿಗೆ ಅಹಮದಾಬಾದ್ ಕ್ರೈಂ ಬ್ರಾಂಚ್ ಸಮನ್ಸ್ ಜಾರಿ ಮಾಡಿದೆ.

2002ರ ಫೆಬ್ರವರಿ 28ರಂದು ಗೋಧ್ರಾ ರೈಲು ದಹನದ ಒಂದು ದಿನದ ಬಳಿಕ ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ಹಿಂಸಾಚಾರದ ನಡೆದಿತ್ತು. ಇದರಲ್ಲಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿ 68 ಜನರ ಹತ್ಯೆಯಾಗಿತ್ತು.

ಈ ಪ್ರಕರಣದಲ್ಲಿ ಆಗ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಮತ್ತು ಇತರ 63 ಮಂದಿಗೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕ್ಲೀನ್​ಚಿಟ್​ ನೀಡಿತ್ತು. ಈ ಕ್ಲೀನ್ ಚಿಟ್ ನೀಡಿರುವುದನ್ನು ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದರು.

ಇದನ್ನೂ ಓದಿ: ಗುಜರಾತ್​ ಗಲಭೆ 2002: ಎಸ್​ಐಟಿ ಕ್ಲೀನ್​ಚಿಟ್ ಎತ್ತಿಹಿಡಿದ ಸುಪ್ರೀಂ ಕೋರ್ಟ್... ಪಿಎಂ ಮೋದಿಗೆ ರಿಲೀಫ್

ಶುಕ್ರವಾರ ಸುಪ್ರೀಂ ಮೋದಿ ಅವರಿಗೆ ನೀಡಿದ್ದ ಕ್ಲೀನ್​ಚಿಟ್​ಅನ್ನು ಎತ್ತಿಹಿಡಿದು ಜಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿತ್ತು. ಇದಾದ ಒಂದೇ ದಿನದಲ್ಲೇ ಮಾಜಿ ಹೆಚ್ಚುವರಿ ಡಿಜಿಪಿ ಶ್ರೀಕುಮಾರ್ ಅವರಿಗೆ ಕ್ರೈಂ ಬ್ರಾಂಚ್ ಸಮನ್ಸ್ ನೀಡಿದೆ.

ಇದನ್ನೂ ಓದಿ: ತೀಸ್ತಾ ಸೆಟಲ್ವಾಟ್​ರನ್ನು ವಶಕ್ಕೆ ಪಡೆದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.