ಬನಿಹಾಲ್/ಜಮ್ಮು: ಭಾರಿ ಹಿಮಪಾತ ಮತ್ತು ಜಾರು ಪರಿಸ್ಥಿತಿ ತಪ್ಪಿಸುವ ಸಲುವಾಗಿ ನಿರ್ಮಾಣವಾಗಿರುವ ಬನಿಹಾಲ್-ಖಾಜಿಗುಂಡ್ ಸುರಂಗದಲ್ಲಿ ವಾಹನ ಸಂಚಾರದ ಮೊದಲ ಪ್ರಯೋಗ ಯಶಸ್ವಿಯಾಗಿದೆ. ಕೇವಲ 2 ಗಂಟೆಯ ಅವಧಿಯಲ್ಲಿ ಈ ನಗರಗಳನ್ನು ಹೆದ್ದಾರಿಯಲ್ಲಿ ತಲುಪಬಹುದಾಗಿದೆ. ಜಮ್ಮು ಮತ್ತು ಶ್ರೀನಗರ ನಡುವಿನ 270 ಕಿಲೋ ಮೀಟರ್ ದೂರ ಕ್ರಮಿಸಲು 4 ಪಥದ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗುತ್ತಿದೆ.
10 ವರ್ಷಗಳಲ್ಲಿ 2,100 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾದ 8.5 ಕಿ.ಮೀ ಉದ್ದದ ಸುರಂಗವು ಪ್ರಸ್ತುತ ಪರೀಕ್ಷೆ ಮತ್ತು ಕಾರ್ಯಾರಂಭದ ಪ್ರಕ್ರಿಯೆಯ ಮೂಲಕ ಸಾಗುತ್ತಿದೆ. ಮುಂಬರುವ ದಿನಗಳಲ್ಲಿ ಸುರಂಗ ಕಾರ್ಯರೂಪಕ್ಕೆ ಬರಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಹಿಮದಿಂದ ಅಡಚಣೆಯನ್ನು ಉಂಟಾಗುತ್ತಿತ್ತು. ಇದನ್ನು ತಪ್ಪಿಸುವ ಸಲುವಾಗಿ ಅವಶ್ಯಕತೆ ಇರುವ ಕಡೆ ಸುರಂಗ ಮತ್ತು ಎರಡೂ ಕಡೆಯಿಂದ ಮೊದಲ ಟ್ರಯಲ್ ರನ್ ನಿನ್ನೆ ಸಂಜೆ 4 ರಿಂದ ಸಂಜೆ 6 ರವರೆಗೆ ಯಶಸ್ವಿಯಾಗಿ ನಡೆಸಲಾಯಿತು ಎಂದು ನವಯುಗ ಇಂಜಿನಿಯರಿಂಗ್ ಕಂಪನಿಯ ಮುಖ್ಯ ವ್ಯವಸ್ಥಾಪಕ ಮುನೀಬ್ ತಕ್ ತಿಳಿಸಿದ್ದಾರೆ. 2011ರ ಜೂನ್‌ನಲ್ಲಿ ಸುರಂಗದ ಕೆಲಸ ಪ್ರಾರಂಭವಾಗಿತ್ತು.
ಇದನ್ನೂ ಓದಿ:ಕುಲಭೂಷಣ್ ಜಾಧವ್ ಸಂಬಂಧ ಮಸೂದೆಯಲ್ಲಿನ ನ್ಯೂನತೆ ಸರಿಪಡಿಸಿ; ಪಾಕ್‌ಗೆ ಭಾರತ ತಾಕೀತು
ಸುರಂಗದ ಕಾರ್ಯಾಚರಣೆಯು ಜಮ್ಮು ಪ್ರಾಂತ್ಯದ ಬನಿಹಾಲ್ ಮತ್ತು ದಕ್ಷಿಣ ಕಾಶ್ಮೀರದ ಖಾಜಿಗುಂಡ್ ನಡುವಿನ 16 ಕಿ.ಮೀ ದೂರವನ್ನು ಯಾವುದೇ ಅಡೆತಡೆಗಳು ಇಲ್ಲದೇ ತಲುಪಬಹುದಾಗಿದೆ. ಏಕೆಂದರೆ ಎರಡೂ ಕಡೆಯಿಂದ ಸಂಚಾರ ಸುಗಮವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿಯ ಸಂಚಾರ ಅಧೀಕ್ಷಕ ಶೆಮ್ಶರ್ ಸಿಂಗ್ ಹೇಳಿದ್ದಾರೆ.
ಟ್ರಯಲ್ ರನ್ ಪರ್ಯಾಯ ದಿನಗಳಲ್ಲಿ ಮುಂದುವರಿಯುತ್ತದೆ ಮತ್ತು ಮುಂದುವರೆದಿರುವ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡದೇ ಸಮಯವನ್ನು ವಿಸ್ತರಿಸಬಹುದು ಎಂದು ನವಯುಗ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 6 ರಂದು, ವಿದ್ಯುತ್ ವ್ಯವಸ್ಥೆ ಸೇರಿದಂತೆ ಅಗತ್ಯವಿರುವ ಎಲ್ಲಾ ಉಪಕರಣಗಳನ್ನು ಅಳವಡಿಸಿದ ನಂತರ ಕಂಪನಿಯು ಪರೀಕ್ಷಾ ಆಯೋಗದ ಪ್ರಕ್ರಿಯೆಯಲ್ಲಿ ತೊಡಗಿದೆ ಎಂದು ತಕ್ ಹೇಳಿದ್ದಾರೆ.
ಇದನ್ನೂ ಓದಿ: ಆಕ್ರಮಣಕಾರಿ ಕೊಹ್ಲಿ vs ತಾಳ್ಮೆಯ ವಿಲಿಯಮ್ಸನ್ ನಡುವೆ ಕಾದಾಟ.. ಯಾರ ಪಾಲಾಗುತ್ತೆ ಚೊಚ್ಚಲ WTC ಟ್ರೋಫಿ?
ಸುರಂಗದ ಎರಡೂ ಟ್ಯೂಬ್‌ಗಳಲ್ಲಿ 126 ಜೆಟ್ ಫ್ಯಾನ್‌ಗಳು, 234 ಆಧುನಿಕ ಸಿಸಿಟಿವಿ ಕ್ಯಾಮೆರಾಗಳು ಮತ್ತು ಅಗ್ನಿಶಾಮಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪ್ರತಿ 500 ಮೀಟರ್ ನಂತರ ಎರಡು ಟ್ಯೂಬ್‌ಗಳ ನಡುವೆ ಕಾರಿಡಾರ್ ನಿರ್ಮಿಸಲಾಗಿದ್ದು, ಎರಡೂ ಟ್ಯೂಬ್‌ಗಳಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ಇದನ್ನು ಬಳಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.