ETV Bharat / bharat

ಸಾವಿನಲ್ಲೂ ಸಾರ್ಥಕತೆ.. 18 ತಿಂಗಳ ಮಗುವಿನ ಅಂಗಾಂಗ ದಾನ ಮಾಡಿದ ಪೋಷಕರು: ಇಬ್ಬರಿಗೆ ಮರು ಜೀವ

author img

By

Published : Nov 12, 2022, 8:08 PM IST

ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡ ಹರಿಯಾಣದ 18 ತಿಂಗಳ ಮಗುವಿನ ಅಂಗಾಂಗಗಳನ್ನು ಪೋಷಕರು ದಾನ ಮಾಡಿದ್ದು, ಇಬ್ಬರಿಗೆ ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ.

18-month-old-mahira-of-haryana-died-at-aiims-trauma-center-two-people-got-life-from-his-organs
Eಸಾವಿನಲ್ಲೂ ಸಾರ್ಥಕತೆ... 18 ತಿಂಗಳ ಮಗುವಿನ ಅಂಗಾಂಗ ದಾನ ಮಾಡಿದ ಪೋಷಕರು: ಇಬ್ಬರಿಗೆ ಮರು ಜೀವ

ನವದೆಹಲಿ: ಬಾಲ್ಕನಿಯಿಂದ ಕೆಳಗಡೆ ಬಿದ್ದು ಮೃತಪಟ್ಟ 18 ತಿಂಗಳ ಬಾಲಕಿಯ ಅಂಗಾಂಗಗಳನ್ನು ಪೋಷಕರು ದಾನ ಮಾಡಿದ್ದು, ಇದರಿಂದ ಇಬ್ಬರಿಗೆ ಮರು ಜೀವ ನೀಡಿದಂತೆ ಆಗಿದೆ. ಅಲ್ಲದೇ, ಅತಿ ಚಿಕ್ಕ ವಯಸ್ಸಿನಲ್ಲೇ ಮಗು ಮೃತಪಟ್ಟರೂ ಮತ್ತು ಆ ಮಗುವಿನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.

ಹೌದು, ಹರಿಯಾಣದ ಮೇವಾತ್ ಜಿಲ್ಲೆಯ 18 ತಿಂಗಳ ಮಹಿರಾ ಎಂಬ ಮಗು ನವೆಂಬರ್ 6 ರಂದು ಸಂಜೆ ತನ್ನ ಮನೆಯ ಬಾಲ್ಕನಿಯಲ್ಲಿ ಆಟವಾಡುತ್ತಿದ್ದಳು. ಈ ವೇಳೆ, ಏಕಾಏಕಿ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ದೆಹಲಿಯ ಏಮ್ಸ್‌ನ ಟ್ರಾಮಾ ಸೆಂಟರ್‌ಗೆ ಪೋಷಕರು ದಾಖಲಿಸಿದ್ದರು.

ಅಂದಿನಿಂದ ಮಹಿರಾ ಜೀವನ್ಮರಣ ಹೋರಾಟ ನಡೆಸುತ್ತಿದ್ದಳು. ವೈದ್ಯರು ಸಾಕಷ್ಟು ಪ್ರಯತ್ನ ಮಾಡಿದರೂ ಮಹಿರಾಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಕೊನೆಗೆ ನವೆಂಬರ್ 11ರಂದು ಬೆಳಗ್ಗೆ ಬಾಲಕಿಯ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಎಂದು ವೈದ್ಯರು ಘೋಷಿಸಿದ್ದರು.

ಮಗು ಮಹಾರಿ ಸಾವಿನ ಸುದ್ದಿ ಕೇಳಿ ಪೋಷಕರಲ್ಲಿ ದುಃಖದ ಛಾಯೆ ಆವರಿಸಿತ್ತು. ಆದರೂ, ಪೋಷಕರು ತಮ್ಮ ಮಗಳ ಅಂಗಾಂಗಗಳನ್ನು ಇತರ ರೋಗಿಗಳಿಗೆ ದಾನ ನೀಡಲು ನಿರ್ಧರಿಸಿದ್ದರು. ಕಳೆದ ಆರು ತಿಂಗಳಲ್ಲಿ ಏಮ್ಸ್​ನ ಟ್ರಾಮಾ ಸೆಂಟರ್‌ನಲ್ಲಿ ಅಂಗಾಂಗಗಳನ್ನು ದಾನ ಮಾಡಿದ ಮೂರನೇ ಮಗು ಮಹಿರಾ ಆಗಿದ್ದಾಳೆ.

ಯಕೃತ್ತು ಮತ್ತು ಮೂತ್ರಪಿಂಡಗಳ ಕಸಿ: ಮಗು ಮಹಿರಾ ಅಂಗಾಂಗಗಳ ಪೈಕಿ ಯಕೃತ್ತು ಮತ್ತು ಮೂತ್ರಪಿಂಡಗಳನ್ನು ಇಬ್ಬರಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಐಎಲ್‌ಬಿಎಸ್‌ (ಇನ್ಸ್ಟಿಟ್ಯೂಟ್ ಆಫ್ ಲಿವರ್ ಮತ್ತು ಪಿತ್ತರಸ ವಿಜ್ಞಾನ)ದಲ್ಲಿ ಆರು ವರ್ಷದ ರೋಗಿಗೆ ಯಕೃತ್ತು ಕಸಿ ಮಾಡಲಾಗಿದೆ. ಏಮ್ಸ್​ನಲ್ಲಿ 17 ವರ್ಷದ ರೋಗಿಗೆ ಎರಡೂ ಮೂತ್ರಪಿಂಡಗಳನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಇನ್ನು, ನಂತರದ ಬಳಕೆಗಾಗಿ ಕಾರ್ನಿಯಾ, ಎರಡೂ ಕಣ್ಣುಗಳು, ಹೃದಯ ಕವಾಟವನ್ನು ಸಂರಕ್ಷಿಸಲಾಗಿದೆ.

ಇದನ್ನೂ ಓದಿ: ಧಾರವಾಡ: ವಿಚ್ಛೇದನ ಕೋರಿ ಬಂದು ಮತ್ತೆ ಒಂದಾಗಿ ನಡೆದ 17 ದಂಪತಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.