ETV Bharat / bharat

ಯುಕೆಯಿಂದ ಕೇರಳಕ್ಕೆ ಹಿಂದಿರುಗಿದ 18 ಮಂದಿಗೆ ಸೋಂಕು - ಹೊಸ ರೂಪಾಂತರ ಕೊರೊನಾ

ಇದುವರೆಗೆ ಯುಕೆಯಿಂದ ಹಿಂದಿರುಗಿದ 18 ಮಂದಿಗೆ ಕೋವಿಡ್​ ಸೋಂಕು ದೃಢಪಟ್ಟಿದೆ. ವೈರಸ್​ನ ಹೊಸ ರೂಪಾಂತರ ಹೊರಬಂದ ಬಳಿಕ ಯುಕೆಯಿಂದ ಹಿಂತಿರುಗಿದವರನ್ನು ಸಂಪರ್ಕಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಸಚಿವೆ ಕೆ. ಕೆ. ಶೈಲಾಜಾ ಹೇಳಿದ್ದಾರೆ.

18 UK returnees to Kerala test positive
ಯುಕೆಯಿಂದ ಕೇರಳಕ್ಕೆ ಹಿಂದಿರುಗಿದ 18 ಮಂದಿಗೆ ಕೋವಿಡ್​ ಸೋಂಕು
author img

By

Published : Dec 29, 2020, 4:21 PM IST

ತಿರುವನಂತಪುರಂ: ಈವರೆಗೆ ಯುಕೆಯಿಂದ ಹಿಂದಿರುಗಿದ 18 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವೆ ಕೆ. ಕೆ. ಶೈಲಾಜಾ ಮಂಗಳವಾರ ತಿಳಿಸಿದ್ದಾರೆ.

ವೈರಸ್​ನ ಹೊಸ ರೂಪಾಂತರವು ಹೊರಬಂದ ನಂತರ ಯುಕೆಯಿಂದ ಹಿಂತಿರುಗಿದವರನ್ನು ಮನೆಯಲ್ಲಿ ಕ್ಯಾರೆಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಬ್ರಿಟನ್‌ನಿಂದ ಹಿಂದಿರುಗಿದ 8 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಅವರ ಮಾದರಿಗಳನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಗೆ ಜೀನೋಮಿಕ್ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.

ಹೊಸ ಯುಕೆ ರೂಪಾಂತರ SARS-CoV2 ಸ್ಟ್ರೈನ್‌ಗೆ ಭಾರತದಲ್ಲಿ ಆರು ಜನರು ಕಂಡು ಬಂದಿರುವ ಹಿನ್ನೆಲೆಯಲ್ಲಿ, ವೃದ್ಧರು ಮತ್ತು ಕೊಮೊರ್ಬಿಡಿಟಿ ರೋಗಲಕ್ಷಣಗಳಿಂದ ಬಳಲುತ್ತಿರುವವರು ಜಾಗರೂಕರಾಗಿರಬೇಕು ಎಂದು ಸಚಿವರು ಹೇಳಿದರು.

ಕೇರಳದ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಕಣ್ಗಾವಲು ಬಲಪಡಿಸಲಾಗಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ, ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡು ಬರುತ್ತದೆ ಎಂಬ ಆತಂಕವಿತ್ತು. ಆದಾಗ್ಯೂ, ಅದು ಸಂಭವಿಸಲಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರಿಂದ ರಾಜ್ಯದಲ್ಲಿ ಸಾವಿನ ಪ್ರಮಾಣ ಏರಿಕೆಯಾಗಲಿಲ್ಲ ಎಂದು ಸಚಿವರು ಈ ಹಿಂದೆ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.