ETV Bharat / bharat

4 ಹುಲಿಗಳ ಪೈಕಿ 2 ಹುಲಿಗಳ ತಲೆಗೆ ಗಾಯವಾಗಿ ಸಾವು: ಮರಣೋತ್ತರ ಪರೀಕ್ಷೆಯ ವರದಿ - ಉತ್ತರ ಪ್ರದೇಶ ನ್ಯೂಸ್​

ಕಳೆದ ಎರಡು ತಿಂಗಳ ಅವಧಿಯಲ್ಲಿ ದುಧ್ವಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾವನ್ನಪ್ಪಿರುವ ನಾಲ್ಕು ಹುಲಿಗಳ ಪೈಕಿ ಎರಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. 2 ಹುಲಿಗಳ ತಲೆಗೆ ಗಾಯವಾಗಿ ಸಾವನಪ್ಪಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

tiger died body
ಹುಲಿ ಮೃತದೇಹ
author img

By

Published : Jun 13, 2023, 7:26 AM IST

ಲಖಿಂಪುರ್ ಖೇರಿ (ಉತ್ತರ ಪ್ರದೇಶ): ಹುಲಿ ಸಾವಿನ ಕುರಿತು ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರದ ಉನ್ನತ ಮಟ್ಟದ ತಂಡ ಕಳೆದ ವಾರ ದುಧ್ವಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿತ್ತು. ಪ್ರಕರಣದಲ್ಲಿ ಯಾವುದೇ ಅವ್ಯವಹಾರ ತಳ್ಳಿಹಾಕಿದೆ. ನಾಲ್ಕರಲ್ಲಿ 2 ಹುಲಿಗಳ ಶವಪರೀಕ್ಷೆ ವರದಿಯನ್ನು ಬಹಿರಂಗಪಡಿಸಿದೆ.

ಕಳೆದ ಎರಡು ತಿಂಗಳ ಅವಧಿಯಲ್ಲಿ ದುಧ್ವಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾವನ್ನಪ್ಪಿರುವ ನಾಲ್ಕು ಹುಲಿಗಳ ಪೈಕಿ ಎರಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. 2 ಹುಲಿಗಳು ತಲೆಗೆ ಗಾಯವಾಗಿದ್ದರಿಂದ ಸಾವನಪ್ಪಿವೆ ಎಂದು ಸೋಮವಾರ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಹುಲಿಯ ತಲೆಗೆ ಆಗಿರುವ ಗಾಯಗಳಲ್ಲಿ ಒಂದು ದೊಡ್ಡ ಪ್ರಾಣಿ ದಾಳಿ ಮಾಡಿದೆ ಎಂದು ಸೂಚಿಸಿದೆ. ಅದು ಆನೆ ಅಥವಾ ಘೇಂಡಾಮೃಗವಾಗಿರಬಹುದು. ಸೊಂಟದ ಹಿಂಭಾಗದಲ್ಲಿ (ಬಲಭಾಗ) ಗೀರು ಗುರುತುಗಳು ಕಂಡು ಬಂದಿವೆ. ಇದು ಪ್ರಾಣಿಗಿಂತ(ಹುಲಿ) ಗಾತ್ರದಲ್ಲಿ ದೊಡ್ಡದಾಗಿದೆ ಎಂದು ಸೂಚಿಸುತ್ತದೆ ಎಂದು ಬರೇಲಿಯ ಐಸಿಎಆರ್ - ಐವಿಆರ್‌ಐನಲ್ಲಿರುವ ವನ್ಯಜೀವಿ ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಉಸ್ತುವಾರಿ ಡಾ.ಎ.ಎಂ.ಪಾವ್ಡೆ ಹೇಳಿದ್ದಾರೆ.

