ಮೇಷ
ಕೆಲಸ ಮತ್ತು ಕುಟುಂಬದ ನಡುವೆ ಪರದಾಡುತ್ತೀರಿ. ಎರಡೂ ಕಡೆಗೂ ನಿಮ್ಮ ಗಮನ ಅಗತ್ಯ. ಸಂಜೆಯನ್ನು ವಿನೋದಕ್ಕಾಗಿ ಮೀಸಲಿರಿಸಿ. ನೀವು ಖ್ಯಾತಿ ಪಡೆಯಲು ಪ್ರಯತ್ನಿಸುತ್ತೀರಿ ಮತ್ತು ನಿಮ್ಮ ಮಹತ್ವಾಕಾಂಕ್ಷೆಯನ್ನು ಸದ್ಯದಲ್ಲೇ ಈಡೇರಿಸಿಕೊಳ್ಳಲಿದ್ದೀರಿ. ನಿಮಗೆ ದೇವರ ಆಶೀರ್ವಾದವಿದೆ.
ವೃಷಭ
ನೀವು ಇಂದು ಬಹುತೇಕ ಸಮಯವನ್ನು ನಿಮ್ಮ ಆರೋಗ್ಯ ಮತ್ತು ಸೌಖ್ಯಕ್ಕಾಗಿ ಕಳೆಯುತ್ತೀರಿ. ವ್ಯಾಪಾರಸಂಬಂಧಿ ಭೋಜನವು ಕೆಲ ಬಾಕಿ ಮಾತುಕತೆಗಳನ್ನು ಯಶಸ್ವಿ ಫಲಿತಾಂಶವಾಗಿ ನೀಡುತ್ತದೆ. ಸಂಶೋಧನೆಯ ಕಾರ್ಯ ನಿರೀಕ್ಷಿದ್ದಕ್ಕಿಂತ ಉತ್ತಮ ಪ್ರಗತಿ ಕಾಣುತ್ತದೆ.
ಮಿಥುನ
ನಿಮ್ಮ ವ್ಯಾಪಾರ ಪ್ರತಿಸ್ಪರ್ಧಿಗಳು ನಿಮ್ಮೊಂದಿಗೆ ಮಾರಾಟ ಮತ್ತು ವ್ಯವಹಾರಗಳಲ್ಲಿ ಸ್ಪರ್ಧಿಸಬಹುದು. ನಿಮ್ಮ ಎಲ್ಲಾ ವ್ಯವಹಾರಗಳಲ್ಲಿ ಕಾಳಜಿ ಮತ್ತು ಎಚ್ಚರವಿರಬೇಕು. ಹಗೆತನ ಪ್ರೀತಿಯ ದಾರಿಯಲ್ಲಿ ಬರಬಹುದು. ಹಿಂದೆ ಪ್ರಣಯದ ಸಂಬಂಧಗಳನ್ನು ಹೊಂದಿರುವವರಿಗೆ ಇಂದು ಹೊಸ ಪ್ರೇಮಕಥೆ ಬರೆಯುವ ಅವಕಾಶ ದೊರೆಯಬಹುದು.
ಕರ್ಕಾಟಕ
ಇಂದು, ಇತರರೊಂದಿಗೆ ವ್ಯವಹರಿಸುವಾಗ ನೀವು ಮುಕ್ತಮನಸ್ಸಿನಿಂದ ಇರಬೇಕು. ಆದರೆ ಇದರ ಅರ್ಥ ಇತರರ ಬಗ್ಗೆ ಮೃದುವಾಗಿರಬೇಕು ಎಂದಲ್ಲ. ದಿನದ ನಂತರದಲ್ಲಿ ನಿಮ್ಮ ವಿಧಾನ ಭಿನ್ನ ಹಾಗೂ ಮೊಂಡುತನದ್ದಾಗಿರುತ್ತದೆ. ಸಂಜೆ ನೀವು ಕುಟುಂಬ ಹಾಗೂ ಮಿತ್ರರ ಜೊತೆಯಲ್ಲಿ ಆನಂದಿಸುತ್ತೀರಿ.
ಸಿಂಹ
ಪ್ರಶಂಸೆಗಳ ಸುರಿಮಳೆಗೆ ಸಜ್ಜಾಗಿರಿ. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ದೀರ್ಘಕಾಲದ ಬಾಕಿ ಈಗ ದೊರೆತಿದೆ. ಇಂದು ನಿಮ್ಮ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳು ನಿಮಗೆ ಸಹಾಯ ಮಾಡಲಿದ್ದಾರೆ.
ಕನ್ಯಾ
ಒಂದೇ ಮನಸ್ಸಿನಿಂದ ಗುರಿಯಿಂದ ನೀವು ನಿಮ್ಮ ಹಣೆಬರಹವನ್ನು ಬದಲಾಯಿಸಿಕೊಂಡು ಮುನ್ನಡೆಯಬಹುದು. ನಿಮ್ಮ ಕಠಿಣ ಪರಿಶ್ರಮದಿಂದ ನೀವು ಗೆಲ್ಲಲಿದ್ದೀರಿ. ನಿಮ್ಮ ಕೌಶಲ್ಯದಿಂದ ಕೆಲಸದ ಸ್ಥಳದಲ್ಲೂ ನೀವು ಯಶಸ್ವಿಯಾಗಲಿದ್ದೀರಿ.
