ಕೋಯಿಕ್ಕೋಡ್ (ಕೇರಳ): 404 ಮೀಟರ್ ಉದ್ದದ ಕ್ಯಾನ್ವಾಸ್ನಲ್ಲಿ ಕಾರ್ಟೂನ್ಗಳನ್ನು ಚಿತ್ರಿಸುವ ಮೂಲಕ ಕೇರಳದ ಕೋಯಿಕ್ಕೋಡ್ನ ರೋಶ್ನಾ (19) ಎಂಬ ಯುವತಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಪ್ರವೇಶಿಸಿದ್ದಾರೆ. ಈ ಕಾರ್ಟೂನ್ ಇದೀಗ ವಿಶ್ವದ ಅತಿ ಉದ್ದದ ಕಾರ್ಟೂನ್ ಆಗಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯಳು ಎನಿಸಿಕೊಂಡಿದ್ದಾರೆ.
2015 ರಲ್ಲಿ ರೋಶ್ನಾ ವಿಶ್ವದ ಅತಿದೊಡ್ಡ ಚುನಾವಣಾ ಪೋಸ್ಟರ್‌ಗಾಗಿ ಗಿನ್ನೆಸ್ ದಾಖಲೆ ನಿರ್ಮಿಸಲು ಪ್ರಯತ್ನಿಸಿ ವಿಫಲವಾಗಿದ್ದರು. ಕೊನೆಗೂ ಕಾರ್ಟೂನ್ ಮೂಲಕ ಗಿನ್ನೆಸ್ ದಾಖಲೆ ಬರೆದಿರುವುದು ಸಂತೋಷವಾಗಿದೆ. ಇದನ್ನು ಬಿಡಿಸಲು ನನಗೆ 20 ದಿನಗಳು ಬೇಕಾಯಿತು ಎಂದು ರೋಶ್ನಾ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: Guinness World Records: ಅಮೆರಿಕಾದ ಈಕೆ ವಿಶ್ವದಲ್ಲೇ ಅತ್ಯಂತ ಅಗಲವಾದ ಬಾಯಿ ಹೊಂದಿರುವ ಮಹಿಳೆ
ಪ್ರಸಿದ್ಧ ಕಾರ್ಟೂನಿಸ್ಟ್ ಎಂ ದಿಲೀಪ್ ಅವರ ಮಗಳಾಗಿರುವ ರೋಶ್ನಾ ವ್ಯಂಗ್ಯಚಿತ್ರದಲ್ಲಿ ಪರಿಣಿತೆ ಹೊಂದಿದ್ದಾಳೆ. ಈ ಹಿಂದೆ ದುಬೈನಲ್ಲಿ ನಡೆದ 'ಗ್ಲೋಬಲ್ ವಿಲೇಜ್ ಸೀಸನ್ -25' ರಲ್ಲಿ ಕೂಡ ರೋಶ್ನಾ ಪ್ರಶಸ್ತಿ ಗೆದ್ದಿದ್ದರು. Roch Art ಹೆಸರಿನ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಕಾರ್ಟೂನ್ ತರಗತಿಗಳನ್ನು ನಡೆಸುತ್ತಾರೆ.