ETV Bharat / bharat

Double Murder Case: ಆರ್​ಜೆಡಿ ಮಾಜಿ ಸಂಸದ ಪ್ರಭುನಾಥ್ ಸಿಂಗ್ ಅಪರಾಧಿ; ಸುಪ್ರೀಂ ಕೋರ್ಟ್​ ತೀರ್ಪು

RJD Leader Prabhunath Singh convicted: ಜೋಡಿ ಕೊಲೆ ಪ್ರಕರಣದಲ್ಲಿ ಮಾಜಿ ಸಂಸದ ಹಾಗೂ ಆರ್​ಜೆಡಿ ನಾಯಕ ಪ್ರಭುನಾಥ್ ಸಿಂಗ್ ದೋಷಿ ಎಂದು ಸುಪ್ರೀಂ ಕೋರ್ಟ್​ ತೀರ್ಪು ನೀಡಿದೆ.

1995 double murder case SC convicts exRJD Lok Sabha MP

author img

By

Published : Aug 18, 2023, 4:45 PM IST

ನವದೆಹಲಿ : 1995 ರಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಮುಖಂಡ ಮತ್ತು ಮಾಜಿ ಸಂಸದ ಪ್ರಭುನಾಥ್ ಸಿಂಗ್ ಅಪರಾಧಿ ಎಂದು ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ತೀರ್ಪು ನೀಡಿದೆ. ಸಿಂಗ್ ಅವರನ್ನು ಖುಲಾಸೆಗೊಳಿಸಿದ ಪಾಟ್ನಾ ಹೈಕೋರ್ಟ್ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿತು. ಜೋಡಿ ಕೊಲೆ ಪ್ರಕರಣದಲ್ಲಿ ಪ್ರಭುನಾಥ್ ಸಿಂಗ್ ದೋಷಿ ಎಂದು ತೀರ್ಪು ನೀಡಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎ.ಎಸ್. ಓಕಾ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ನ್ಯಾಯಪೀಠ, ರಾಜೇಂದ್ರ ರಾಯ್ ಮತ್ತು ದರೋಗಾ ರಾಯ್ ಅವರನ್ನು ಮಾರ್ಚ್ 1995 ರಲ್ಲಿ ಆರ್​ಜೆಡಿ ನಾಯಕ ಪ್ರಭುನಾಥ್ ಸಿಂಗ್ ಕೊಲೆ ಮಾಡಿದ್ದಾನೆ ಎಂಬುದನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದೆ.

"ದರೋಗಾ ರಾಯ್ ಮತ್ತು ರಾಜೇಂದ್ರ ರಾಯ್ ಅವರ ಹತ್ಯೆಗೆ ಸಂಬಂಧಿಸಿದಂತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರತಿವಾದಿ ಸಂಖ್ಯೆ 2 ಆಗಿರುವ ಪ್ರಭುನಾಥ್ ಸಿಂಗ್ ಅವರನ್ನು ನಿರ್ದೋಷಿ ಎಂದು ಪಾಟ್ನಾ ಹೈಕೋರ್ಟ್ ನೀಡಿದ ಆದೇಶವನ್ನು ನಾವು ರದ್ದುಪಡಿಸಿದ್ದೇವೆ" ಎಂದು ನ್ಯಾಯಮೂರ್ತಿ ನಾಥ್ ನ್ಯಾಯಾಲಯದ ತೀರ್ಪಿನಲ್ಲಿ ತಿಳಿಸಿದ್ದಾರೆ. "ನಾವು ಗೃಹ ಕಾರ್ಯದರ್ಶಿಗೆ ನಿರ್ದೇಶನ ನೀಡುತ್ತೇವೆ. ಬಿಹಾರ ಮತ್ತು ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಪ್ರಭುನಾಥ್ ಸಿಂಗ್ ಅವರನ್ನು ಬಂಧಿಸಿ ಮುಂದಿನ ವಿಚಾರಣೆಯ ದಿನಾಂಕದಂದು ಅವರನ್ನು ಕಸ್ಟಡಿಗೆ ತೆಗೆದುಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು" ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಸಿಂಗ್ ಅವರ ಸಲಹೆಯಂತೆ ಮತ ಚಲಾಯಿಸದ ಕಾರಣ ಇಬ್ಬರನ್ನು ಛಾಪ್ರಾದ ಮತಗಟ್ಟೆಯ ಬಳಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ. ಸಾಕ್ಷಿಗಳನ್ನು ಬೆದರಿಸಲಾಗುತ್ತಿದೆ ಮತ್ತು ಒತ್ತಾಯಿಸಲಾಗುತ್ತಿದೆ ಎಂದು ಮೃತರ ಕುಟುಂಬ ಸದಸ್ಯರು ದೂರಿದ ನಂತರ ಪ್ರಕರಣವನ್ನು ಛಾಪ್ರಾದಿಂದ ಪಾಟ್ನಾಕ್ಕೆ ಸ್ಥಳಾಂತರಿಸಲಾಯಿತು. ಡಿಸೆಂಬರ್ 2008 ರಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪಾಟ್ನಾ ನ್ಯಾಯಾಲಯವು ಪ್ರಭುನಾಥ್ ಸಿಂಗ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿತ್ತು. 2012ರಲ್ಲಿ ಪಾಟ್ನಾ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿದ ತೀರ್ಪನ್ನು ಎತ್ತಿ ಹಿಡಿದಿತ್ತು.

ಆದರೆ ರಾಜೇಂದ್ರ ರಾಯ್​ ಅವರ ಸಹೋದರ ಪಾಟ್ನಾ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಪ್ರಸ್ತುತ, ಸಿಂಗ್ ಮತ್ತೊಂದು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. 1995ರಲ್ಲಿ ನಡೆದ ಶಾಸಕ ಅಶೋಕ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಸಿಂಗ್ ದೋಷಿ ಎಂದು ವಿಚಾರಣಾ ನ್ಯಾಯಾಲಯ 2017ರಲ್ಲಿ ತೀರ್ಪು ನೀಡಿತ್ತು. 1995 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಶೋಕ್ ಸಿಂಗ್ ಎಂಬುವರು ಪ್ರಭುನಾಥ್ ಸಿಂಗ್ ಅವರನ್ನು ಸೋಲಿಸಿದ್ದರು. ಚುನಾವಣಾ ಫಲಿತಾಂಶ ಬಂದ 90 ದಿನಗಳೊಳಗೆ ತಮ್ಮನ್ನು ಕೊಲ್ಲುವುದಾಗಿ ಪ್ರಭುನಾಥ್ ಸಿಂಗ್ ಅವರಿಂದ ಅಶೋಕ್ ಸಿಂಗ್​ ಅವರಿಗೆ ಬೆದರಿಕೆ ಹಾಕಲಾಗಿತ್ತು.

ಇದನ್ನೂ ಓದಿ : RBI: ಸಾಲದ ದಂಡ ಶುಲ್ಕಕ್ಕೆ ಬಡ್ಡಿ ವಿಧಿಸುವಂತಿಲ್ಲ; ಆರ್​ಬಿಐ ಹೊಸ ಮಾರ್ಗಸೂಚಿ ಜ.1 ರಿಂದ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.