ETV Bharat / bharat

ಮಣಿಪುರ ಹಿಂಸಾಚಾರ: ಕಳೆದ ನಾಲ್ಕು ತಿಂಗಳಲ್ಲಿ 175 ಜನ ಸಾವು, 1,108 ಮಂದಿಗೆ ಗಾಯ - ಮಣಿಪುರದ ಜನಾಂಗೀಯ ಹಿಂಸಾಚಾರ

ಈ ವರ್ಷದ ಮೇ ತಿಂಗಳ ಆರಂಭದಿಂದ ಈವರೆಗೆ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 175 ಜನರು ಸಾವನ್ನಪ್ಪಿದ್ದಾರೆ.

Manipur violence
ಮಣಿಪುರ ಹಿಂಸಾಚಾರ
author img

By ETV Bharat Karnataka Team

Published : Sep 15, 2023, 3:26 PM IST

ಇಂಫಾಲ : ಮಣಿಪುರದಲ್ಲಿ ಇದೇ ವರ್ಷದ ಮೇ ತಿಂಗಳಿಂದ ಆರಂಭವಾದ ಭೀಕರ ಹಿಂಸಾಚಾರದಲ್ಲಿ ಇದುವರೆಗೆ ಕನಿಷ್ಠ 175 ಮಂದಿ ಸಾವನ್ನಪ್ಪಿದ್ದು, 1108 ಮಂದಿ ಗಾಯಗೊಂಡಿದ್ದಾರೆ. 32 ಮಂದಿ ನಾಪತ್ತೆಯಾಗಿದ್ದಾರೆ. ಹಾಗೆಯೇ, ಒಟ್ಟು 4,786 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. 386 ಧಾರ್ಮಿಕ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಜಿಪಿ (Operations) ಐ.ಕೆ.ಮುಯಿವಾ, "ಮಣಿಪುರದಲ್ಲಿ ಉಂಟಾಗಿರುವ ಬುಡಕಟ್ಟು ಸಮುದಾಯಗಳ ಹಿಂಸಾಚಾರವನ್ನು ನಿಯಂತ್ರಿಸಿ ಸಹಜಸ್ಥಿತಿಗೆ ತರಲು ಪೊಲೀಸರು, ಕೇಂದ್ರ ಪಡೆಗಳು ಮತ್ತು ನಾಗರಿಕ ಆಡಳಿತವು ಹಗಲಿರುಳು ಶ್ರಮವಹಿಸಿ ಪ್ರಯತ್ನಿಸುತ್ತಿದೆ. ಈ ಬಗ್ಗೆ ನಾವು ಸಾರ್ವಜನಿಕರಿಗೆ ಭರವಸೆ ನೀಡುತ್ತಿದ್ದೇವೆ. ಕಳೆದುಹೋದ ಶಸ್ತ್ರಾಸ್ತ್ರಗಳ ಪೈಕಿ 1,359 ಬಂದೂಕುಗಳು ಮತ್ತು 15,050 ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಹೇಳಿದರು.

ಹಿಂಸಾಚಾರದ ಸಮಯದಲ್ಲಿ ಗಲಭೆಕೋರರು ಹೆಚ್ಚಿನ ಸಂಖ್ಯೆಯ ಪೊಲೀಸ್ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಅವಧಿಯಲ್ಲಿ ಕನಿಷ್ಠ 5,172 ಅಗ್ನಿಸ್ಪರ್ಶ ಪ್ರಕರಣಗಳನ್ನು ದಾಖಲಿಸಲಾಗಿದೆ. 254 ಚರ್ಚ್‌ಗಳು ಹಾಗೂ 132 ದೇವಾಲಯಗಳು ಸೇರಿದಂತೆ 386 ಧಾರ್ಮಿಕ ಸ್ಥಳಗಳನ್ನು ಧ್ವಂಸಗೊಳಿಸಲಾಗಿದೆ. ಬಿಷ್ಣುಪುರ ಜಿಲ್ಲೆಯ ಫೌಗಕ್‌ಚಾವೊ ಇಖೈಯಿಂದ ಚುರಚಂದಪುರ ಜಿಲ್ಲೆಯ ಕಾಂಗ್‌ವೈ ವರೆಗಿನ ಭದ್ರತಾ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭದ್ರತೆಯನ್ನು ಒದಗಿಸಲಾಗಿದೆ ಎಂದರು.

ಇದನ್ನೂ ಓದಿ : ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ಎರಡು ಗುಂಪುಗಳ ನಡುವೆ ಗುಂಡಿನ ದಾಳಿ.. 72 ಗಂಟೆಯಲ್ಲಿ 8 ಸಾವು, 18 ಜನರಿಗೆ ಗಾಯ!

ಐಜಿಪಿ (ಆಡಳಿತ) ಕೆ.ಜಯಂತ್​ ಮಾತನಾಡಿ, "ಮೃತಪಟ್ಟ 175 ಜನರ ಪೈಕಿ ಒಂಬತ್ತು ಮಂದಿ ಇನ್ನೂ ಪತ್ತೆಯಾಗಿಲ್ಲ. 79 ಮೃತದೇಹಗಳ ಸಂಬಂಧಿಕರನ್ನು ಪತ್ತೆ ಮಾಡಲಾಗಿದ್ದು, 96 ಮೃತದೇಹಗಳು ಹಕ್ಕು ಪಡೆಯದ ಸ್ಥಿತಿಯಲ್ಲಿವೆ. 28 ಮತ್ತು 26 ಶವಗಳನ್ನು ಕ್ರಮವಾಗಿ ಇಂಫಾಲ್ ಮೂಲದ ರಿಮ್ಸ್ (ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಮತ್ತು ಜೆನಿಮ್ಸ್ (ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆ) ನಲ್ಲಿ ಇರಿಸಲಾಗಿದೆ, 42 ದೇಹಗಳು ಚುರಾಚಂದಪುರ ಆಸ್ಪತ್ರೆಯಲ್ಲಿವೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 9,332 ಪ್ರಕರಣಗಳನ್ನು ದಾಖಲಿಸಿ, 325 ಜನರನ್ನು ಬಂಧಿಸಲಾಗಿದೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : Manipur violence : ಮೈತೇಯಿ ಸಮುದಾಯದಿಂದ ಇಂದು ಪ್ರತಿಭಟನಾ ಮೆರವಣಿಗೆ.. ಸಡಿಲಗೊಳಿಸಿದ್ದ ಕರ್ಫ್ಯೂ ಮತ್ತೆ ಟೈಟ್​

ಮಣಿಪುರದಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರವಾಗಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಕಳೆದ ಮೇ 3 ರಿಂದ ಹಿಂಸಾಚಾರ ನಡೆಯುತ್ತಿದೆ. ಮಣಿಪುರದ ಜನಸಂಖ್ಯೆಯ ಸುಮಾರು 53 ಪ್ರತಿಶತದಷ್ಟಿರುವ ಮೈತೇಯಿಗಳು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ, ನಾಗಾ ಮತ್ತು ಕುಕಿಗಳನ್ನು ಒಳಗೊಂಡಿರುವ ಬುಡಕಟ್ಟು ಜನಾಂಗದವರು ಶೇಕಡಾ 40 ರಷ್ಟಿದ್ದಾರೆ, ಇವರು ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ : ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ : ಹೊಂಚು ಹಾಕಿ ಮೂವರು ಆದಿವಾಸಿಗಳ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.