"ಪರೀಕ್ಷೆಯಲ್ಲಿ ಹುಲಿಯ ತೂಕ 210 ಕೆ.ಜಿ ಇರುವುದು ಕಂಡು ಬಂದಿದೆ. ಬಲ ಮೊಣಕೈ ಕೀಲು ಗಾಯಗೊಂಡು ತಿರುಚಿದೆ. ಅದರ ತಲೆಯ ಮೇಲೆ ಗಾಯದ ಗುರುತುಗಳಿವೆ ಮತ್ತು ಅದು ನಜ್ಜುಗುಜ್ಜಾಗಿದೆ ಎಂದು ತೋರುತ್ತದೆ. ಅದರ ದೇಹದ ಮೇಲೆ ಕೆಲವು ಗೀರುಗಳಿವೆ" ಎಂದು ಪಾವ್ಡೆ ಹೇಳಿದರು. ಹುಲಿಯ ಯಕೃತ್ತಿಗೂ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತ್ತೊಂದು ಹುಲಿಯ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕೂಡ ಅದರ ತಲೆಗೆ ಗಾಯವಾಗಿರುವುದು ಕಂಡು ಬಂದಿದೆ ಎಂದು ಪಾವ್ಡೆ ಹೇಳಿದರು. ಹುಲಿಯ ದೇಹ, ಅದರ ಕರುಳು ಮತ್ತು ತಲೆಯ ಭಾಗದಲ್ಲಿ ಹುಳುಗಳು ತುಂಬಿವೆ. ಇದು ಆರೋಗ್ಯವಾಗಿತ್ತು. ಆದರೆ ನಾಲ್ಕೈದು ದಿನಗಳ ಹಿಂದೆ ಗಾಯಗಳಿಗೆ ತುತ್ತಾಯಿತು. ಅದರ ದೇಹದಲ್ಲಿ ನೀರಿನ ತೀವ್ರ ಕೊರತೆಯೂ ಇತ್ತು. ಅದರ ಶ್ವಾಸಕೋಶ ಮತ್ತು ಯಕೃತ್ತಿನಲ್ಲಿ ರಕ್ತ ಸಂಗ್ರಹವಾಗಿದೆ. ಯಕೃತ್ತಿನೊಳಗೆ ಮೊನಚಾದ ಕೊಂಬಿನ ಚುಚ್ಚುವಿಕೆಯ ಪುರಾವೆ ಕಂಡು ಬಂದಿವೆ. ಯಕೃತ್ತು ದೊಡ್ಡದಾಗಿದೆ. ಇದರಿಂದ ಅದಕ್ಕೆ ಓಡಲು ಸಾಧ್ಯವಾಗಲಿಲ್ಲ. ಅದು ವಿಷಕಾರಿ ಮಾಂಸವನ್ನು ಸೇವಿಸಿದ ಸಾಧ್ಯತೆಯಿದೆ" ಎಂದು ಅವರು ಹೇಳಿದ್ದಾರೆ.

3ನೇ ಹುಲಿಯ ಮರಣೋತ್ತರ ಪರೀಕ್ಷೆ ಸಾಧ್ಯವಾಗಿಲ್ಲ. ಏಕೆಂದರೆ ಅದು ಸಂಪೂರ್ಣವಾಗಿ ಕೊಳೆತುಹೋಗಿದೆ. ಅದರ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ ಎಂದು ಪ್ರಧಾನ ವಿಜ್ಞಾನಿ ಹೇಳಿದರು. 4ನೇ ಹುಲಿಯ ಮರಣೋತ್ತರ ಪರೀಕ್ಷೆಯನ್ನು ಲಖೀಂಪುರ ಖೇರಿಯಲ್ಲಿ ದಯಾ ಶಂಕರ್ ನಡೆಸಿದ್ದರು. ಅವರು ಅಂಗಾಂಶಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ ಮತ್ತು ಅವುಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಪಾವ್ಡೆ ಹೇಳಿದರು.

ಹುಲಿಗಳ ಸಾವಿನ ಬಗ್ಗೆ ಸಿಎಂ ತೀವ್ರ ಕಳವಳ: ಇದಕ್ಕೂ ಮುನ್ನ ಶುಕ್ರವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಾವಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ತನಿಖೆಗೆ ಆದೇಶಿಸಿದ್ದರು. ದುಧ್ವಾ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಹೇಳಿದಂತೆ ವಿವಿಧ ಕಾರಣಗಳಿಂದ ಏಪ್ರಿಲ್ 21 ರಿಂದ ನಾಲ್ಕು ಹುಲಿಗಳು ಸಾವನ್ನಪ್ಪಿವೆ.

ಹುಲಿಗಳು ಸಾವಿಗೀಡಾದ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ದುಧ್ವಾ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಅರಣ್ಯ ಸಚಿವರು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಇತರ ಹಿರಿಯ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದರು. ಹುಲಿಗಳ ಸಾವಿನ ಹಿಂದಿನ ಕಾರಣಗಳ ವಿವರವಾದ ವರದಿಯನ್ನು ಆದಿತ್ಯನಾಥ್ ಕೇಳಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಿಲಿಕುಳದಲ್ಲಿ ಹುಲಿಗಳ ಕಾಳಗ: 15 ವರ್ಷದ ಹೆಣ್ಣು ಹುಲಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.