ಬೆಲ್ಲಂಕೊಂಡ(ತೆಲಂಗಾಣ): ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತನ ಒಂದು ಎಕರೆ ಜಮೀನಿನಲ್ಲೇ ಬರೋಬ್ಬರಿ 19 ವಿದ್ಯುತ್ ಕಂಬಗಳು ನಿರ್ಮಾಣಗೊಂಡಿದ್ದು, ಇದರಿಂದ ಸಂಕಷ್ಟಕ್ಕೊಳಗಾಗಿದ್ದಾನೆ.
ತೆಲಂಗಾಣದ ಬೆಲ್ಲಂಕೊಂಡ ಮಲ್ಲಾರೆಡ್ಡಿ ಉಳಿಮೆ ಮಾಡಲು ಕೇವಲ ಒಂದು ಎಕರೆ ಜಮೀನು ಹೊಂದಿದ್ದಾರೆ. ವಿದ್ಯುತ್ ಉಪಕೇಂದ್ರದ ಪಕ್ಕದಲ್ಲೇ ಜಮೀನು ಇರುವುದರಿಂದ ಇಷ್ಟೊಂದು ವಿದ್ಯುತ್ ಕಂಬ ನಿರ್ಮಾಣ ಮಾಡಲಾಗಿದೆ. ಕಂಬ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ನಡೆಸಿಲ್ಲ ಎಂದು ರೈತ ಆಕ್ರೋಶ ಹೊರಹಾಕಿದ್ದಾನೆ.
ಜಮೀನಿನಲ್ಲಿ ಇಷ್ಟೊಂದು ವಿದ್ಯುತ್ ಕಂಬ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳೊಂದಿಗೆ ರೈತ ಜಗಳವಾಡಿದ್ದಾರೆ. ಆದರೆ, ಇದರಿಂದ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ.
ಇದನ್ನೂ ಓದಿರಿ: ಮಾರ್ಚ್ ಕೊನೆ ವಾರದಿಂದ IPL ಹಬ್ಬ.. ಭಾರತದಲ್ಲೇ ಟೂರ್ನಿ ಬಹುತೇಕ ಖಚಿತ ಎಂದ ಜಯ್ ಶಾ
ಎಕರೆ ಜಮೀನಿನಲ್ಲಿ ಮಲ್ಲಾರೆಡ್ಡಿ ಪುತ್ರ ರಾಘವರೆಡ್ಡಿ ಭತ್ತದ ಕೃಷಿ ಮಾಡ್ತಿದ್ದು, ಹೊಲದಲ್ಲಿ ಟ್ರ್ಯಾಕ್ಟರ್ನಿಂದ ಉಳುಮೆ ಮಾಡುವ ಸಂದರ್ಭದಲ್ಲಿ ಕಂಬಗಳು ಟ್ರ್ಯಾಕ್ಟರ್ಗೆ ತಾಗುವ ಭಯದಿಂದಲೇ ಕೆಲಸ ಮಾಡಬೇಕಾಗುತ್ತದೆ. ಗದ್ದೆ ಕೆಲಸ ಮಾಡುವಾಗ ಕರೆಂಟ್ ಶಾಕ್ನಂತಹ ಅವಘಡ ಸಂಭವಿಸಿದ್ರೆ ಏನು ಮಾಡುವುದು? ಇದಕ್ಕೆ ಯಾರು ಹೊಣೆ ಎಂಬ ಭಯದಿಂದ ಕೆಲಸ ಮಾಡಲು ಯಾರೂ ಸಹ ಇಲ್ಲಿಗೆ ಬರಲ್ಲ ಎಂದು ರಾಘವರೆಡ್ಡಿ ತಿಳಿಸಿದ್ದಾನೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