ETV Bharat / bharat

ಕ್ರಿಪ್ಟೋಕರೆನ್ಸಿ ಹೆಸರಿನಲ್ಲಿ 200 ಕೋಟಿ ಲೂಟಿ...

ಅಮಾಯಕರಿಗೆ ಲಾಭ ಬರುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿ ದುಬೈಗೆ ಪರಾರಿ-150 ದಿನಗಳಲ್ಲಿ ಹೂಡಿಕೆ ಮಾಡಿದ ಹಣ 30 ಪಟ್ಟು ಲಾಭವಾಗುತ್ತದೆ ಎಂದು ನಂಬಿಸಿ ಅಮಯಾಕರ ವಂಚನೆ.

200-crores-of-loot-in-the-name-of-cryptocurrency
ಕ್ರಿಪ್ಟೋಕರೆನ್ಸಿ ಹೆಸರಿನಲ್ಲಿ 200 ಕೋಟಿ ಲೂಟಿ...
author img

By

Published : Jan 3, 2023, 7:06 PM IST

ಹೈದರಾಬಾದ್(ತೆಲಂಗಾಣ): ''ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹಲವು ಪಟ್ಟು ಲಾಭ ಸಿಗುತ್ತದೆ'' ಎಂದು ಹೇಳಿ ಅಮಾಯಕರನ್ನು ವಂಚಿಸಿದ ಪ್ರಕರಣ ಹೈದಾರಬಾದ್​ನಲ್ಲಿ ನಡೆದಿದೆ. ಬೆಂಗಳೂರು ಮೂಲದ ಈ ವಂಚಕರು ‘‘ಮ್ಯಾಕ್ಸ್ ಕ್ರಿಪ್ಟೋ ಟ್ರೇಡಿಂಗ್ ಕಂಪನಿ’’ ಹೆಸರಿನಲ್ಲಿ ಹೈದರಾಬಾದ್​ನ ಹಳೆ ಪಟ್ಟಣ ಹಾಗೂ ಉಪನಗರಗಳಲ್ಲಿ ಸ್ಥಳೀಯ ಮುಖಂಡರ ನೆರವಿನಿಂದ ಕಚೇರಿಗಳನ್ನು ತೆರೆದು ಆನ್‌ಲೈನ್ ಹೂಡಿಕೆ ಮಾಡಿದರೆ 150 ದಿನಗಳಲ್ಲಿ 30 ಪಟ್ಟು ಲಾಭ ಎಂದು ಪ್ರಚಾರ ಮಾಡಿದ್ದಾರೆ.

ತಮ್ಮ ಪ್ರಧಾನ ಕಚೇರಿ ದುಬೈನಲ್ಲಿದೆ ಮತ್ತು ಅಂತಾರಾಷ್ಟ್ರೀಯವಾಗಿ ಕ್ರಿಪ್ಟೋ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದ ಎಂದು ಜನರು ನಂಬುವಂತೆ ಮಾಡಿದ್ದರು. ಇದನ್ನು ನಂಬಿದ ನೂರಾರು ಸಣ್ಣ ವ್ಯಾಪಾರಿಗಳು, ಆಟೋ ಚಾಲಕರು, ಮಧ್ಯಮ ವರ್ಗದ ಕುಟುಂಬದ ಮಹಿಳೆಯರು ಇದಕ್ಕೆ ಸದಸ್ಯರಾಗಿ ಸೇರಿಕೊಂಡರು.

ಮ್ಯಾಕ್ಸ್ ಆಪ್​ನಲ್ಲಿ ಸದಸ್ಯರಿಗೆ ಐಡಿ/ಪಾಸ್ ವರ್ಡ್ ನೀಡಿ ವಹಿವಾಟು ನಡೆಸಲು ವ್ಯವಸ್ಥೆ ಮಾಡಿ. ಲಾಭವಿದೆ ಎಂದು ಸುಳ್ಳು ಮಾಹಿತಿ ತೋರಿಸುತ್ತಿದ್ದರು. ಕೆಲ ದಿನಗಳಿಂದ ಕಚೇರಿ ಮುಚ್ಚಿದ್ದು, ವಂಚಕರು ಸುಮಾರು 200 ಕೋಟಿ ರೂ ವಂಚಿಸಿ ದುಬೈಗೆ ಪರಾರಿಯಾಗಿದ್ದಾರೆ ಎಂದು ಸಂತ್ರಸ್ತರು ನಗರದ ಸಿಸಿಎಸ್ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಡಿಜಿಟಲ್​ ವಹಿವಾಟಿನ ಆನಂದ ಅನುಭವಿಸಬೇಕಾ: ಈ ಸುರಕ್ಷಾ ಸಲಹೆ ಪಾಲಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.