ತುಲಾ
ನೀವು ಇಂದು ಯಶಸ್ವಿಯಾಗಿ ನಿಮ್ಮ ಎಲ್ಲಾ ಬಾಕಿ ಕೆಲಸವನ್ನೂ ಪೂರೈಸುವಲ್ಲಿ ತಲ್ಲೀನರಾಗುತ್ತೀರಿ. ನೀವು ಏನೇ ಕೆಲಸ ಕೈಗೊಂಡರೂ ನಿಮ್ಮ ಅತ್ಯುತ್ತಮ ಸಾಮರ್ಥ್ಯವನ್ನು ಅದಕ್ಕೆ ಹಾಕುತ್ತೀರಿ ಮತ್ತು ಯಶಸ್ವಿಗೊಳಿಸುತ್ತೀರಿ ಮತ್ತು ನಿಮ್ಮ ಕಾರ್ಯವೈಖರಿಗೆ ಶ್ಲಾಘನೆ ದೊರೆಯುತ್ತದೆ.
ವೃಶ್ಚಿಕ
ಇಂದು ಅತ್ಯಂತ ಕಾರ್ಯ ಚಟುವಟಿಕೆಗಳ ಕಾಲವಾಗಿದೆ. ನಿಮ್ಮ ಬಾಸ್ ಹೇಳುವ ಮಾತುಗಳಿಗೆ ಕಿವಿ ಕೊಡಿ. ಹಿರಿಯರಿಂದ ನಿಮಗೆ ಸಹಕಾರ ದೊರೆಯಲಿದೆ. ಕಾನೂನು ಸಮಸ್ಯೆಗಳಿಗೆ ಸಿಲುಕುವುದರಿಂದ ದೂರ ಉಳಿಯಿರಿ.
ಧನು
ನಿಮ್ಮ ಪ್ರೀತಿಪಾತ್ರರ ಬಗ್ಗೆ ಗಮನ ನೀಡಿ. ಮನೆಯಲ್ಲಿ ಸಣ್ಣ ಪಾರ್ಟಿ ಇದ್ದು ಮಿತ್ರರು ಹಾಗೂ ಬಂಧು ಮಿತ್ರರೊಂದಿಗೆ ಭೋಜನ ಸವಿಯಲಿದ್ದೀರಿ. ಇದು ನಿಮ್ಮನ್ನು ಹರಟೆ ಹೊಡೆಯಲು ಉತ್ತೇಜಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ಆತ್ಮೀಯ ಖಾಸಗಿ ಮಾತುಕತೆ ನಿಮಗೆ ಸಂತೋಷ ತರುತ್ತದೆ.
ಮಕರ
ಈ ದಿನ ಸುಸೂತ್ರವಾಗಿರುತ್ತದೆ. ಆದರೆ ನಿಮ್ಮ ಮನಸ್ಸು ಆ ಕ್ಷಣದ ಪ್ರಚೋದನೆಯಂತೆ ಕೆಲಸ ಮಾಡುವುದರಿಂದ ಕೆಲಸ ಕೆಡಬಹುದು. ನಿಮ್ಮ ಕೆಲ ಕನಸುಗಳು ನನಸಾಗಲಿದೆ. ಆದರೆ ಎತ್ತರದಲ್ಲಿ ಹಾರಾಟ ಬೇಡ. ಕೆಲಸದ ಕಡೆ ಗಮನ ನೀಡಿದರೆ ಯಶಸ್ಸು ನಿಮ್ಮದಾಗುತ್ತದೆ.
ಕುಂಭ
ನಿಮ್ಮ ಕನಸಿನ ಮನೆ ಅಥವಾ ಕಾರು ತನ್ನ ದಾರಿಯಲ್ಲಿದೆ. ಇದು ಹೊಸ ಆಸ್ತಿಗಳನ್ನು ಕೊಳ್ಳಲು ಇದು ಅದ್ಭುತ ಸಮಯ ಎಂದು ಗ್ರಹಗತಿಗಳು ಸೂಚಿಸುತ್ತಿವೆ. ಪ್ರಶಾಂತವಾದ ದೇವಾಲಯ ಭೇಟಿಯಿಂದ ನೀವು ಸಂಜೆಯನ್ನು ಕಳೆಯಲಿದ್ದೀರಿ.
ಮೀನ
ಇಂದು ನೀವು ಸಾಕಷ್ಟು ಒತ್ತಡ ಮತ್ತು ಆತಂಕ ಹೊಂದುತ್ತೀರಿ. ಯಾರೊಂದಿಗೋ ನೀವು ಒಪ್ಪಲಾಗದ ಕಾರಣಗಳಿಗೆ ಅಸಮಾಧಾನ ಪಟ್ಟುಕೊಳ್ಳುತ್ತೀರಿ. ನಿಮ್ಮ ವಿಶೇಷ ವ್ಯಕ್ತಿಗೂ ನಿಮ್ಮ ದುಃಖದ ಕಾರಣವನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಧ್ಯಾನ ಮಾಡಿದರೆ ಮತ್ತೆ ನೀವು ಉತ್ಸಾಹದಿಂದ ಇರಬಹುದು.